ಧಾರವಾಡ(ಆ.14): ತನ್ನ ಮೂರು ಮಕ್ಕಳೊಂದಿಗೆ ಇಲ್ಲಿನ ಕೆಲಗೇರಿ ಕೆರೆಗೆ ಹಾರಿದ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಬೆಳಗಿನಜಾವ ನಡೆದಿದೆ.

ರತ್ನವ್ವ ಮೇದಾರ (32) ಎಂಬುವವರೇ ತನ್ನ ಮೂರು ಮಕ್ಕಳೊಂದಿಗೆ ಕೆರೆಗೆ ಹಾರಿದ ದುರ್ದೈವಿ. ಕೆಲಗೇರಿಯವಳೇ ಆದ ರತ್ನವ್ವಳನ್ನು ಜಮಖಂಡಿಯ ವ್ಯಕ್ತಿಯೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಪಂಚಮಿ ಹಬ್ಬಕ್ಕೆಂದು ಬಂದಿದ್ದ ರತ್ನವ್ವ ತನ್ನ ಮೂರು ಮಕ್ಕಳೊಂದಿಗೆ ಇಲ್ಲಿನ ಕೆಲಗೇರಿ ಕೆರೆಗೆ ನಸುಕಿನ ಜಾವ ಹಾರಿದ್ದರು.

ರತ್ತವ್ವಳಿಗೆ ಒಟ್ಟು ನಾಲ್ಕು ಮಕ್ಕಳು. ಸಣ್ಣ ಗಂಡು ಮಗುವನ್ನು ಕೆರೆಯ ದಂಡೆಯ ಮೇಲಿನ ಕಲ್ಮೇಶ್ವರ ಗುಡಿ ಎದುರು ಮಲಗಿಸಿ ಉಳಿದ ಮೂರು ಹೆಣ್ಣು ಮಕ್ಕಳೊಂದಿಗೆ ರತ್ನವ್ವ ನಿನ್ನೆ ರಾತ್ರಿ 11.30ರ ಸುಮಾರಿಗೆ ಕೆರೆಗೆ ಹಾರಿದ್ದಾರೆ. ಅದೃಷ್ಟವಶಾತ್ ಸ್ಥಳೀಯರು ರತ್ನವ್ವ ಹಾಗೂ ಇಬ್ಬರು ಮಕ್ಕಳುನ್ನು ಉಳಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

5 ವರ್ಷದ ಮಗು ಮಾತ್ರ ಸಾವಿಗೀಡಾಗಿದ್ದು ಉಪ ನಗರ ಪೋಲಿಸರು ಅಗ್ನಿಶಾಮಕ ದಳದ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದಾರೆ. ಬದುಕಿದ ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಸಂಬಂಧ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

'ನೆರೆ ವಿಚಾರದಲ್ಲಿ ರಾಜಕೀಯ ಮಾಡಲ್ಲ, ಜನರಿಗಾಗಿ ಸರ್ಕಾರಕ್ಕೆ ನಮ್ಮ ಬೆಂಬಲ'

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]