* ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿ ನಡೆದ ಘಟನೆ* ನೆಗೆಟಿವ್‌ ರಿಪೋರ್ಟ್‌ ಇಲ್ಲವೆಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಸಿಬ್ಬಂದಿ* ಅಮಾನವೀಯತೆ ಮೆರೆದ ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕಿದ ಕುಟುಂಬಸ್ಥರು 

ಹಾಸನ(ಮೇ.22):ಕೊರೋನಾ ನೆಗೆಟಿವ್‌ ವರದಿ ಇಲ್ಲವೆಂದು ಒಳಗೆ ಸೇರಿಸದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯ ಆವರಣದಲ್ಲಿಯೇ ನೋವಿನಿಂದ ಒದ್ದಾಡಿ, ಕಡೆಗೆ ಅಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಗುರುವಾರ ರಾತ್ರಿ ಶಾಂತಿಗ್ರಾಮದಲ್ಲಿ ನಡೆದಿದೆ.

ಹಾಸನ ತಾಲೂಕಿನ ಹಲಸಿನಹಳ್ಳಿಯ ಹೇಮಾ ಎಂಬುವರಿಗೆ ಗುರುವಾರ ರಾತ್ರಿ 11.30ರ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೋಬಳಿ ಕೇಂದ್ರವಾದ ಶಾಂತಿಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನೆಗೆಟಿವ್‌ ರಿಪೋರ್ಟ್‌ ಇಲ್ಲವೆಂದು ಆಸ್ಪತ್ರೆ ಸಿಬ್ಬಂದಿ, ಹೇಮಾರನ್ನು ದಾಖಲಿಸಿಕೊಳ್ಳದ ಪರಿಣಾಮ ನರಳಾಡಿ ಆಕೆ ಆಸ್ಪತ್ರೆ ಆವರಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಪ್ರಧಾನಿ ಮೋದಿ ವಿರುದ್ಧ ಗರಂ ಆದ ಎಚ್.ಡಿ ರೇವಣ್ಣ

ಅಮಾನವೀಯತೆ ಮೆರೆದ ಆಸ್ಪತ್ರೆ ಸಿಬ್ಬಂದಿಗೆ ಹಿಡಿಶಾಪ ಹಾಕಿದ ಕುಟುಂಬಸ್ಥರು, ಗರ್ಭಿಣಿಯ ಮತ್ತು ಮಗವನ್ನು ಕರೆದುಕೊಂಡು ಆ್ಯಂಬುಲೆನ್ಸ್‌ನಲ್ಲಿ ಹಾಸನಕ್ಕೆ ತೆರಳಿದರು ಎಂದು ತಿಳಿದುಬಂದಿದೆ.