ಹುಬ್ಬಳ್ಳಿ(ಜೂ.06): ನೈಋುತ್ಯ ರೈಲ್ವೆ ಕೇಂದ್ರೀಯ ನಿಲ್ದಾಣವಾದ ಹುಬ್ಬಳ್ಳಿ ವಿಶ್ವದ ‘ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌’ ಎಂಬ ದಾಖಲೆ ಬರೆಯಲು ಸಜ್ಜಾಗುತ್ತಿದೆ. ಚಾಲ್ತಿಯಲ್ಲಿರುವ ಪ್ಲಾಟ್‌ಫಾರ್ಮ್‌ ವಿಸ್ತರಣೆ ಮತ್ತು ಹೆಚ್ಚುವರಿ ಪ್ಲಾಟ್‌ಫಾರ್ಮ್‌ ನಿರ್ಮಾಣ ಕಾಮಗಾರಿ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 

ಈಗಿರುವ ಹುಬ್ಬಳ್ಳಿ ಒಂದನೇ ಪ್ಲಾಟ್‌ಫಾರ್ಮ್ 550 ಮೀಟರ್‌ ಉದ್ದವಿದೆ. ಇದನ್ನು 10 ಮೀ ಅಗಲದಲ್ಲಿ 1,400 ಮೀಟರ್‌ ಉದ್ದಕ್ಕೆ ವಿಸ್ತರಿಸುವ ಕಾಮಗಾರಿ ಸಾಗಿದೆ. ಅಲ್ಲದೆ ಈಗಿನ ತಪಾಸಣಾ ಕ್ಯಾರೇಜ್‌ ಮಾರ್ಗವನ್ನು ಪೂರ್ಣ ಪ್ಲಾಟ್‌ಫಾರ್ಮ್‌ ಆಗಿ ಪರಿವರ್ತನೆ ಮಾಡಲಾಗುವುದು. ಈ ಅತೀ ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಾಣವಾದಲ್ಲಿ 24 ಬೋಗಿಗಳ 2 ರೈಲುಗಳು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಬಹುದಾಗಿದೆ.

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಪ್ರಸ್ತುತ ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿಯಿರುವ ಉತ್ತರ ಪ್ರದೇಶದ ಗೋರಖ್‌ಪುರ 1,366 ಮೀ. ಉದ್ದದ ಪ್ಲಾಟ್‌ಫಾಮ್‌ರ್‍ ಹೊಂದಿದ್ದು, ವಿಶ್ವದಲ್ಲೆ ಅತೀ ಉದ್ದವಾದ ಪ್ಲಾಟ್‌ಫಾಮ್‌ರ್‍ ಎಂಬ ದಾಖಲೆ ಹೊಂದಿದೆ. ಉಳಿದಂತೆ ಕೇರಳದ ಕೊಲ್ಲಮ್‌ ಜಂಕ್ಷನ್‌(1180.5 ಮೀ ) ಹಾಗೂ ಪಶ್ಚಿಮ ಬಂಗಾಳದ ಖರ್ಗಾಪುರ ರೈಲು ನಿಲ್ದಾಣ(1072) ನಂತರದ ಸ್ಥಾನದಲ್ಲಿವೆ.

ಈ ವರ್ಷವೇ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ವರ್ಷಾಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳುವುದು ಅನುಮಾನ. ಹೀಗಾಗಿ 2021ರ ಆರಂಭದಲ್ಲಿ ಇವೆಲ್ಲ ಕೆಲಸ ಮುಗಿಯುವ ನಿರೀಕ್ಷೆಯಿದೆ ಎಂದು ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ಅವರು ಹೇಳಿದ್ದಾರೆ.