ಬಾಗೇಪಲ್ಲಿ (ಅ.08): ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಪಟ್ಟಣ ಹೊರ ವಲಯದ ಕಾರಕೂರು ಕ್ರಾಸ್‌ ಬಳಿಯ ನೂತನ ಲೇಔಟನಲ್ಲಿ ನಡೆದಿದ್ದು ವಿಷಯ ತಿಳಿದ ಕೂಡಲೇ ಘಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಬೇಟಿ ನಿಡಿ ಪರಿಶೀಲಿಸಿದರು.

ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಕಾರಕೂರು ಕ್ರಾಸ್‌ ಬಳಿ ಇರುವ ಲೇಔಟ್‌ನಲ್ಲಿ ಬುಧುವಾರ ಅರೆಬೆತ್ತಲೆ ಸ್ಥಿತಿಯಲ್ಲಿ ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದ್ದು ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನ ದಳ ಆಗಮಿಸಿ ಪೋಲಿಸ್‌ ಶ್ವಾನ ಕಾರಕೂರು ಕ್ರಾಸ್‌ನಲ್ಲಿರುವ ಡಾಬಾ ತನಕ ಹೋಗಿ ವಾಪಸ್‌ ಬಂದಿವೆ,

ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಿದ್ದ ಈ ನಟೋರಿಯಸ್ ಕಿಲ್ಲರ್..!

ಕೊಲೆಗೀಡಾದ ಮಹಿಳೆಯನ್ನು ಉಸಿರುಕಟ್ಟಿಕೊಲೆ ಮಾಡಿರುವ ಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕೊಲೆಗೆ ಸಂಬಂಧಿಸಿರುವ ಆರೋಪಿಗಳನ್ನು ಪತ್ತೆ ಮಾಡುವುದಾಗಿ ಎಸ್ಪಿ ತಿಳಿಸಿದರು. ಈ ಸಂದರ್ಭದಲ್ಲಿ ಡಿ.ವೈ.ಎಸ್‌.ಪಿ ಕೆ.ರವಿಶಂಕರ್‌. ಬಾಗೇಪಲ್ಲಿ ವೃತ್ತ ನಿರೀಕ್ಷ ನಯಾಜ್‌ ಬೇಗ್‌, ಉಪನಿರೀಕ್ಷಕ ಸುನಿಲ್‌ಕುಮಾರ್‌ ಇದ್ದರು.