Hassan: ಗ್ರಾಹಕರ ಗಿರವಿ ಚಿನ್ನ ಎಗರಿಸಿ ನಕಲಿ ಚಿನ್ನ ತಂದಿಟ್ಟು 1 ಕೋಟಿ ರೂ. ವಂಚಿಸಿದ ಬ್ಯಾಂಕ್ ನೌಕರನ ಬಂಧನ
ಆತ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾನೆ. ಖದೀಮರು ಬ್ಯಾಂಕ್‌ನ ಗೋಡೆಯನ್ನೋ... ಬಾಗಿಲನ್ನೋ.. ಕೊರೆದು ಲೂಟಿ ಮಾಡೋದು ಸಾಮಾನ್ಯ.. ಆದ್ರೆ ಆ ಭೂಪ ಬ್ಯಾಂಕ್‌ನಲ್ಲಿದ್ದುಕೊಂಡೇ, ಬ್ಯಾಂಕ್‌ನವರ ವಿಶ್ವಾಸ ಗಿಟ್ಟಿಸಿಕೊಂಡು ಯಾಮಾರಿಸಿದ್ದಾನೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ಜೂ.20): ಆತ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾನೆ. ಖದೀಮರು ಬ್ಯಾಂಕ್‌ನ ಗೋಡೆಯನ್ನೋ... ಬಾಗಿಲನ್ನೋ.. ಕೊರೆದು ಲೂಟಿ ಮಾಡೋದು ಸಾಮಾನ್ಯ.. ಆದ್ರೆ ಆ ಭೂಪ ಬ್ಯಾಂಕ್‌ನಲ್ಲಿದ್ದುಕೊಂಡೇ, ಬ್ಯಾಂಕ್‌ನವರ ವಿಶ್ವಾಸ ಗಿಟ್ಟಿಸಿಕೊಂಡು ಯಾಮಾರಿಸಿದ್ದಾನೆ. ಗಿರವಿ ಇಟ್ಟಿದ್ದ ಅಸಲಿ ಚಿನ್ನದ ಜಾಗಕ್ಕೆ ನಕಲಿ ಚಿನ್ನವನ್ನ ಇಟ್ಟು, ಬರೋಬ್ಬರಿ ಒಂದು ಕೋಟಿಗೂ ಅಧಿಕ ಮೌಲ್ಯದ ಬಂಗಾರವನ್ನ ಲಪಟಾಯಿಸಿದ್ದನು.
ಹೌದು, ಆತ ಬ್ಯಾಂಕ್ ಖಜಾನೆಗೆ ನಕಲಿ ಚಿನ್ನವಿಟ್ಟು ಅಸಲಿ ಚಿನ್ನವನ್ನ ಹೌಸ್ ಕೀಪರ್ ಎಸ್ಕೇಪ್ ಮಾಡಿದ್ದಾನೆ. ಬ್ಯಾಂಕ್ ಹೊರಗುತ್ತಿಗೆ ನೌಕರ ಕೋಟ್ಯಾಂತರ ಚಿನ್ನಕ್ಕೆ ಕನ್ನ ಹಾಕಿದ್ದಾನೆ. ಗ್ರಾಹಕರು ಇಟ್ಟಿದ್ದ ಚಿನ್ನವನ್ನ ಎಗರಿಸಿ ಎಸ್ಕೇಪ್ ಆದ ವಂಚಿಸಿದ್ದಾನೆ. ಇಂತಹ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. ಶಾಖೆಯ ಹೊರಗುತ್ತಿಗೆ ನೌಕರ ಲವ ಬಿ.ಎನ್. ಎಂಬಾತ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ ಲಪಟಾಯಿಸಿ ಎಸ್ಕೇಪ್ ಆಗಿದ್ದಾನೆ.
ಬಿಜೆಪಿ ಮೊದಲು ಎಲ್ಲರ ಖಾತೆಗೆ 15 ಲಕ್ಷ ಹಾಕಿ ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಬ್ಯಾಂಕ್‌ನವರು ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬ್ಯಾಂಕ್‌ನಲ್ಲಿ ಚಿನ್ನ ಗಿರವಿ ಇಟ್ಟಿದ್ದ ಗ್ರಾಹಕರ ಚಿನ್ನವನ್ನ ಲವ ಎಗರಿಸಿದ್ದು, ಕಪಾಟಿನಲ್ಲಿದ್ದ 30 ಪಾಕೆಟ್ ಚಿನ್ನದಲ್ಲಿ 18 ಪಾಕೇಟ್‌ನಲ್ಲಿ ಚಿನ್ನವನ್ನ ಎಗರಿಸಿ ಆ ಜಾಗಕ್ಕೆ ನಕಲಿ ಚಿನ್ನವನ್ನು ಇಟ್ಟಿದ್ದಾನೆ. ಎರಡು ಪಾಕೆಟ್ ಸಂಪೂರ್ಣ ಎಗರಿಸಿ, ಇತರೆ 10 ಪಾಕೆಟ್‌ನಲ್ಲಿ ಕೆಲ ಚಿನ್ನವನ್ನ ಎಗರಿಸಿ ಲವ ಎಸ್ಕೇಪ್ ಆಗಿದ್ದನು. ಮೇ 5 ರಂದು ಬ್ಯಾಂಕಿನ ಗಿರವಿ ವಿಭಾಗದ ಚಿನ್ನ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಬ್ಯಾಂಕಿನ ಮೇಲಾಧಿಕಾರಿಗಳ ಗಮನಕ್ಕೆ ತಂದು ಜೂನ್ 14 ರಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕಿ ಅನುರಾದ ಪೊಲೀಸರಿಗೆ ದೂರು ನೀಡಿದ್ದಾರೆ.
ಬಡವರ ಅನ್ನಕ್ಕೆ ಕೇಂದ್ರ ಸರ್ಕಾರದಿಂದ ಅಡ್ಡಗಾಲು: ಸಚಿವ ತಿಮ್ಮಾಪುರ
2013 ರಿಂದ ಬ್ಯಾಂಕಿನಲ್ಲಿ ಹೌಸ್ ಕೀಪರ್ ಆಗಿ ಕೆಲ್ಸ ಮಾಡ್ತಿದ್ದ ಲವ, ಬ್ಯಾಂಕ್ ಅಧಿಕಾರಿಗಳ ಜೊತೆ ವಿಶ್ವಾಸ ಗಳಿಸಿ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿಯನ್ನು ಹೊತ್ಕೊಂಡಿದ್ದನು. ತನಗೆ ಬ್ಯಾಂಕಿನಲ್ಲಿ ಸಿಕ್ಕ ಸಲುಗೆಯನ್ನು ಬಳಸಿಕೊಂಡು ಕೋಟಿ ಕೋಟಿ ಮೌಲ್ಯದ ಚಿನ್ನಕ್ಕೆ ಕನ್ನ ಹಾಕಿದ್ದನು. ಪ್ರಕರಣಕ್ಕೆ ಸಂಬಂಧ ದೂರು ದಾಖಲಿಸಿಕೊಂಡು ಕೊಣನೂರು ಪೊಲೀಸರು ಎಸ್ಕೇಪ್ ಆಗಿದ್ದ ಆರೋಪಿ ಲವನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.