ಧಾರವಾಡ(ಮಾ.01): ವಿದ್ಯಾಕಾಶಿ ಧಾರವಾಡದಲ್ಲಿಇಂದು(ಭಾನುವಾರ) ಬೆಳ್ಳಂಬೆಳಗ್ಗೆ ನೂರಾರು ನಾರಿಯರು ಸೀರೆಯಲ್ಲಿಯೇ ಓಡುವ ಮೂಲಕ ಗಮನ ಸೆಳೆದಿದ್ದಾರೆ.

ನಗರದ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮಹಿಳಾ ಘಟಕ ಮತ್ತು ಜೈನ್ ಸ್ಟುಡಿಯೋ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿಯೇ ಸೀರೆ ಉಟ್ಟು ಓಡುವ ಹಾಗೂ ನಡೆಯುವ ಸ್ಪರ್ಧೆಯನ್ನ ಹಮ್ಮಿಕೊಳ್ಳಲಾಗಿತ್ತು.  ಸೀರೆ ಉಟ್ಟುಕೊಂಡೇ ಓಡುವ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಹಿಳೆಯರು ತಮ್ಮ ಪಾರಮ್ಯ ಮೆರೆದಿದ್ದಾರೆ. 

ಮಹಿಳೆಯರ ಸೀರೆ ಓಟದ ಸ್ಪರ್ಧೆಯ ಕೆಲ ಫೋಟೋಸ್ 

ಇತ್ತೀಚೆಗೆ ಮಹಿಳೆಯರಲ್ಲಿ ಸೀರೆಯುಡುವ ಅಭಿರುಚಿ ಕಡಿಮೆಯಾಗುತ್ತಿದ್ದು, ಜೊತೆಗೆ ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಯೂ ಗಮನ ಕಡಿಮೆಯಾಗುತ್ತಿದ್ದು, ಒಂದೆಡೆ ಸೀರೆ ಸಂಪ್ರದಾಯದ ಮಹತ್ವ ತಿಳಿಸಿ ಮಹಿಳೆಯರಲ್ಲಿ ಪುನಃ ಸೀರೆಯುಡುವ ಅಭಿರುಚಿ ಬೆಳೆಸಲು ಹಾಗೂ ಆರೋಗ್ಯ ಮಹತ್ವವನ್ನೂ ತಿಳಿಸಿಕೊಡುವ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧಾರವಾಡದ ಕೆಸಿಡಿ ಕಾಲೇಜ್ ಆವರಣದಿಂದ ಕಲಾಭವನದವೆರೆಗೆ ನಡೆದ ಈ ಸ್ಪರ್ಧೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಓಟದ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮಹಿಳೆಯರಿಗೂ ಸರಳ ವ್ಯಾಯಾಮಗಳನ್ನು ಸಹ ತಿಳಿಸಿಕೊಡಲಾಯಿತು. ಇನ್ನು ರನ್ನಿಂಗ್‌ಗೂ‌ ಮುನ್ನ ವಾರ್ಮಪ್‌ಗಾಗಿ ಡ್ಯಾನ್ಸ್‌ ಕೂಡ ಮಾಡಲಾಯಿತು.