ಹುಬ್ಬಳ್ಳಿ(ಜೂ.20): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ ಮೇಲೆ ಲೈಂಗಿಕ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಮಹಿಳೆ ಹಾಗೂ ಸಂಬಂಧಿಕರು ವೈದ್ಯಾಧಿಕಾರಿ ಮೇಲೆ ಹಲ್ಲೆಗೂ ಮುಂದಾಗಿದ್ದರು. 

ಈ ಆಗಮಿಸಿದ ಪೊಲೀಸರು ಅಗಮಿಸಿ ಸಮಾಧಾನ ಪಡಿಸಿ ವೈದ್ಯಾಧಿಕಾರಿ ಹಾಗೂ ಮಹಿಳೆಯನ್ನ ಠಾಣೆಗೆ  ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.  ಫಾರ್ಮಾಸಿಟಿಕಲ್ ಏಜೆನ್ಸಿಯ ಮುಖ್ಯಸ್ಥೆಗೆ ವೈದ್ಯಾಧಿಕಾರಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲೆದ ಮೂರು ತಿಂಗಳಿಂದ ಆಸ್ಪತ್ರೆಯ ವೈದ್ಯಕೀಯ ಸಾಮಾಗ್ರಿ ಸರಬರಾಜು ಏಜೆನ್ಸಿಯಿಂದ ಮಾಡಲಾಗುತ್ತಿತ್ತು. ಆದರೆ ಬಿಲ್‌ ಆಗಿರಲಿಲ್ಲವಂತೆ. ಬಿಲ್‌ ಕೇಳಲು  ಬಂದಾಗ ಏಜೆನ್ಸಿ ಮುಖ್ಯಸ್ಥೆ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ. 

ಧಾರವಾಡ: ಡಿಸಿ ಕಚೇರಿ ಮುಂದೆ ಜಿಮ್ ಮಾಡಿ ಯುವಕರ ಪ್ರತಿಭಟನೆ!

ಮಹಿಳೆ ಹಾಗೂ ಮಹಿಳೆಯ ಸಂಬಂಧಿಗಳಿಂದ ನಗರದ ಚಿಟಗುಪ್ಪಿ ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದರು. ಬಿಲ್‌ ಕೇಳಲು ಬಂದರೆ ಬಿರಾದಾರ ಅಸಭ್ಯವಾಗಿ ವರ್ತಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಬಿರಾದಾರ ಅವರನ್ನು ಥಳಿಸಲು ಮಹಿಳೆ ಹಾಗೂ ಸಂಬಂಧಿಗಳು ಮುಂದಾದರು. ಆಗ ಪೊಲೀಸರು ಅಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. 

ವೈದ್ಯಾಧಿಕಾರಿ ಬಿರಾದಾರ ಹಾಗೂ ಪ್ರತಿಭಟನಾನಿರತರನ್ನು ಉಪನಗರ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಇದರಿಂದ ಚಿಟಗುಪ್ಪಿ ಆಸ್ಪತ್ರೆ ಎದುರು ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.