ಹಿರಿಯ ಪತ್ರಕರ್ತ ಜೋಗಿಗೆ "ಅಮ್ಮ ಪ್ರಶಸ್ತಿ" ಪ್ರದಾನ

ಹಿರಿಯ ಪತ್ರಕರ್ತ ಜೋಗಿ ಸೇರಿದಂತೆ ಸುಧಾ ಆಡುಕಳ, ಜಿಎಸ್ ನಾಗರಾಜ್, ಪ್ರಭಾಕರ್ಸಾಥಖೇಡ, ಚನ್ನಪ್ಪ ಕಟ್ಟಿ, ಭುವನ ಹಿರೇಮಠ್ ಅವರಿಗೆ "ಅಮ್ಮ ಪ್ರಶಸ್ತಿ" ಪ್ರಶಸ್ತಿ ಪ್ರದಾನ| ಸೇಡಂನಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ಅಮ್ಮ ಪ್ರಶಸ್ತಿ ಪ್ರಶಸ್ತಿ ಪ್ರದಾನ| ಕಲಬುರಗಿಯ ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ತಮ್ಮ ತಾಯಿಯ ಸವಿನೆನಪಿಗಾಗಿ ರಾಜ್ಯಮಟ್ಟದ ಅಮ್ಮ ಪ್ರಶಸ್ತಿ|

Amma Award to Veteran Journalist Jogi

ಕಲಬುರಗಿ(ನ.27): ಹಿರಿಯ ಪತ್ರಕರ್ತ ಜೋಗಿ ಸೇರಿದಂತೆ ಸುಧಾ ಆಡುಕಳ, ಜಿಎಸ್ ನಾಗರಾಜ್, ಪ್ರಭಾಕರ್ಸಾಥಖೇಡ, ಚನ್ನಪ್ಪ ಕಟ್ಟಿ, ಭುವನ ಹಿರೇಮಠ್ ಅವರಿಗೆ "ಅಮ್ಮ ಪ್ರಶಸ್ತಿ" ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಮಂಗಳವಾರ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ಅಮ್ಮ ಪ್ರಶಸ್ತಿ ಪ್ರಶಸ್ತಿಯನ್ನ ಪ್ರದಾನ ಮಾಡಲಾಗಿದೆ. ಕಲಬುರಗಿಯ ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸವಿನೆನಪಿಗಾಗಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಅಮ್ಮ ಪ್ರಶಸ್ತಿ ಕೊಡಮಾಡಲಾಗುತ್ತದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಾಧಕರಿಗೆ 5 ಸಾವಿರ ರು. ನಗದು ಪುರಸ್ಕಾರ, ನೆನಪಿನ ಕಾಣಿಕೆ ,ಪ್ರಮಾಣಪತ್ರ ಹಾಗೂ ಕಲಬುರಗಿ ಮಣ್ಣಿನ ಸವಿನೆನಪಿಗಾಗಿ 2 ಕೆಜಿ ತೊಗರಿ ಬೇಳೆಯನ್ನು ನೀಡಿ ಸನ್ಮಾನಿಸಲಾಯಿತು.

ಮನೆಯಲ್ಲೆ ಕುಳಿತು ಕಾದಂಬರಿಕಾರ ಜೋಗಿ ಜತೆ ಮಾತಾಡಿ, ಮಿಸ್ ಮಾಡ್ಕೋಬೇಡಿ!

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ಜೋಗಿ ಅವರು, ಅಮ್ಮ ಹೆಸರಿನ ಪ್ರಶಸ್ತಿಯೇ ರೋಚಕವಾಗಿದೆ. ನಾನು ಬೆಂಗಳೂರಿನಲ್ಲಿದ್ದಾಗ ನನ್ನ ಅಮ್ಮ ನನ್ನ ಜೊತೆಯಲ್ಲಿದ್ದರು. ಆಗ ನನ್ನ ಹೆಂಡತಿ ನನ್ನ ಅಮ್ಮನನ್ನ ತನ್ನ ಅಮ್ಮನಂತೆ ನೋಡಿಕೊಂಡಿದ್ದಳು. ಈಗ ನನ್ನ ಮಗಳು ನನ್ನ ಪಾಲಿಗೆ ಅಮ್ಮನಾಗಿದ್ದಾಳೆ ಎಂದು ಅಮ್ಮ ಹೆಸರಿನಲ್ಲಿನ ಶಕ್ತಿ, ಪ್ರೀತಿ ನೆನಪಿಸಿಕೊಂಡರು.

ಚಲನಚಿತ್ರ ಸಂಗೀತ ನಿರ್ದೇಶಕ ವಿ. ಮನೋಹರ ಮಾತನಾಡಿ, ಹೆತ್ತ ತಾಯಿ, ಹೊತ್ತ ನೆಲದ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು ಎಂದರು.

ಕಾರ್ನಾಡ್ ಅರಿಯಲು ಅವರ ಸಾಹಿತ್ಯವೇ ಮಾಧ್ಯಮ: ಜೋಗಿ

ಈ ವೇಳೆ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್, ಗುಲ್ಬರ್ಗ ವಿವಿ ಕುಲಪತಿ ಡಾಕ್ಟರ್ ಪರಿಮಳ ಅಂಬೇಡ್ಕರ್, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು 
 

Latest Videos
Follow Us:
Download App:
  • android
  • ios