Davanagere; ನಾಲ್ಕು ಬಾಲ್ಯವಿವಾಹಕ್ಕೆ ಬ್ರೇಕ್, ಕಣ್ತಪ್ಪಿಸಿ ಮದುವೆಯಾದವ ಅರೆಸ್ಟ್
ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮೆದಿಕೆರೆ ಗ್ರಾಮವೊಂದರಲ್ಲಿ ನಾಲ್ಕು ಬಾಲ್ಯವಿವಾಹಗಳಿಗೆ ತಡೆ ಹಿಡಿಯಲಾಗಿದೆ.
ದಾವಣಗೆರೆ (ಜೂನ್ 29): ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಚನ್ನಗಿರಿ ತಾಲ್ಲೂಕಿನ ಮೆದಿಕೆರೆ ಗ್ರಾಮವೊಂದರಲ್ಲಿ ನಾಲ್ಕು ಬಾಲ್ಯವಿವಾಹಗಳಿಗೆ ಬ್ರೇಕ್ ಹಾಕಿದ ಘಟನೆ ನಡೆದಿದೆ. ಇನ್ನು 18 ವರ್ಷ ತುಂಬದ ನಾಲ್ವರು ಹೆಣ್ಣುಮಕ್ಕಳನ್ನು ಅವರ ಪೋಷಕರು ಮದುವೆಗೆ ಯತ್ನಿಸಿದ್ದರು. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಂತೇಬೆನ್ನೂರು ಪೋಲಿಸರು ಮದುವೆಗೆ ಬ್ರೇಕ್ ಹಾಕಿದ್ದಾರೆ.
ಮೆದಿಕೆರೆ ಅಪ್ರಾಪ್ತೆಯನ್ನು ಮದುವೆಯಾದ ಮೆದಿಕೆರೆ ಗ್ರಾಮದ ಯುವಕನೋರ್ವನನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ನಿವಾಸಿ ಯಶವಂತ್ (30) ಬಂಧಿತ ಆರೋಪಿ. ಆರೋಪಿ ಯಶವಂತ್ 16 ವರ್ಷ 7 ತಿಂಗಳಿನ ಅಪ್ರಾಪ್ತೆಯನ್ನು ಜೂನ್ 24ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕಲ್ಲತ್ತಗಿರಿ ವೀರಭದ್ರಸ್ವಾಮಿ ದೇವಸ್ಥಾನ ದಲ್ಲಿ ವಿವಾಹವಾಗಿದ್ದನು. ಈ ಬಗ್ಗೆ ಅನಾಮೇದೆಯ ಕರೆ ಬಂದ ಹಿನ್ನಲೆಯಲ್ಲಿ ಮೆದಿಕೆರೆ ಗ್ರಾಮಕ್ಕೆ ಜೂ.25ರಂದು ಪೊಲೀಸರು, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.
ದಲಿತ ಕಾಲನಿಗೆ ಉಡುಪಿಯ ಮಾಜಿ ಡಿಸಿ ಹೆಸರಿಟ್ಟ ನಿವಾಸಿಗಳು
ಬಳಿಕ ಬಾಲಕಿಯ ಶಾಲಾ ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳ ತಂಡ, ಅಪ್ರಾಪ್ತೆಯ ವಯಸ್ಸು ನಿಖರ ಪಡಿಸಿಕೊಂಡು ಮದುವೆಯಾದ ಯಶವಂತ್ನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇನ್ನು ಬಾಲಕಿಯ ತಂದೆ, ಹುಡುಗನ ತಂದೆ- ತಾಯಿ ಮತ್ತು ಮದುವೆಗೆ ಸಹಕಾರ ನೀಡಿದವರ ವಿರುದ್ಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಇಬ್ಬರು ಯುವತಿಯರನ್ನು ಚಿತ್ರದುರ್ಗದ ಯುವಕರಿಗೆ ಕೊಟ್ಟು ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ವಿಷ್ಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಪೋಷಕರ ಜೊತೆ ಸಭೆ ನಡೆಸಿ ಅಪ್ರಾಪ್ತ ಯುವತಿಯರನ್ನು ಮದುವೆ ಮಾಡಿದ್ರೆ ಜೈಲಿಗೆ ಹೋಗಬೇಕಾಗುತ್ತದೆ ಹುಡುಗರು ಅರೆಸ್ಟ್ ಆಗುತ್ತಾರೆ. ಬಾಲ್ಯ ವಿವಾಹ ಕಾನೂನು ಬಾಹಿರ ಎಂದು ಮನವೊಲಿಸಿ ಮದುವೆಗೆ ತಡೆ ನೀಡಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು, ಮಂಗಳೂರು ಪೊಲೀಸರಿಂದ ನೋಟಿಸ್
ಇದೇ ಮೆದಿಕೆರೆ ಗ್ರಾಮದಲ್ಲಿ ಭದ್ರಾವತಿ ಯುವಕನಿಗೆ 17 ವರ್ಷದ ಯುವತಿಗೆ ನಿಶ್ಚಯ ಮಾಡಿಕೊಟ್ಟಿದ್ದರು. ಪೋಷಕರಿಂದ ಬಾಂಡ್ ಬರೆಸಿಕೊಂಡು ಈ ಮದುವೆಗು ಪೊಲೀಸರು ಬ್ರೇಕ್ ಹಾಕಿದ್ದರು. ಮತ್ತೊಬ್ಬ ಯುವತಿಗೆ 18 ವರ್ಷ ತುಂಬಿದ ಹಿನ್ನಲೆಯಲ್ಲಿ ಆ ಯುವತಿಯ ಮದುವೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಅನುಮತಿ ನೀಡಿದ್ದಾರೆ.
ಮೆದಿಕೆರೆ ಗ್ರಾಮದಲ್ಲಿ ಆ ಎಲ್ಲಾ ಯುವತಿಯರು ಹೈಸ್ಕೂಲ್ ಕ್ಲಾಸ್ ಮೆಟ್ ಗಳಾಗಿದ್ದು ಬೇರೆ ಬೇರೆ ಕಡೆ ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದರು. ಇವರೆಲ್ಲರು ಪೋಷಕರ ಒತ್ತಾಯದ ಮೇರೆಗೆ ವಿವಾಹಕ್ಕೆ ಒಪ್ಪಿಕೊಂಡಿದ್ದರು. ಬಾಲ್ಯವಿವಾಹ ಕಾನೂನು ಬಾಹಿರ ಎಂದು ತಿಳಿದಿದ್ದರಿಂದ ಇಲಾಖೆಗೆ ಅದ್ಹೇಗೋ ಮಾಹಿತಿ ತಿಳಿದು ಎಲ್ಲರ ಬಾಲ್ಯ ವಿವಾಹಕ್ಕೆ ಬ್ರೇಕ್ ಬಿದ್ದಿದೆ. ಬಾಲ್ಯವಿವಾಹದ ಬಗ್ಗೆ ಅವರ ಪೋಷಕರಿಗೆ ತಿಳುವಳಿಕೆ ನೀಡಿ ಕಾನೂನಿನ ಅರಿವು ಸಹ ಮೂಡಿಸಲಾಗಿದೆ.