ಪಿರಿಯಾಪಟ್ಟಣ (ಸೆ.21): ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಅಂಗವಾಗಿ ಪಟ್ಟಣದ ಮಹಿಳಾ ಅಭಿಮಾನಿಯೊಬ್ಬರು ಅವರ ಎಡಗೈ ಮೇಲೆ ಮೋದಿ ಅವರ ಭಾವಚಿತ್ರದ ಹಚ್ಚೆ ಹಾಕಿಸಿ ಅಭಿಮಾನ ತೋರಿದ್ದಾರೆ.

ಹಲವು ಸಾಮಾಜಿಕ ಚಟುವಟಿಕೆ ಮೂಲಕ ಗುರುತಿಸಿಕೊಂಡಿರುವ ಪಟ್ಟಣದ ನಿವಾಸಿ ಶುಭಾಗೌಡ ಹಚ್ಚೆ ಹಾಕಿಸಿಕೊಂಡವರು. 

ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾದಾಗಿನಿಂದ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. 

ಮೋದಿ ಬರ್ತಡೇ ಸಂಭ್ರಮದಲ್ಲಿ ಹೀಲಿಯಂ ಬಲೂನ್‌ಗಳು ಬ್ಲಾಸ್ಟ್; ಮುಂದೇನಾಯ್ತು? ನೋಡಿ! ...

ಹಿಂದುತ್ವದ ಬಗೆಗಿನ ಅವರ ಅಪಾರ ಕಾಳಜಿ ಕಂಡು ಅವರ ದೊಡ್ಡ ಅಭಿಮಾನಿಯಾಗಿ ಹುಟ್ಟುಹಬ್ಬದಂದು ಪ್ರಧಾನಿಯವರ ಭಾವಚಿತ್ರ ಹಚ್ಚೆ ಹಾಕಿಸಿಕೊಂಡಿರುವುದಾಗಿ ಶುಭಗೌಡ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನವನ್ನು ಸೆಪ್ಟೆಂಬರ್ 17 ರಂದು ಆಚರಣೆ ಮಾಡಲಾಗಿದ್ದು, ಈ ವೇಳೆ ಹಲವರು ತಮ್ಮ ಅಭಿಮಾನ ಮೆರೆದಿದ್ದು, ವಿವಿಧ ರೀತಿಯಲ್ಲಿ ಜನ್ಮ ದಿನ ಆಚರಣೆ ಮಾಡಲಾಯಿತು.