ಚಾಮರಾಜನಗರ(ನ.22): ತಪ್ಪು ಹಾಗೂ ವಿಳಂಬ ಮಾಹಿತಿ ನೀಡಿದ್ದಕ್ಕಾಗಿ ನಗರಸಭೆ ಆಯುಕ್ತ ನಾಗಶೆಟ್ಟಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪಿತ್ತಿದೆ. ಎರಡು ಪ್ರತ್ಯೇಕ ಪ್ರಕರಣ ಕೈಗೆತ್ತಿಕೊಂಡ ಸಾರ್ವಜನಿಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಮಂಜುನಾಥ್‌ ಅವರು, ಎರಡು ಪ್ರಕರಣಗಳಿಗೂ ತಲಾ ಐದೈದು ಸಾವಿರ ದಂಡ ವಿಧಿಸಿದ್ದಾರೆ.

ಕೊಳ್ಳೇಗಾಲ ಪಟ್ಟಣದ ನಗರಸಭೆ ವ್ಯಾಪ್ತಿಯಲ್ಲಿ ಇರುವ ಒಟ್ಟು ಕಲ್ಯಾಣ ಮಂಟಪಗಳ ಸಂಖ್ಯೆಎಷ್ಟುಎಂಬ ಮಾಹಿತಿಗೆ ಒಮ್ಮೆ 8 ಹಾಗೂ ಮತ್ತೊಮ್ಮೆ 12 ಕಲ್ಯಾಣ ಮಂಟಪಗಳಿವೆ ಎಂದು ಅರ್ಜಿದಾರ ಅಣಗಳ್ಳಿ ದಶರಥ್‌ ಅವರಿಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು: ನಕಲಿ IAS ಆಯ್ತು, ಈಗ ನಕಲಿ CBI..!

ಈ ಮಾಹಿತಿ ಸಮರ್ಪಕವಾಗಿ ನೀಡಿದ ಹಿನ್ನೆಲೆ ಆಯೋಗಕ್ಕೆ ದೂರುದಾರರು ಏ.24ರಂದು ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಅ.30ರಂದು ಸುದೀರ್ಘವಾಗಿ ನಡೆದು ಆಯೋಗದ ಸೂಚನೆ ನಡುವೆಯೂ ತಪ್ಪು ಹಾಗೂ ವಿಳಂಬ ಮಾಹಿತಿ ನೀಡಿದ್ದಕ್ಕಾಗಿ ಆಯೋಗವು ಈ ಪ್ರಕರಣದಲ್ಲಿ ಐದು ಸಾವಿರ ದಂಡ ವಿಧಿಸಿದೆ.

ಮತ್ತೊಂದು ಪ್ರಕರಣದಲ್ಲೂ ದಂಡ

ಅದೇ ರೀತಿಯಲ್ಲಿ ಹಳೆ ಅಣಗಳ್ಳಿ ದಶರಥ್‌ ಅವರು ನಗರಸಬೆ ವ್ಯಾಪ್ತಿಯಲ್ಲಿ ಎಷ್ಟುಮಾಂಸದಂಗಡಿಗಳಿವೆ (ಕೋಳಿ, ಕುರಿ, ಹಂದಿ ಸೇರಿದಂತೆ ಎಂದು) ಎಂದು ಮಾಹಿತಿ ಬಯಸಿದ್ದರು. ಆದರೆ ನಗರಸಭೆ ಕೇವಲ 5ಮಾಂಸದಂಗಡಿಗಳಿವೆ ಎಂದು ತಪ್ಪು ತಪ್ಪು ಮಾಹಿತಿ ನೀಡಿದ್ದು ಅಲ್ಲದೆ ಅಯೋಗ ಸ್ಪಷ್ಟವಾಗಿ ಸೆ. 5 ಹಾಗೂ ಜುಲೈ 3ರಂದು ಸಮರ್ಪಕ ಮಾಹಿತಿ ನೀಡಲು ಸೂಚಿಸಿದ್ದರೂ ಮಾಹಿತಿ ನೀಡದೆ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಹಾಗೂ ಯಾವುದೆ ಸಮಜಾಯಿಷಿ ನೀಡದೆ ಮೃದು ಧೋರಣೆ ತಳೆದ ಹಿನ್ನೆಲೆ 5 ಸಾವಿರ ದಂಡ ವಿಧಿಸಲಾಗಿದ್ದು ಪ್ರಕರಣಗಳ ದಂಡವನ್ನು ಸಹಾ ಸರ್ಕಾರ ಲೆಕ್ಕ ಶೀರ್ಷಿಕೆ ಖಾತೆಗೆ ಇವರ ಮಾಸಿಕ ಸಂಬಳದಲ್ಲಿ 2 ಕಂತುಗಳಾಗಿ ಪಡೆಯಲು ಆದೇಶಿಸಲಾಗಿದೆ.

ಒಟ್ಟಾರೆ 2 ಪ್ರಕರಣಗಳಿಂದ ನಗರಸಬೆ ಆಯುಕ್ತರು 10 ಸಾವಿರ ದಂಡ ಪಾವತಿಸಬೇಕಿದ್ದು ನವೆಂಬರ್‌ ಹಾಗೂ ಅಕ್ಟೋಬರ್‌ ಮಾಸಿಕ ವೇತನದಲ್ಲಿ ಕಡಿತ ಮಾಡಿಸಿ ಅಧಿಕೃತ ರಶೀದಿ ಆಯೋಗಕ್ಕೆ ಸಲ್ಲಿಸಲು ನಿರ್ದೇಶಿಸಿ ನ. 29ಕ್ಕೆ ಪ್ರಕರಣ ಮುಂದೂಡಿ ಆಯುಕ್ತರು ಕ್ರಮಕೈಗೊಂಡಿದ್ದಾರೆ.

ನಾನು ಮೊದಲ ಬಾರಿಗೆ ಎಷ್ಟುಕಲ್ಯಾಣ ಮಂಟಪಗಳಿವೆ ಎಂದು ಮಾಹಿತಿ ಕೇಳಿದಾಗ 8 ಎಂದು ನೀಡಿ, ಬಳಿಕ 12 ಎಂದು ತಪ್ಪು ತಪ್ಪಾದ ಮಾಹಿತಿಯನ್ನು ನಗರಸಭೆÜ ನೀಡಿದೆ. ಅದೇ ರೀತಿಯಲ್ಲಿ ಕೊಳ್ಳೇಗಾಲದಲ್ಲಿ ಕೇವಲ 5 ಮಾಂಸದಂಗಡಿಗಳಿವೆ ಎಂದು ಸಹಾ ತಪ್ಪು ಮಾಹಿತಿ ನೀಡಿದ್ದು ಅಲ್ಲದೆ ಮೇಲ್ಮನವಿ ಸಲ್ಲಿಸಿದ ಬಳಿಕವೂ ವಿಳಂಬ ಮಾಹಿತಿ ನೀಡಿದ್ದಕ್ಕಾಗಿ ಆಯೋಗ 2 ಪ್ರಕರಣಗಳಲ್ಲಿ 10 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪಿತ್ತಿದೆ. ಇದು ನನ್ನ ಹೋರಾಟಕ್ಕೆ ಸಂದ ಜಯ ಎಂದು ಹೋರಾಟಗಾರ ದಶರಥ್ ಹೇಳಿದ್ದಾರೆ.

ಅಸಲಿ ಕೆಎಎಸ್‌ ಅಧಿಕಾರಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌!