ಮಂಗಳೂರು(ಡಿ.16): ಸರಿ ಇರುವುದನ್ನು ರಿಪೇರಿ ಮಾಡಲು ಹೊರಡುವ ಪ್ರವೃತ್ತಿಯ ಬಗ್ಗೆ ಲೇಖಕನಿಗೆ ಎಚ್ಚರವಿರಬೇಕು ಎಂದು ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ, ಹಿರಿಯ ಪತ್ರಕರ್ತ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಬಹರೈನ್‌ ಕೊಂಕಣಿ ಕುಟಮ್‌ ವತಿಯಿಂದ ಕೊಂಕಣಿ ಲೇಖಕ ಜೆ.ಎಫ್‌. ಡಿಸೋಜ (ಜೋಕಿಂ ಫೆಡ್ರಿಕ್‌ ಡಿಸೋಜ) ಅವರಿಗೆ ಕೊಂಕಣಿ ಕುಟುಮ್‌ 2019 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

ಮಂಗಳೂರು: ಮೈ ನವಿರೇಳಿಸಿದ ಮಕ್ಕಳ ಸಾಹಸ ಕ್ರೀಡೆ ಪ್ರದರ್ಶನ..!

ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಮೂಲಕ ಜ್ಞಾನವನ್ನು ದಾಟಿಸುವ ಕೆಲಸ ಆಗಬೇಕಾಗಿದೆ. ತಾಂತ್ರಿಕಕತೆ ಎಂದಿಗೂ ನಮ್ಮ ಕ್ರಿಯಾಶೀಲತೆಗೆ ಮಾರಕವಾಗಬಾರದು. ಭಾಷೆಯ ಬೆಳವಣಿಗೆಗೆ ಎಳೆಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದಿದ್ದಾರೆ.

ಆಧುನಿಕತೆ ಜತೆಗೆ ನಮ್ಮನ್ನಾವರಿಸಿರುವ ಕಾಯಿಲೆಗೆ ಸಾಹಿತ್ಯ ಮಾತ್ರ ಪರಿಹಾರ ನೀಡಬಹುದು. ಆದರೆ ಇಂದು ಸುದೀರ್ಘವಾದ ಓದು ನಮ್ಮಿಂದ ಮರೆಯಾಗುತ್ತಿದೆ. ಇದು ಕನ್ನಡಕ್ಕೆ ಮಾತ್ರವಲ್ಲ, ಎಲ್ಲ ಭಾಷೆಗೂ ವಿಸ್ತರಿಸಿದೆ. ಅಪೂರ್ಣವಾದ ಓದು, ನಿಜವಾದ ಓದು ಆಗುವುದಿಲ್ಲ ಎಂದು ಜೋಗಿ ಹೇಳಿದ್ದಾರೆ.

ಹಿರಿಯ ಪತ್ರಕರ್ತ ಜೋಗಿಗೆ "ಅಮ್ಮ ಪ್ರಶಸ್ತಿ" ಪ್ರದಾನ

ಪ್ರಶಸ್ತಿ ಎನ್ನುವುದು ಲೇಖಕನಿಗೆ ಹೊಸ ಅಂಗಿ ತೊಡಿಸಿದ ಹಾಗೆ. ಆದರೆ ಅದೇ ಅಂಗಿಯನ್ನು ಮತ್ತೆ ಒಗೆಯಬೇಕು. ಅದೇ ರೀತಿ ಲೇಖಕ ಸದಾ ಕ್ರಿಯಶೀಲನಾಗಿರಬೇಕು. ಸಮಾಜಕ್ಕೆ ತಾನು ಸಲ್ಲಿಸಬೇಕಾದ ಋುಣದ ಬಗ್ಗೆ ತಿಳಿದಿರಬೇಕು. ಪ್ರಶಸ್ತಿ ತೆಗೆದುಕೊಳ್ಳುವವರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜೆ.ಎಫ್‌. ಡಿಸೋಜ, ಪ್ರಶಸ್ತಿ ನೀಡಿದ ಬಹ್ರೇನ್‌ ಕೊಂಕಣಿ ಕುಟಮ್‌ಗೆ, ತನ್ನನ್ನು ಬೆಂಬಲಿಸಿದ ಓದುಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪಾದುವ ಕಾಲೇಜಿನ ಪ್ರಾಂಶುಪಾಲ ಅಲ್ವಿನ್‌ ಸೆರಾವೊ ಮಾತನಾಡಿ, ಯುನೆಸ್ಕೋ ಸಮೀಕ್ಷೆಯ ಪ್ರಕಾರ ವಿನಾಶದಂಚಿನಲ್ಲಿರುವ ಭಾಷೆಗಳ ಪೈಕಿ ಕೊಂಕಣಿ ಇಲ್ಲ ಎನ್ನುವುದು ಸಂತಸದ ವಿಚಾರ ಎಂದರು. ಭಾಷೆಯ ಹೆಸರಿನ ರಾಜಕಾರಣದ ಭಾಗವಾಗಿ ಭಾಷಾ ಬಹುಸಂಖ್ಯಾತರಿಂದ ಭಾಷಾ ಅಲ್ಪಸಂಖ್ಯಾತರ ಮೇಲೆ ಹೇರುವ ಪ್ರಯತ್ನ ನಡೆಯುತ್ತಾ ಬಂದಿದೆ. ಸರ್ಕಾರಗಳು ಭಾಷಾ ನೀತಿಯ ಮೂಲಕ ಪ್ರಾದೇಶಿಕ ಭಾಷೆಗಳ ಸಂರಕ್ಷಣೆಗೆ ಬದ್ಧವಾಗಿರಬೇಕಾಗಿದೆ. ಯಾಕೆಂದರೆ ಭಾಷೆ ಒಂದು ಸಮುದಾಯದ ಅಸ್ಮಿತತೆ, ಅಸ್ತಿತ್ವದ ಪ್ರತೀಕವಾಗಿದೆ ಎಂದಿದ್ದಾರೆ.

ಸಂಘಟನೆಯ ಬಹ್ರೈನ್‌ ವಿಭಾಗದ ಸಂಚಾಲಕ ಹೆನ್ರಿ ಡಿ. ಅಲ್ಮೆಡಾ, ಮಂಗಳೂರು ವಿಭಾಗದ ಸಂಚಾಲಕ ಅ.ಮೊರಾಸ್‌, ಸಹ ಸಂಚಾಲಕ ಟೈಟಸ್‌ ನರೋನ್ಹಾ, ಲೆಸ್ಲಿ ರೇಗೊ ಇದ್ದರು.