ಬೀದರ್‌(ಜೂ.14): ಮಹಿಳೆಯೊಬ್ಬರು ತನಗೆ ಕಚ್ಚಿದ ವಿಷಪೂರಿತ ದಾಮಿನಿ ಹಾವನ್ನೇ ಕಲ್ಲಿನಿಂದ ಜಜ್ಜಿ ಕೊಂದು ಆಸ್ಪತ್ರೆಗೆ ತಂದ ಅಚ್ಚರಿಯ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ(ಎಂ) ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. 

ಗ್ರಾಮದ ರೈತ ಮಹಿಳೆ ಶೀಲಾಬಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಚ್ಚಿದ ಹಾವನ್ನು ಸ್ಥಳದಲ್ಲಿಯೇ ಕಲ್ಲಿನಿಂದ ಜಜ್ಜಿ ಕೊಂದಿದ್ದಲ್ಲದೇ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲೆಂದು ಹಾವಿನೊಂದಿಗೆ ಆಸ್ಪತ್ರೆಗೆ ಬಂದ್ದಿದ್ದಾರೆ.

ಡಿಡಿಪಿಐ ಆದೇಶಕ್ಕೆ ಕಿಮ್ಮತ್ತಿಲ್ಲ; ಫೀಸ್ ವಸೂಲಿಗೆ ಮುಂದಾದ ಪ್ರತಿಷ್ಠಿತ ಶಾಲೆಗಳು

ಅವರ ಈ ಜಾಣ್ಮೆ, ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿವೆ. ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.