ಮಲೆನಾಡಿನಲ್ಲಿ ಕಳೆದ ವರ್ಷ ಮರಣ ಮೃದಂಗ ಭಾರಿಸಿದ್ದ ಮಂಗನ ಕಾಯಿಲೆಗೆ ಈ ವರ್ಷ ಮಹಿಳೆಯೊಬ್ಬರು ಸಾವಿಗೀಡಾಗಿದ್ದು ಇದು ಮೊದಲ ಬಲಿಯಾಗಿದೆ.

ಸಾಗರ [ಜ.13]: ತಾಲೂಕಿನ ಅರಳಗೋಡು ಭಾಗದಲ್ಲಿ ಕಳೆದ ವರ್ಷ ಹೈರಾಣಾಗಿಸಿ ಹಲವರನ್ನು ಬಲಿ ತೆಗೆದುಕೊಂಡಿದ್ದ ಮಂಗನ ಕಾಯಿಲೆ ಈ ವರ್ಷ ಮೊದಲ ಬಲಿ ತೆಗೆದುಕೊಂಡಿದೆ. ಮಂಗನಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಚದರವಳ್ಳಿ ಸಮೀಪದ ಶೀಗೆಮಕ್ಕಿಯ ಹೂವಮ್ಮ (58) ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾ​ರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜ.8ರಂದು ಜ್ವರಬಾಧೆಗೊಳಗಾಗಿ ಕೆಎಫ್‌ಡಿ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಮಣಿಪಾಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿನ ವೈದ್ಯಕೀಯ ಪ್ರಯೋಗಾಲಯ ಗುರುವಾರವಷ್ಟೇ ಕೆಎಫ್‌ಡಿ ಸೋಂಕಿರುವುದನ್ನು ದೃಢಪಡಿಸಿತ್ತು.

ಮತ್ತೆ ಕಾಣಿಸಿಕೊಂಡಿದೆ ಮಹಾಮಾರಿ ಮಂಗನ ಕಾಯಿಲೆ : ಎಚ್ಚರ!...

ತಾಲೂ​ಕಿ​ನಲ್ಲಿ ನಾಲ್ಕು ತಿಂಗಳಿಂದ ಇದುವರೆಗೆ 69 ಮಂಗಗಳು ಮೃತಪಟ್ಟಿವೆ. ಆದರೆ ಯಾವುದೇ ಮಂಗದಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿಲ್ಲ. ಹೂವಮ್ಮಗೆ ಇತರ ಆರೋಗ್ಯದ ಸಮಸ್ಯೆಗಳಿದ್ದವು. ಮಂಗನ ಕಾಯಿಲೆ ದೃಢಪಟ್ಟಿತ್ತಲ್ಲದೇ ಅವರು ರೋಗ ನಿರೋಧಕ ಚುಚ್ಚುಮದ್ದು ಪಡೆದುಕೊಂಡಿರಲಿಲ್ಲ ಎಂದು ಸಾಗರ ಆರೋಗ್ಯ ಇಲಾಖೆ ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.

ಹೂವಮ್ಮ ಮತ್ತು ಅವರ ಪತಿ ತಿಮ್ಮಾನಾಯ್ಕ ಹೊರತುಪಡಿಸಿ ಕುಟುಂಬಸ್ಥರೆಲ್ಲರೂ ಚುಚ್ಚುಮದ್ದು ಪಡೆದಿದ್ದು, ಆರೋಗ್ಯವಾಗಿದ್ದಾರೆ. ತಿಮ್ಮಾನಾಯ್ಕ ಅವರಿಗೂ ತುರ್ತಾಗಿ ಚುಚ್ಚುಮದ್ದು ಪಡೆಯಲು ಸೂಚಿಸಿದ್ದೇವೆ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.