ಸಾಹಿತಿ  ಡಾ‌.ಎಸ್.ಬಿ.ಜೋಗೂರು ನಿಧನ/ ಧಾರವಾಡದಲ್ಲಿ ಹೆಸರು ಮಾಡಿದ್ದ ಸಾಹಿತಿ/ ಕನ್ನಡ ಸಾಹಿತ್ಯ ಲೋಕಕ್ಕೆ 70 ಪುಸ್ತಕಗಳ ಕೊಡುಗೆ/

ಧಾರವಾಡ[ಆ. 28] ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಅಧ್ಯಾಪಕರಾಗಿದ್ದ ಸಾಹಿತಿ ಡಾ‌.ಎಸ್.ಬಿ.ಜೋಗೂರು (51) ಬುಧವಾರ ಸಂಜೆ ನಿಧನರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೃತರಿಗೆ ಪತ್ನಿ ಶೀತಲ್, ಮಕ್ಕಳಾದ ಸಹಿಷ್ಣು ಹಾಗೂ ವಿಷ್ಮಯ ಇದ್ದಾರೆ.

ಜೋಗುರ ಅವರು ಅಧ್ಯಾಪಕರಾಗುವ ಮೊದಲು ಪತ್ರಕರ್ತರಾಗಿಯೂ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದರು. "ಬಣ್ಣದ ಹನಿಗಳು" "ನೀನ್ಯಾಕೋ ನಿನ್ನ ಹಂಗ್ಯಾಕೋ" "ಇರದೇ ತೋರುವ ಬಗೆ" ಸೇರಿದಂತೆ ಎಪ್ಪತ್ತ 70ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿಯವರಾಗಿದ್ದ ಜೋಗೂರು ಅವರು ಕಳೆದ ಹಲವು ವರ್ಷಗಳಿಂದ ಧಾರವಾಡದಲ್ಲಿ ನೆಲಸಿ, ಪ್ರಗತಿಪರ ಚಿಂತಕರಾಗಿ ಜನಮಾನಸ ಗೆದ್ದಿದ್ದರು. ಹಲವು ಕ್ರೀಯಾಶಿಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಶಿಕ್ಷಕರಾಗಿದ್ದರು. ಗುರುವಾರ ಬೆಳಿಗ್ಗೆ 11 ಗಂಟೆಗೆ ಹೊಸ ಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.