ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹೊಸಪೇಟೆ–ಅರಸೀಕೆರೆ–ಹೊಸಪೇಟೆ ನಡುವಿನ ಕಾಯ್ದಿರಿಸದ ಡೆಮು ವಿಶೇಷ ರೈಲು ಸೇವೆಯನ್ನು ವಿಸ್ತರಿಸಿದೆ. ಈ ಸೇವೆಯು ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ಸೋಮವಾರದಿಂದ ಶುಕ್ರವಾರದವರೆಗೆ ಸಂಚರಿಸಲಿದ್ದು, 29.01.2027 ರವರೆಗೆ ಮುಂದುವರೆಯಲಿದೆ.
ಹುಬ್ಬಳ್ಳಿ (ನ.25): ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಹೊಸಪೇಟೆ–ಅರಸೀಕೆರೆ–ಹೊಸಪೇಟೆ ನಡುವಿನ ಕಾಯ್ದಿರಿಸದ (Unreserved) ಡೆಮು ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲು ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ.
ವಿಸ್ತರಣೆಯ ವಿವರ:
ರೈಲು ಸಂಖ್ಯೆ 07343 (ಹೊಸಪೇಟೆ–ಅರಸೀಕೆರೆ) ಮತ್ತು ರೈಲು ಸಂಖ್ಯೆ 07344 (ಅರಸೀಕೆರೆ–ಹೊಸಪೇಟೆ) ಡೆಮು ವಿಶೇಷ ರೈಲುಗಳು ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ ಪ್ರತಿ ವಾರದ ಸೋಮವಾರದಿಂದ ಶುಕ್ರವಾರದವರೆಗೆ ಸಂಚರಿಸಲಿವೆ.
ಈ ಹಿಂದೆ ಈ ರೈಲುಗಳ ಸಂಚಾರವನ್ನು 27.11.2026ರವರೆಗೆ ಮಾತ್ರ ಸೂಚಿಸಲಾಗಿತ್ತು. ಇದೀಗ ಈ ಸೇವೆಯನ್ನು 30.11.2026 ರಿಂದ 29.01.2027ರವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.
ಹೊಸಪೇಟೆ ಮತ್ತು ಅರಸೀಕೆರೆ ಮಾರ್ಗದಲ್ಲಿ ಸಂಚರಿಸುವ ದೈನಂದಿನ ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ವಿಸ್ತರಿತ ವಿಶೇಷ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆ ಕೋರಿದೆ.
ರೈಲು ಸಂಖ್ಯೆ 07343: ಹೊಸಪೇಟೆ ಜಂಕ್ಷನ್ – ಅರಸೀಕೆರೆ ಜಂಕ್ಷನ್
ಹೊಸಪೇಟೆ ಜಂಕ್ಷನ್ (HPT): ಹೊರಡುವ ಸಮಯ — 06:30
ತುಂಗಭದ್ರಾ ಡ್ಯಾಮ್ (TBDM): ಆಗಮನ 06:37 / ನಿರ್ಗಮನ 06:38
ವ್ಯಾಸನಕೆರೆ (VYS): ಆಗಮನ 06:47 / ನಿರ್ಗಮನ 06:48
ವ್ಯಾಸ ಕಾಲೋನಿ (VC): ಆಗಮನ 06:57 / ನಿರ್ಗಮನ 06:58
ಮರಿಯಮ್ಮನಹಳ್ಳಿ (MMI): ಆಗಮನ 07:07 / ನಿರ್ಗಮನ 07:08
