ಈ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಪೂರ್ಣಗೊಂಡು ಆಗಲೇ ಎರಡು ವರ್ಷ ಕಳೆದಿದ್ದು, ಕಾರ್ಯಾರಂಭ ಕೂಡ ಆಗಿದೆ. .20.1 ಕೋಟಿ ವೆಚ್ಚದಲ್ಲಿ 2019ರಲ್ಲಿ ಈ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. 2020ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಕೋವಿಡ್‌ನಿಂದಾಗಿ ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆದಿರಲಿಲ್ಲ.

ಹುಬ್ಬಳ್ಳಿ(ಮಾ.12): ಇಲ್ಲಿನ ‘ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ’ದಲ್ಲಿ ನಿರ್ಮಾಣವಾಗಿರುವ ‘ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌’ನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಭಾನುವಾರ) ಧಾರವಾಡ ಐಐಟಿ ಕಾರ್ಯಕ್ರಮದಲ್ಲೇ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಪ್ಲಾಟ್‌ಫಾರ್ಮ್‌ 1.5 ಕಿ.ಮೀ. ಉದ್ದವಿದೆ. 2020ರಲ್ಲೇ ಇದರ ಕಾಮಗಾರಿ ಪೂರ್ಣಗೊಂಡಿದೆ. ಕೋವಿಡ್‌ ಕಾರಣ ಉದ್ಘಾಟನೆಯಾಗಿರಲಿಲ್ಲ. ಈ ಪ್ಲಾಟ್‌ಫಾರ್ಮ್‌ ಬಳಸಿ ಏಕಕಾಲಕ್ಕೆ ಎರಡು ದಿಕ್ಕಿಗೆ ರೈಲುಗಳು ಸಂಚರಿಸಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯಾಹ್ನ 3.15ಕ್ಕೆ ಹೆಲಿಕಾಪ್ಟರ್‌ ಮೂಲಕ ಧಾರವಾಡ ಐಐಟಿ ನೂತನ ಕ್ಯಾಂಪಸ್‌ಗೆ ಅವರು ಬಂದಿಳಿಯಲಿದ್ದು, ಐಐಟಿಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಈ ಪ್ಲಾಟ್‌ಫಾರಂ ಲೋಕಾರ್ಪಣಾ ಕಾರ್ಯಕ್ರಮ ಕೂಡ ನಡೆಯಲಿದೆ.

ವಿಶ್ವನಾಯಕ ನರೇಂದ್ರ ಮೋದಿಗೆ ಉಡುಗೊರೆ ಕೊಡಲು ಸಿದ್ಧವಾಗಿದೆ ಕಲಘಟಗಿ ತೊಟ್ಟಿಲು!

ಈ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಪೂರ್ಣಗೊಂಡು ಆಗಲೇ ಎರಡು ವರ್ಷ ಕಳೆದಿದ್ದು, ಕಾರ್ಯಾರಂಭ ಕೂಡ ಆಗಿದೆ. .20.1 ಕೋಟಿ ವೆಚ್ಚದಲ್ಲಿ 2019ರಲ್ಲಿ ಈ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. 2020ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಕೋವಿಡ್‌ನಿಂದಾಗಿ ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆದಿರಲಿಲ್ಲ.

ಈ ರೈಲ್ವೆ ನಿಲ್ದಾಣದ 1ನೇ ಪ್ಲಾಟ್‌ಫಾರಂ, 550 ಮೀಟರ್‌ ಉದ್ದವಿತ್ತು. ಇದನ್ನು ವಿಸ್ತರಿಸಿ 10 ಮೀ.ಅಗಲದೊಂದಿಗೆ 1,505 ಮೀಟರ್‌ವರೆಗೆ (1.5 ಕಿ.ಮೀ.) ವಿಸ್ತರಿಸಲಾಗಿದೆ. ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ಫಾರಂ ಆಗಿ ಹೊರಹೊಮ್ಮಿದೆ. ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖಪುರ ನಿಲ್ದಾಣದಲ್ಲಿರುವ 1,366 ಮೀಟರ್‌ (1.36 ಕಿಮೀ) ಉದ್ದದ ಪ್ಲಾಟ್‌ಫಾರ್ಮ್‌ ಅತಿ ಉದ್ದದ ಪ್ಲಾಟ್‌ಫಾರ್ಮ್‌ ಎಂಬ ಖ್ಯಾತಿಗೆ ಒಳಗಾಗಿತ್ತು. ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿಗೆ ಸಂಚರಿಸಲು ಅನುಕೂಲವಾಗುವಂತೆ ಈ ಪ್ಲಾಟ್‌ಫಾರ್ಮ್‌ ವಿನ್ಯಾಸಗೊಳಿಸಲಾಗಿದೆ.