ಕಾನೂನು ಮೀರದೆ ಕೆಲಸ ಮಾಡಿ: ತಹಸೀಲ್ದಾರ್‌ ಮಮತಾ

ಸರ್ಕಾರಿ ನೌಕರರು ಶಿಸ್ತಿನಿಂದ, ದಕ್ಷತೆಯಿಂದ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು. ಸರ್ಕಾರ ನಮಗೆ ವೇತನ ನೀಡುವುದು ಜನರ ಸೇವೆಗಾಗಿ ಎಂದು ತಹಸೀಲ್ದಾರ್‌ ಮಮತ ಹೇಳಿದರು.

Work without breaking the law: Tehsildar Mamata snr

 ಶಿರಾ :  ಸರ್ಕಾರಿ ನೌಕರರು ಶಿಸ್ತಿನಿಂದ, ದಕ್ಷತೆಯಿಂದ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು. ಸರ್ಕಾರ ನಮಗೆ ವೇತನ ನೀಡುವುದು ಜನರ ಸೇವೆಗಾಗಿ ಎಂದು ತಹಸೀಲ್ದಾರ್‌ ಮಮತ ಹೇಳಿದರು.

ಶಿರಾ ತಾಲೂಕು ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಬೇಲೂರು ತಾಲೂಕಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ಅಧಿಕಾರಿ ಹಾಗೂ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಅಧಿಕಾರಿಗಳು ಯಾವುದೇ ಒತ್ತಡ ಬಂದರೂ ಸಹ ಕಾನೂನು ಮೀರಿ ಕೆಲಸ ಮಾಡಬಾರದು. ಕಾನೂನು ಮೀರಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ಯಾವುದೇ ಕೆಲಸ ಮಾಡಬೇಕಾದರೂ ಮೇಲಾಧಿಕಾರಿಗಳ ಮಾರ್ಗದರ್ಶನ ತೆಗೆದುಕೊಳ್ಳಬೇಕು. ಯಾವುದೇ ಒತ್ತಡಗಳಿಗೆ ಒಳಗಾಗಬಾರದು. ಅಧಿಕಾರಿ, ನೌಕರರು ಸಾರ್ವಜನಿಕರಿಗೆ ಬೇಕಾಗಿರುವ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಸರ್ಕಾರ ನಮಗೆ ವೇತನ ಕೊಡುತ್ತಿರುವುದೇ ಸಾರ್ವಜನಿಕರ ಕೆಲಸ ಮಾಡಲಿ ಎಂದ ಅವರು ನಾನು ಶಿರಾ ತಾಲೂಕಿನಲ್ಲಿ ಕೆಲಸ ಮಾಡಿದ ಅವಧಿಯಲ್ಲಿ ಸಾರ್ವಜನಿಕರ, ರೈತರ ಆದ್ಯತೆ ಕೊಟ್ಟು ಸೇವೆ ಮಾಡಿದ್ದೇನೆ. ಮುಂದೆ ಬರುವ ಅಧಿಕಾರಿಗಳು ಸಹ ಅದೇ ರೀತಿ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದರು.

ಗ್ರೇಡ್‌-2 ತಹಸೀಲ್ದಾರ್‌ ಮಂಜುನಾಥ್‌ ಮಾತನಾಡಿ, ತಹಸೀಲ್ದಾರ್‌ ಮಮತ ಅವರಿಂದ ಶಿಸ್ತಿನಿಂದ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿದಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ತಮ್ಮ ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ತಮ್ಮ ಕಣ್ಣೇದುರೇ ಸಾವುನೋವುಗಳನ್ನು ನೋಡಿದ್ದಾರೆ. ಆದರೂ ಕುಗ್ಗದೆ ಅತ್ಯಂತ ಯಶಸ್ವಿಯಾಗಿ ತಾಲೂಕಿನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಇವರ ಸೇವೆ ಮುಂದಿನ ದಿನಗಳಲ್ಲಿ ಹೆಚ್ಚು ಸಿಗಲಿ ಎಂದರು.

