ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕೊರೊನಾ ಸೊಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ ವೈದ್ಯರು ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆದಿದ್ದಾರೆ.

Plasma therapy success in Hubli Kims covid19 patient cured

ಹುಬ್ಬಳ್ಳಿ(ಜೂ. 02): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕೊರೊನಾ ಸೊಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ ವೈದ್ಯರು ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆದಿದ್ದಾರೆ.

ಪ್ಲಾಸ್ಮಾ ಚಕಿತ್ಸೆಯಲ್ಲಿ ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಗೆ ಯಶಸ್ವಿ ಪ್ಲಾಸ್ಮಾ ಚಿಕಿತ್ಸೆ ಮಾಡಿ ಗುಣಮುಖ ಮಾಡಲಾಗಿದೆ. 64 ವರ್ಷದ ಸೋಂಕಿತನಿಗೆ ಎರಡು ಬಾರಿ ಪ್ಲಾಸ್ಮಾ ಥೆರಪಿ ಮಾಡಲಾಗಿದೆ.

'ಮಹಾ' ಕಿರಿಕ್; ಕ್ವಾರಂಟೈನ್ ತಪ್ಪಿಸಿಕೊಳ್ಳಲು ಪ್ರಯಾಣಿಕರು ಎಸ್ಕೇಪ್..!

ಕೊರೊನಾದಿಂದ‌ ಗುಣಮುಖನಾದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ಪಡೆದು ಚಿಕಿತ್ಸೆ 200 ಎಂಎಲ್ ನಂತೆ ಎರಡು ಬಾರಿ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಪ್ಲಾಸ್ಮಾ ಥೆರಪಿಗೆ ಒಳಗಾದ ಸೋಂಕಿತ ಗುಣಮುಖನಾಗಿದ್ದಾನೆ. ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಡಾ. ರಾಮ ಕುಲಗೋಡ ನೇತೃತ್ವದಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಲಾಯಿತು.

"

ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಆಂಟಿಬಯೋಟಿಕ್‌ನ್ನು ಉಪಯೋಗಿಸಿ ಇತರ ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ಇಂಥ ಚಿಕಿತ್ಸೆ ನೀಡಲು ದೇಶದಲ್ಲಿ ಕೇರಳ ಮೊದಲು ಅನುಮತಿ ಪಡೆದಿತ್ತು. ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಂಡಿರುತ್ತದೆ. ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ಪಡೆದು ಸೋಂಕಿತ ಅಥವಾ ಸೋಂಕಿನ ಸಂಭಾವ್ಯತೆ ಇರುವ ವ್ಯಕ್ತಿಯ ರಕ್ಷಕ್ಕೆ ಸೇರಿಸಿದರೆಆತನಲ್ಲೂ ರೋಗ ನಿರೋಧಕ ಶಕ್ತಿ ರೂಪುಗೊಂಡು 3ರಿಂದ 7 ದಿನದಲ್ಲಿ ರೋಗ ನಿವಾರಣೆಯಾಗುತ್ತದೆ.

ಯಾರು ರಕ್ತ ನೀಡಬಹುದು?

- ರೋಗಮುಕ್ತವಾದ 28 ದಿನಗಳ ಬಳಿಕ ಚೇತರಿಸಿಕೊಂಡ ವ್ಯಕ್ತಿ ನೀಡಬಹುದು.

- ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದವರು

- ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು

Latest Videos
Follow Us:
Download App:
  • android
  • ios