Asianet Suvarna News Asianet Suvarna News

ವಿಜಯನಗರ: ಹೊಸಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಹಲವರು ಅಸ್ವಸ್ಥ

ಹೊಸಪೇಟೆ ನಗರದ ರಾಣಿಪೇಟೆ, ಚಲುವಾದಿಕೇರಿ ಸೇರಿದಂತೆ ನಾನಾ ಕಡೆ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಇದರಿಂದ ನೀರು ಕಲುಷಿತಗೊಂಡಿರಬಹುದು ಎಂಬ ಶಂಕೆ. 

Woman Dies After Drinking Contaminated Water at Hosapete in Vijayanagara grg
Author
First Published Jan 11, 2023, 9:49 AM IST

ವಿಜಯನಗರ(ಜ.11):  ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿ, ಹಲವರು ಅಸ್ವಸ್ಥರಾದ ಘಟನೆ ನಗರದಲ್ಲಿ ನಡೆದಿದೆ. ನಗರದ ರಾಣಿಪೇಟೆಯ ನಿವಾಸಿ ಲಕ್ಷ್ಮೀ (55) ಮೃತ ಮಹಿಳೆಯಾಗಿದ್ದಾರೆ. 

ಹೊಸಪೇಟೆ ನಗರದ ರಾಣಿಪೇಟೆ, ಚಲುವಾದಿಕೇರಿ ಸೇರಿದಂತೆ ನಾನಾ ಕಡೆ ಕುಡಿವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಇದರಿಂದ ನೀರು ಕಲುಷಿತಗೊಂಡಿದೆ ಅಂತ ಸ್ಥಳೀಯರು ಹೇಳಿದ್ದಾರೆ. 40 ಕ್ಕೂ ಹೆಚ್ಚು ಜನರು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಅಂತ ತಿಳಿದು ಬಂದಿದೆ. 

ಶಿವಮೊಗ್ಗ: ಕುವೆಂಪು ವಿವಿ ಕುಲಸಚಿವೆ ವಿಜಯನಗರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ

ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಮನೆಗಳಿಗೆ ತೆರಳಿದ್ದಾರೆ. ಪೈಪ್ ಲೈನ್ ಕಾಮಗಾರಿ ನಡೆಯುವ ವೇಳೆ ನೀರು ಕಲುಷಿತಗೊಂಡಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. 

Follow Us:
Download App:
  • android
  • ios