ಬೆಂಗಳೂರಿನ ಐಟಿ ಕಂಪನಿ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ಮಡಿವಾಳ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ.

ಬೆಂಗಳೂರು[ಜ.17]  ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ತನಗೆ ಕಂಪನಿಯ ಮ್ಯಾನೇಜರ್‌ನಿಂದ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ.

ಆಂಧ್ರ ಮೂಲದ ಯುವತಿ ಮ್ಯಾನೇಜರ್ ತಬ್ರೇಜ್ ಎಂಬುವರ ಮೇಲೆ ದೂರು ನೀಡಿದ್ದಾರೆ. ಕೋರಮಂಗಲ ಬಳಿಯ ಖಾಸಗಿ ಕಂಪನಿ‌ ಮ್ಯಾನೇಜರ್ ಆಗಿರುವ ತಬ್ರೇಜ್ ಕಳೆದ ಮೂರು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕಸ ಹೊಡೆಯುತ್ತಿದ್ದ ಮಹಿಳೆ ತಬ್ಬಿಕೊಂಡು ಹಿಂಸೆ

ಪ್ರತಿನಿತ್ಯ ಕಚೇರಿಯಲ್ಲಿ ನನ್ನ ಮೈ ಕೈ ಮುಟ್ಟುತ್ತಾನೆ. ತನ್ನ ಜೊತೆ ಲೈಂಗಿಕತೆ ಸಹಕರಿಸಬೇಕು ಎಂದು ಪೀಡಿಸುತ್ತಾನೆ ಎಂದು ಮಹಿಳೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.