ಹಾಸನ [ಜ.21]: ಮಹಿಳೆಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಯಗಚಿ ನದಿ ದಂಡೆಯಲ್ಲಿ ಸುಟ್ಟು ಹಾಕಿರುವ ಮಹಿಳೆಯ ಶವ ಪತ್ತೆಯಾಗಿದೆ. 

ಶವದ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಪಕ್ಕೆಲುಬು ಬಳಿಕ ಇದೀಗ ವಿದ್ಯಾರ್ಥಿನಿ ‘ಪುಳಿಯೋಗರೆ’ ವಿಡಿಯೋ ವೈರಲ್‌...

ಸುಮಾರು 40 ವರ್ಷ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಸದ್ಯ ಶವದ ಗುರುತು ಪತ್ತೆ ಯತ್ನ ನಡೆಸಿದ್ದಾರೆ. 

ಹಾಸನ : ಒಂದು ವರ್ಷ ಸಂಚಾರ ನಿಷೇಧಿಸಿ ಡಿಸಿ ಆದೇಶ...

ಬೇಲೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.