ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡ್ತಿದ್ದವರಿಗೆ ಭರಪೂರ ಕಜ್ಜಾಯ!
ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದವರಿಗೆ ಟ್ರೀಟ್ ಮೆಂಟ್/ ಮಧ್ಯದಾರಿಯಲ್ಲಿ ಲಾಠೀ ರುಚಿ/ ಲಾಠಿ ರುಚಿ ತೋರಿಸಿ ಪರೇಡ್ ಮಾಡಿದ ಪೊಲೀಸರು
ಭೋಪಾಲ್(ನ. 22) ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರಿಗೆ ಇದಕ್ಕಿಂತ ದೊಡ್ಡ ಪಾಠ ಬೇಕಾ? ಮಧ್ಯಪ್ರದೇಶದ ಲೇಡಿ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಮಧ್ಯದಾರಿಯಲ್ಲಿ ಲಾಠಿ ರುಚಿ ತೋರಿಸಿದ್ದು ಪರೇಡ್ ಮಾಡಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು 'ಒಳ್ಳೆಯ ಟ್ರೀಟ್ ಮೆಂಟ್' ಎಂದಿದ್ದಾರೆ.
ಯುವತಿ ಕಂಡ ತಕ್ಷಣ ಪ್ಯಾಂಟ್ ಬಿಚ್ಚಿ ಪ್ರದರ್ಶಿಸಿದ
ಹೆಣ್ಣು ಮಕ್ಕಳಿಗೆ ಸಂಕಟ ನೀಡುವವರಿಗೆ ಇಷ್ಟು ಮಾಡಿದರೆ ಸಾಲದು, ಅವರನ್ನು ನೇಣಿಗೆ ಹಾಕಬೇಕು ಎಂಬ ಕಮೆಂಟ್ ಗಳು ಹರಿದು ಬಂದಿವೆ. ಲೇಡಿ ಪೊಲೀಸರು ಕೊಟ್ಟ ಏಟಿಗೆ ಕಿರುಕುಳ ನೀಡ್ತಿದ್ದ ಹುಡುಗರ ಎಲ್ಲ ಆಟ ಅಡಗಿಹೋಗಿದೆ.