ಮೂರನೆಯದು ಹೆಣ್ಣೆಂದು ಗರ್ಭಪಾತ ಮಾಡಿ ಪ್ರಾಣವನ್ನು ತೆಗೆದರು : ಜೈಲು ಸೇರಿದರು

ಮೂರನೆಯದೂ ಹೆಣ್ಣು ಮಗು ಎಂದು ಆಕೆಗೆ ಗರ್ಭಪಾತ  ಮಾಡಿ ಆಕೆಯ ಸಾವಿಗೆ ಕಾರಣವಾಗಿದ್ದ ಮೂವರನ್ನು ಅರೆಸ್ಟ್ ಮಾಡಲಾಗಿದೆ

Women Died After Forcefully Abortion in chikkaballapura snr

 ಚಿಕ್ಕಬಳ್ಳಾಪುರ (ನ.23):  ಗರ್ಭಿಣಿ ಮಹಿಳೆಗೆ ಗರ್ಭಪಾತ ಮಾಡಿಸಿ ಆಕೆಯ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಪತಿ, ಗರ್ಭಪಾತ ನಡೆಸಿದ ನರ್ಸ ಹಾಗೂ ಆರ್‌ಎಂಪಿ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗರ್ಭಪಾತಕ್ಕೆ ಬಲಿಯಾದ ಮಹಿಳೆಯನ್ನು ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾ.ಪಂ ವ್ಯಾಪ್ತಿಯ ಕೊತ್ತಪಲ್ಲಿಯ ಶ್ರೀಕನ್ಯಾ(28) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ಮೃತ ಶ್ರೀಕನ್ಯಾಳ ಪತಿ ಸೋಮಶೇಖರ್‌, ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ಆರ್‌ಎಂಪಿ ವೈದ್ಯ ಇಬ್ರಾಹಿಂಖಾನ್‌ (52) ಬಾಗೇಪಲ್ಲಿ ಪಟ್ಟಣದ ನಿವಾಸಿ ಆರ್‌ಎಂಪಿ ನರ್ಸ ಜಬೀನಾ ತಾಜ್‌ (40) ಎಂದು ಗುರುತಿಸಲಾಗಿದ್ದು, ಉಳಿದಂತೆ ಮೃತ ಶ್ರೀಕನ್ಯಾ ಅತ್ತೆ ಸರೋಜಮ್ಮ ಸೇರಿ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡ್ತಿದ್ದವರಿಗೆ ಭರಪೂರ ಕಜ್ಜಾಯ! ...

ಮೂರನೇ ಬಾರಿ ಗರ್ಭಿಣಿಯಾಗಿದ್ದ ಶ್ರೀಕನ್ಯಾಳನ್ನು ಗಂಡ ಸೋಮಶೇಖರ್‌, ಅವರ ಅಣ್ಣ ವೆಂಕಟೇಶ್‌ ಹಾಗೂ ಆತ್ತೆ ಸರೋಜಮ್ಮ ಕಾನೂನು ಬಾಹಿರವಾಗಿ ಲಿಂಗ ಪರೀಕ್ಷೆ ಮಾಡಿಸಿದ್ದಾರೆ. ಆಗ ಗರ್ಭದಲ್ಲಿ ಹೆಣ್ಣು ಮಗು ಇರುವುದು ಗೊತ್ತಾಗಿದೆ. ಮೊದಲ ಎರಡು ಮಕ್ಕಲೂ ಹೆಣ್ಣಾಗಿದ್ದ ಕಾರಣ ಶ್ರೀಕನ್ಯಾಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದಾರೆ. ಆಗ ಆರ್‌ಎಂಪಿ ವೈದ್ಯ ಇಬ್ರಾಹಿಂಖಾನ್‌ ಮನೆಯಲ್ಲಿಯೆ ಗರ್ಭಪಾತದ ಕೃತ್ಯಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಶ್ರೀಕನ್ಯಾಗೆ ಹೆಚ್ಚಿನ ರಕ್ತಸಾವ್ರವಾಗಿದ್ದು ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.

ಈ ಕುರಿತು ಮೃತ ಶ್ರೀಕನ್ಯಾ ತಂದೆ ಶ್ರೀನಿವಾಸ್‌, ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಕಾರಣರಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios