ಕುಷ್ಟಗಿ(ಮಾ.31): ತಾಲೂಕಿನ ಶಾಕಾಪುರ ಗ್ರಾಮದ ಗರ್ಭಿಣಿಯೊಬ್ಬರು ತಾಲೂಕು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ ಶಾಕಾಪುರ ಗ್ರಾಮದ ಪುಷ್ಪಾ ಯಂಕಪ್ಪ ಎಂಬ ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ಕರೆತರುತ್ತಿರುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಿದೆ. 

ಗಂಗಾವತಿ ಬಳಿ ಭೀಕರ ಅಪಘಾತ: ಮೂವರು ಅನ್ನದಾತರ ದುರ್ಮರಣ

ಸಿಬ್ಬಂದಿ ಭೀಮಪ್ಪ ಲಿಂಗದಹಳ್ಳಿ ಹಾಗೂ ಆ್ಯಂಬುಲೆನ್ಸ್‌ ಪೈಲೆಟ್‌ ಕೆ. ಮಲ್ಲೇಶ ಇವರಿಬ್ಬರ ಸಮಯಪ್ರಜ್ಞೆಯಿಂದ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮತ್ತು ಮಕ್ಕಳು ಸುರಕ್ಷಿತವಾಗಿ ಆರೋಗ್ಯವಾಗಿದ್ದಾರೆ.