ಹೆಚ್ಚುವರಿ ಹಣಕೊಟ್ಟು ಪ್ರತಿಷ್ಠಿತ ಹೊಟೇಲ್ ನಲ್ಲಿ ಊಟ ಮಾಡುವವರು  ಈ ಸ್ಟೋರಿಯನ್ನು  ಓದಲೇಬೇಕು

ದಾವಣಗೆರೆ, (ಅ.2): ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ತಿಂಡಿ ಸೇವಿಸಿ 22 ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

ಮಾಜಿ ಸಚಿವ ದಿವಂಗತ ಎಚ್.ಶಿವಪ್ಪ ಅವರ ಕುಟುಂಬಕ್ಕೆ ಸೇರಿದ ಚೇತನಾ ಹೊಟೆಲ್ ನಲ್ಲಿ ಈ ಘಟನೆ ನಡೆದಿದೆ.

ದಾವಣಗೆರೆಯಲ್ಲಿ ಗಾಂಧಿ ಜಯಂತಿ ಮುಗಿಸಿಕೊಂಡು ತಿಂಡಿ ತಿನ್ನಲು ಪ್ರತಿಷ್ಟಿತ ಹೊಟೆಲ್ ಗೆ ಹೋದವರ ಪೈಕಿ ಪೂರಿಯಲ್ಲಿ ಒಬ್ಬರಿಗೆ ಫ್ರೈ ಆದ ಜರಿ ಪತ್ತೆಯಾಗಿದೆ.

ತಿಂಡಿ ಸೇವಿಸಿದ 22 ಜನರು ಸಾಮೂಹಿಕವಾಗಿ ವಾಂತಿ, ಅನೇಕರಿಗೆ ತಲೆ ಸುತ್ತು, ನಿಶ್ಯಕ್ತಿಯಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.