ಹಂಪಾಪಟ್ಟಣ (HPM): ಆಗಮನ 07:24 / ನಿರ್ಗಮನ 07:25
ಹಗರಿಬೊಮ್ಮನಹಳ್ಳಿ (HBI): ಆಗಮನ 07:39 / ನಿರ್ಗಮನ 07:40
ಕೊಟ್ಟೂರು (KTY): ಆಗಮನ 08:33 / ನಿರ್ಗಮನ 08:35
ಬೆಣ್ಣೆಹಳ್ಳಿ (BEHI): ಆಗಮನ 08:43 / ನಿರ್ಗಮನ 08:45
ಹರಪನಹಳ್ಳಿ (HPHI): ಆಗಮನ 08:59 / ನಿರ್ಗಮನ 09:00
ತೆಲಿಗಿ (TLGI): ಆಗಮನ 09:16 / ನಿರ್ಗಮನ 09:17
ಅಮರಾವತಿ ಕಾಲೋನಿ (AVC): ಆಗಮನ 09:36 / ನಿರ್ಗಮನ 09:38
ದಾವಣಗೆರೆ (DVG): ಆಗಮನ 09:55 / ನಿರ್ಗಮನ 09:57
ತೊಳಹುಣಸೆ (THN): ಆಗಮನ 10:08 / ನಿರ್ಗಮನ 10:09
ಹನುಮನಹಳ್ಳಿ (HNH): ಆಗಮನ 10:13 / ನಿರ್ಗಮನ 10:14
ಕೊಡಗನೂರು (KAG): ಆಗಮನ 10:23 / ನಿರ್ಗಮನ 10:24
ಮಾಯಕೊಂಡ (MYK): ಆಗಮನ 10:31 / ನಿರ್ಗಮನ 10:32
ಚಿಕ್ಕಜಾಜೂರು ಜಂಕ್ಷನ್ (JRU): ಆಗಮನ 10:50 / ನಿರ್ಗಮನ 10:55
ಹೊಳಲ್ಕೆರೆ (HLK): ಆಗಮನ 11:05 / ನಿರ್ಗಮನ 11:06
ನುಲೇನೂರು (NLNR): ಆಗಮನ 11:09 / ನಿರ್ಗಮನ 11:10
ರಾಮಗಿರಿ (RGI): ಆಗಮನ 11:16 / ನಿರ್ಗಮನ 11:17
ಹೊಸದುರ್ಗ ರೋಡ್ (HSD): ಆಗಮನ 11:29 / ನಿರ್ಗಮನ 11:30
ಶಿವನಿ (SHV): ಆಗಮನ 11:40 / ನಿರ್ಗಮನ 11:41
ಅಜ್ಜಂಪುರ (AJP): ಆಗಮನ 11:51 / ನಿರ್ಗಮನ 11:52
ಬೀರೂರು ಜಂಕ್ಷನ್ (RRB): ಆಗಮನ 12:09 / ನಿರ್ಗಮನ 12:11
ಕಡೂರು (DRU): ಆಗಮನ 12:21 / ನಿರ್ಗಮನ 12:22
ದೇವನೂರು (VNR): ಆಗಮನ 12:43 / ನಿರ್ಗಮನ 12:44
ಬಾಣಾವರ (BVR): ಆಗಮನ 12:53 / ನಿರ್ಗಮನ 12:54
ಅರಸೀಕೆರೆ ಜಂಕ್ಷನ್ (ASK): ತಲುಪುವ ಸಮಯ — 14:20
ರೈಲು ಸಂಖ್ಯೆ 07344: ಅರಸೀಕೆರೆ ಜಂಕ್ಷನ್ – ಹೊಸಪೇಟೆ ಜಂಕ್ಷನ್:
ಅರಸೀಕೆರೆ ಜಂಕ್ಷನ್ (ASK)ನಿಂದ ಮಧ್ಯಾಹ್ನ 2:30ಕ್ಕೆ ಹೊರಡುವ ರೈಲು ರಾತ್ರಿ 9.30ಕ್ಕೆ ಹೊಸಪೇಟೆಯನ್ನು ತಲುಪಲಿದೆ. ಈ ರೈಲನ್ನು ಬಳಕೆ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರೈಲು ಸಂಚಾರದ ದಿನಗಳನ್ನು ಹೆಚ್ಚುವರಿಯಾಗಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
















