ಪುತ್ತೂರು(ಜು.08): ಭಾರಿ ಮಳೆಗೆ ಪಕ್ಕದ ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆ ಸ್ಥಳ​ದಲ್ಲೇ ಮೃತಪಟ್ಟಘಟನೆ ಪುತ್ತೂರು ಪುರಸಭಾ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಕೆಎಸ್‌​ಆ​ರ್‌​ಟಿ​ಸಿ ಬಸ್ಸಿನ ನಿರ್ವಾಹಕರಾಗಿರುವ ಗೋಳಿಕಟ್ಟೆನಿವಾಸಿ ಚಂದ್ರಶೇಖರ ಎಂಬವರ ಪತ್ನಿ ವಸಂತಿ ಯಾನೆ ಶೋಭಾ (49) ಮೃತರು.

ಶೋಭಾ ತನ್ನ ಮನೆಯ ಹಿಂಬಾಗದ ಸ್ಥಳದಲ್ಲಿ ಬೀಡಿ ಕಟ್ಟುತ್ತಿದ್ದ ವೇಳೆಯಲ್ಲಿ ಫಾರೂಕ್‌ ಎಂಬವರಿಗೆ ಸೇರಿದ ಪಕ್ಕದ ಮನೆಯ ಆವರಣ ಗೋಡೆ ಇವರ ಮೈಮೇಲೆ ಕುಸಿದು ಬಿದ್ದು, ಅವರು ಕಲ್ಲು ಮತ್ತು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಮಾಹಿತಿ ಅರಿತು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀ​ಸರು ಮಣ್ಣು ಸರಿಸಿ ದೇಹ ಹೊರ​ತೆ​ಗೆ​ದರೂ ಆ ವೇಳೆದೆ ಸಾವು ಸಂಭ​ವಿ​ಸಿ​ತ್ತು.

ಇ ಪಾಸ್‌ಗೆ ಕೇರಳ ಬ್ರೇಕ್‌: ಕನ್ನಡಿಗ ಉದ್ಯೋಗಿಗಳು ಅತಂತ್ರ!

ಕಳೆದ 3 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಳೆಯದಾದ ಮನೆಯ ಆವರಣಗೋಡೆ ಮಳೆಯ ಕಾರಣದಿಂದ ಕುಸಿದು ಬಿದ್ದಿದೆ ಎನ್ನಲಾಗಿದೆ. ಮೃತರು ಪತಿ, ಇಬ್ಬರು ಪುತ್ರರು, ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಲಕ್ಷ ರು.ಪ​ರಿ​ಹಾರ ಭರ​ವ​ಸೆ:

ವಸಂತಿ ಅವರ ಕುಟುಂಬಕ್ಕೆ ಸರ್ಕಾರವು 5 ಲಕ್ಷ ರು. ಪರಿಹಾರವನ್ನು ತಕ್ಷಣವೇ ನೀಡಲಿದ್ದು, ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಕುಟುಂಬಕ್ಕೆ ಪರಿಹಾರವನ್ನು ಉಸ್ತುವಾರಿ ಸಚಿವರ ಮೂಲಕ ಶೀಘ್ರವಾಗಿ ನೀಡಲಾಗುವುದು. ಅಲ್ಲದೆ ಅಪಾಯದಲ್ಲಿರುವ ಮೇಲ್ಭಾಗದ ಮನೆಯವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ನಳಿ​ನ್‌​ಕು​ಮಾರ್‌ ಕಟೀಲು ತಿಳಿ​ಸಿ​ದ್ದಾ​ರೆ.

ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

ಮಂಗ​ಳ​ವಾರ ಸಂಜೆ ವಸಂತಿ ಮನೆಗೆ ಭೇಟಿ ನೀಡಿದ ಮೃತಳ ಕುಟುಂಬಸ್ಥರಿಗೆ ಸಾಂತ್ವನ ನೀಡಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.