ಪಡಿತರಕ್ಕೆ ಆಧಾರ್‌, ಇಕೆವೈಸಿಗೆ ಗೃಹಲಕ್ಷ್ಮಿಯರ ಪರದಾಟ..!

ಸರಿಯಾಗಿ ಮೊಬೈಲ್‌ ಸಂಖ್ಯೆಗೆ ಓಟಿಪಿ ಲಭ್ಯವಾಗದೆ ನೋಂದಣಿಗೆ ಕೇಂದ್ರದ ಸಿಬ್ಬಂದಿ ಸಹ ಪರದಾಡುವಂತಾಗಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ನಗದು ನೀಡುವ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ. ಒಂದಡೆ ಸರ್ವರ್‌ ಕಾಟ ಎದುರಾಗಿದೆ.

Women Faces Problems For Ration Card Update at Aland in Kalaburagi grg

ಆಳಂದ(ಜು.30): ರೇಷನ್‌ ಕಾರ್ಡ್‌ನಲ್ಲಿ ಮನೆಯೊಡೆಯನ ಹೆಸರಿದ್ದವರು ಮನೆಯೊಡತಿ ಹೆಸರಿಗೆ ವರ್ಗಾಹಿಸಿಕೊಳ್ಳಲು ಮುಂದಾದ ಗ್ರಾಹಕರಿಗೆ ಒಂದೇ ದಿನದಲ್ಲಾಗಬೇಕಾದ ರೇಷನ್‌ ಕಾರ್ಡ್‌ ತಿದ್ದುಪಡಿ ಆಹಾರ ಇಲಾಖೆಯಿಂದ ವಾರಕಳೆದರೂ ತಿದ್ದುಪಡಿ ಆಗದೇ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣದ ಸೌಲಭ್ಯಗಳಿಂದ ಸಾವಿರಾರು ಮಂದಿ ವಂಚಿತರಾಗತೊಡಗಿದ್ದಾರೆ.

ಪಟ್ಟಣದ ಸೇರಿದಂತೆ ಗ್ರಾಮೀಣ ಭಾಗದ ಸೇವಾ ಕೇಂದ್ರಗಳಲ್ಲೂ ಮೂರಾರು ಮಂದಿ ಗೃಹಲಕ್ಷ್ಮಿ ನೋಂದಣಿಗಾಗಿ ಕಾದು ಕುಳಿತಿದ್ದು, ಸರ್ವರ್‌ ಕೈಕೊಡುತ್ತಿರುವ ಪರಿಣಾಮ ಸಕಾಲಕ್ಕೆ ನೋಂದಣಿ ಆಗದೆ ಸೌಲಭ್ಯದ ಮೊದಲು ಕಂತಿನ 2 ಸಾವಿರದಿಂದ ವಂಚಿತರಾಗುತ್ತೇವೆ ಎಂಬ ಮಹಿಳೆಯರ ಅಳಲು ತೋಡಿಕೊಂಡಿದ್ದಾರೆ.

ಕಲಬುರಗಿ: ಮಳೆಯಿಂದ 283 ಮನೆಗಳು ಭಾಗಶಃ ಹಾನಿ

ಸರಿಯಾಗಿ ಮೊಬೈಲ್‌ ಸಂಖ್ಯೆಗೆ ಓಟಿಪಿ ಲಭ್ಯವಾಗದೆ ನೋಂದಣಿಗೆ ಕೇಂದ್ರದ ಸಿಬ್ಬಂದಿ ಸಹ ಪರದಾಡುವಂತಾಗಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ ನಗದು ನೀಡುವ ಗೃಹಲಕ್ಷ್ಮೀಯೋಜನೆಯ ನೋಂದಣಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ. ಒಂದಡೆ ಸರ್ವರ್‌ ಕಾಟ ಎದುರಾಗಿದೆ.

ಪಟ್ಟಣ ಸೇರಿ ಎಲ್ಲಡೆ ಕರ್ನಾಟಕ ಒನ್‌ ಕೇಂದ್ರ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಫಲಾನುಭವಿಗಳು ಆಗಮಿಸಿ ಸಾಲುಗಟ್ಟಿನಿಂತಿದ್ದು, ಸರ್ವರ್‌ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಒಂದೊಂದು ಕೇಂದ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕ ಮಂದಿ ಗೃಹಲಕ್ಷ್ಮಿ ನೋಂದಣಿಗಾಗಿ ಕಾದು ಕುಳಿತಿದ್ದು, ಸರ್ವರ್‌ ಕೈಕೊಡುತ್ತಿರುವ ಪರಿಣಾಮ ಸರಿಯಾಗಿ ಓಟಿಪಿ ಲಭ್ಯವಾಗದೇ ನೋಂದಣಿಗೆ ಕೇಂದ್ರದ ಸಿಬ್ಬಂದಿಗಳು ಸಹ ಪರದಾಡುವಂತಾಗಿದೆ. ಸರ್ವರ್‌ ಸಮಸ್ಯೆಯಿಂದಾಗಿ ಬೆರಳೆಣೆಕೆಯಷ್ಟು ಜನರ ನೋಂದಣಿ ಮಾತ್ರ ಸಾಧ್ಯವಾಗಿದ್ದು, ಇನ್ನೂ ಸಹ ನೂರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಲು ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜು.18ರಿಂದ ಪ್ರಾರಂಭವಾಗಿರುವ ಗ್ರಹಲಕ್ಷ್ಮಿ ಯೋಜನೆ ಇದಾಗಿಯಿದ್ದು ಒಂದೊಂದು ನೋಂದಣಿಗೂ ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೋಂದಣಿಗೆ ಸಾಕಷ್ಟು ಮಂದಿ ಹಿರಿಯರೇ ಆಗಮಿಸುತ್ತಿದ್ದು, ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೇ ಬರಿಗೈಯಿಂದ ಮರಳುತ್ತಿದ್ದಾರೆ. ಜನರು ತೀವ್ರ ಸಮಸ್ಯೆ ಎದುರಸುತ್ತಿದ್ದರಿಂದ ಸರ್ವರ ವ್ಯವಸ್ಥೆಯನ್ನು ಸರಿಪಡಿಸುವಂತೆ ಜನರು ಒತ್ತಾಯಿಸಿದ್ದಾರೆ.

ಆಧಾರ್‌ 2 ಕೇಂದ್ರ:

ಆಧಾರ್ಗೆ ಮೊಬೈಲ್‌ ಸಂಖ್ಯೆ ಜೋಡಣೆಗಾಗಿ ಪಟ್ಟಣದ ಎಸ್‌ಬಿಐ ಬ್ಯಾಂಕ್‌ ಮತ್ತು ತಹಸೀಲ್ದಾರ ಕಚೇರಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆಯಿಂದಲೇ ನೂರಾರು ಜನರು ಜಮಾವಣೆಗೊಂಡಿದ್ದರಿಂದ ಸಕಾಲಕ್ಕೆ ಬ್ಯಾಂಕ್‌ ಖಾತೆಗೆ ಆಧಾರ ಸಂಖ್ಯೆ ಸೋಡಣೆ, ತಿದ್ದುಪಡ್ಡಿ, ವಿಳಾಸ ಬದಲಾವಣೆ ಸಕಾಲಕ್ಕೆ ಸಾಧ್ಯವಾಗುತ್ತಿಲ್ಲ.

Latest Videos
Follow Us:
Download App:
  • android
  • ios