ಗದಗ ನಿಲ್ದಾಣದ ಸಮೀಪದಲ್ಲಿ ಮಹಿಳೆಯೋರ್ವಳು ರೈಲಿಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡು ಬದುಕುಳಿದ ಘಟನೆ ಸೋಮವಾರ ಸಂಜೆ ಜರುಗಿದೆ. ಘಟನೆಗೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ.

ಗದಗ (ಜೂ.20): ಗದಗ ನಿಲ್ದಾಣದ ಸಮೀಪದಲ್ಲಿ ಮಹಿಳೆಯೋರ್ವಳು ರೈಲಿಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡು ಬದುಕುಳಿದ ಘಟನೆ ಸೋಮವಾರ ಸಂಜೆ ಜರುಗಿದೆ. ಘಟನೆಗೆ ಇನ್ನು ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಮಹಿಳೆಯ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದು, ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಮಹಿಳೆ ಬಚಾವ್‌ ಆಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದು ಗಾಯಗೊಂಡಿರುವ ಮಹಿಳೆಯನ್ನು ಮುಂಡರಗಿ ತಾಲೂಕಿನ ಡಂಬಳ ಮೂಲದ ಗಿರಿಜಾ ಎಂದು ಗುರುತಿಸಲಾಗಿದೆ. ಸದ್ಯ ಗದಗ ಜಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರೈಲ್ವೆ ಚಾಲಕ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. ಗದಗ ರೈಲ್ವೆ ಪೊಲೀಸ್‌ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹೆದ್ದಾರಿ ದರೋಡೆಕೋರರ ಬಂಧನ, 1.33 ಕೋಟಿ ಮೌಲ್ಯದ ಸಾಮಗ್ರಿ ವಶ: ಮೀರಜ್‌ನಿಂದ ಚೆನ್ನೈಗೆ ಹೋಗುತ್ತಿದ್ದ ಲಾರಿ ಚಾಲಕನನ್ನು ಹತ್ಯೆಗೈದು ಅದರಲ್ಲಿದ್ದ . 1.33 ಕೋಟಿ ಮೌಲ್ಯದ 120 ಪ್ರೆಷರ್‌ ವಾಲ್‌್ವ (ರಾ ಸ್ಟೀಲ್‌ ಕಾಸ್ಟಿಂಗ್‌ ಸಾಮಗ್ರಿ) ದರೋಡೆ ಮಾಡಿದ್ದ ಪ್ರಕರಣವನ್ನು 48 ಗಂಟೆಯೊಳಗೆ ಭೇದಿಸಿರುವ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರನ ಬಂಧನ

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ಜೂ. 16ರಂದು ಹಾವೇರಿ ಬೈಪಾಸ್‌ ರಸ್ತೆಯಲ್ಲಿ ಲಾರಿ ಅಡ್ಡಗಟ್ಟಿಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ನ ಲಾರಿ ಚಾಲಕ ಗೋವಿಂದ ಖಂಡೇಕರ್‌ (40) ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಭೇದಿಸಲಾಗಿದ್ದು, ಗದಗ ಜಿಲ್ಲೆಯ ಅಡವಿ ಸೋಮಾಪುರದ ಹನುಮಂತ (ಬಸವರಾಜು ಅಲಿಯಾಸ್‌ ನಜೀರ್‌), ಸಿದ್ದಪ್ಪ ಕಾಳಗಿ, ಹಿರೇಕೆರೂರು ತಾಲೂಕಿನ ಮಡ್ಲೂರು ಗ್ರಾಮದ ಶಿವರಾಜು ಸಾತೇನಹಳ್ಳಿ, ಬಸರಿಹಳ್ಳಿ ಗ್ರಾಮದ ಶಿವಕುಮಾರ ದೊಡ್ಡಗೌಡ್ರ, ಹುಲಬಿಕೊಂಡ ಗ್ರಾಮದ ಚಂದ್ರು ಹುಡೇದ, ರಟ್ಟೀಹಳ್ಳಿ ತಾಲೂಕಿನ ಲಿಂಗದೇವರಕೊಪ್ಪದ ಸಂಜೀವ ಬಣಕಾರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಆರೋಪಿಗಳಿಂದ ಕಳ್ಳತನವಾಗಿದ್ದ .1.33ಕೋಟಿ ಮೌಲ್ಯದ 120 ಪ್ರೆಷರ್‌ ವಾಲ್‌್ವ ಮತ್ತು ಲಾರಿ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ್ದ ಜೆಸಿಬಿ, ಟಿಪ್ಪರ್‌, ಬೈಕ್‌, ಗೂಡ್‌್ಸ ಲಾರಿ, ನಾಲ್ಕು ಮೊಬೈಲ್‌ ಜಪ್ತಿ ಮಾಡಲಾಗಿದೆ. ಪವನ್‌ ಎಂಬ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆಗೆ ಶೋಧ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಕೇಂದ್ರಕ್ಕೆ ಬಿಜೆಪಿ ನಾಯಕರು ರಾಜ್ಯದ ಪಾಲು ಕೇಳಲಿ: ಸಚಿವ ಮಧು ಬಂಗಾರಪ್ಪ

ಆರೋಪಿ ಹನುಮಂತ ಕಾಳಗಿ ಮತ್ತು ಲಾರಿ ಚಾಲಕ ಗೋವಿಂದ ಖಂಡೇಕರ್‌ಗೆ ನಾಲ್ಕು ವರ್ಷಗಳ ಹಿಂದೆ ಹಾವೇರಿ ಬಳಿಯ ಡಾಬಾವೊಂದರಲ್ಲಿ ಪರಿಚಯವಾಗಿತ್ತು. ಗೋವಿಂದ ಖಂಡೇಕರ್‌ ಪ್ರೆಷರ್‌ ವಾಲ್‌ ತರುವ ಲಾರಿಯಲ್ಲೇ ಆರೋಪಿ ಹನುಮಂತನೂ ಮೀರಜ್‌ನಿಂದ ಬಂದಿದ್ದಾನೆ. ಹಾವೇರಿ ಬಳಿ, ಇತರ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಹತ್ಯೆಗೈದಿದ್ದಾರೆ. ಆರೋಪಿ ಹನುಮಂತ ಅಪರಾಧ ಹಿನ್ನೆಲೆ ಉಳ್ಳವನಾಗಿದ್ದಾನೆ. ಸ್ಟೀಲ್‌ ಸಾಮಗ್ರಿ ಕಳವು ಮಾಡುವ ಉದ್ದೇಶದಿಂದಲೇ ಹತ್ಯೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.