ಮಂಡ್ಯ(ಆ.07):  ಕೊರೋನಾ ಸೋಂಕು ಧೃಡಪಟ್ಟ ವಿಚಾರ ತಿಳಿಯುತ್ತಲೇ ಮಹಿಳೆಯೊಬ್ಬಳು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮದ ಬಸವನ ಗುಡಿ ಬಳಿ ಇಂದು(ಶುಕ್ರವಾರ) ನಡೆದಿದೆ.

ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನ ನಾಗಮಂಗಲ ಪಟ್ಟಣದ TB ಬಡಾವಣೆ‌ ನಿವಾಸಿ ಪದ್ಮಾವತಿ(35) ಎಂದು ಗುರುತಿಲಾಗಿದೆ. ಮೃತ ಮಹಿಳೆ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಕಳೆದ ಬುಧವಾರದಂದು ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಹೇಳಲಾಗಿದೆ. 

ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

ತಮಗೆ ಕೊರೋನಾ ಪಾಸಿಟಿವ್ ಬಂದಿರುವ ವಿಚಾರ ವೈದ್ಯರು ದೃಢಪಡಿಸಿದ್ದರು. ವೈದ್ಯರು ಈ ವಿಚಾರ ತಿಳಿಸುತ್ತಿದ್ದಂತೆ ಪದ್ಮಾವತಿ ಮನೆಗೆ ಹೋಗದೆ ಬೋಗಾದಿ ಗ್ರಾಮದ ಬಸವನ ಗುಡಿ ಬಳಿಯ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.