ಕಾರ್ಯಕ್ರಮದಲ್ಲಿ ನೂತನ ತಹಶಿಸೀಲ್ದಾರ್‌ ಮುರುಳಿಧರ್‌, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಡಿ.ನರಸಿಂಹಮೂರ್ತಿ, ಬುಕ್ಕಾಪಟ್ಟಣ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಶಿವು ಜಾನಕಲ್‌, ದಲಿತ ಮುಖಂಡ ಸತೀಶ್‌, ಕಲಾವಿದ ಬೇವಿನಹಳ್ಳಿ ನರಸಿಂಹರಾಜು ಸೇರಿದಂತೆ ಹಲವರು ಹಾಜರಿದ್ದರು.

ರಾಜಕೀಯಕ್ಕೆ ಬಂದಿರುವುದು ಜನ ಸೇವೆ ಮಾಡಲು

ಹೊಸಕೋಟೆ (ಫೆ.08): ಕ್ಷೇತ್ರದ ಅಭಿದ್ಧಿ ವಿಚಾರದಲ್ಲಿ ನಾನು ನನ್ನ ಕುಟುಂಬ ಹಗಲಿರುಳು ಶ್ರಮಿಸುವ ಮೂಲಕ ಜನ ಸೇವೆ ಮಾಡುವುದು ನಮ್ಮ ಉದ್ದೇಶವಾಗಿದೆ. ದೇವರು ನನಗೆ ಹಣ-ಅಂತಸ್ತು ಕೊಟ್ಟಿದ್ದಾನೆ. ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡುವ ಸಲುವಾಗಿ. ಸಮ್ಮಿಶ್ರ ಸರಕಾರದಲ್ಲೂ ಸಹ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲವೆಂದು ರಾಜೀನಾಮೆ ನೀಡಿ ಬಂದೆ. ಕ್ಷೇತ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಸಚಿವ ಎಂ.ಟಿ.ಬಿ. ನಾಗರಾಜ್‌ ತಿಳಿಸಿದ್ದಾರೆ.

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಹರಳೂರು ಗ್ರಾಮದಲ್ಲಿ ಸಿಸಿ ರಸ್ತೆ, ಹೈಮಾಸ್‌್ಕ ಲೈಟ್‌ ಹಾಗೂ ಗ್ರಾವೆಲ್‌ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಮತದಾರರ ಋುಣ ನನ್ನ ಮೇಲಿದೆ. ಮತದಾರರ ಋುಣ ತೀರಿಸಲು ಆಗುವುದಿಲ್ಲ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶೇಷ ಅನುದಾನಗಳನ್ನು ತರುವ ಮೂಲಕ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ನಾನು ರಾಜಕೀಯಕ್ಕೆ ಬಂದಿರುವುದು ಸಹ ಜನ ಸೇವೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು. 

ಭ್ರಷ್ಟಾಚಾರ ಆರೋಪ ಬೆನ್ನಲ್ಲೇ ಮಂಗಳೂರಿಗೆ ಎಡಿಜಿಪಿ: ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಅಲೋಕ್ ಕುಮಾರ್!

ಗ್ರಾಮಗಳಲ್ಲಿ ಶಾಂತಿ-ಸುವ್ಯವಸ್ಥೆ ನೆಲಸುವಂತೆ ಮಾಡಲು. ಆದರೆ ರಾಜಕೀಯವನ್ನು ಗ್ರಾಮಗಳಲ್ಲಿ ದ್ವೇಷ ಬೆಳೆಸಿ ಸಾಮರಸ್ಯ ಒಡೆಯಲು ಬಳಸಬಾರದು. ಜನ ಯಾರಿಗೇ ಅ​ಧಿಕಾರ ನಡೆಸಲು ಅವಕಾಶ ನೀಡಿದರು ಅವರು ಜನರ ಸೇವೆ ಮಾಡಬೇಕು. ಬಡವರಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆಯಬಾರದು ಎಂದರು. ಕಾರ‍್ಯಕ್ರಮದಲ್ಲಿ ಬಿ.ಎಂ.ಆರ್‌.ಡಿ.ಎ. ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ಕೋಡಿಹಳ್ಳಿ ಜಾನಿ, ಬೇಗೂರು ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್‌. ರಾಮು, ಜೆ.ಆರ್‌.ಡಿ. ಪ್ರಕಾಶ್‌ ಹಾಗೂ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios