ಹಾಸನ(ಮೇ.15): ಕ್ವಾರಂಟೈನ್‌ ಕೇಂದ್ರದಲ್ಲಿರುವವರು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಆಟ, ಓಡಾಟ, ಕುಣಿದಾಡುತ್ತಾ ಟಿಕ್‌ಟಾಕ್‌ ಮಾಡಿ ವಿಡಿಯೋ ಹರಿಯ ಬಿಡುತ್ತಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಗುರುವಾರ ನಡೆದಿದೆ. 

"

ಚನ್ನರಾಯಪಟ್ಟಣ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇದೇ ಹಾಸ್ಟೆಲ್‌ನಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕು ದೃಢವಾಗಿರುವುದು ತಿಳಿದಿದ್ದರೂ ಕ್ವಾರಂಟೈನ್‌ನಲ್ಲಿ ಇರುವವರು ಒಟ್ಟಿಗೆ ಕೂತು ಚೌಕಾಬಾರ ಆಡುತ್ತಿದ್ದಾರೆ. 

‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!

ಸಾಮಾಜಿಕ ಅಂತರ ಮರೆತಿದ್ದಾರೆ. ಜೊತೆಗೆ ಟಿಕ್‌ಟಾಕ್‌ ವಿಡಿಯೋ ಮಾಡಿ, ವೈರಲ್‌ ಮಾಡಲಾಗುತ್ತಿದೆ. ಮುಂಬೈನಿಂದ ನಾವು ರಾಜ್ಯಕ್ಕೆ ಬರುತ್ತೇವೆ ಎಂದು ಬೇಡಿಕೊಂಡಿದ್ದ ಮಹಿಳೆ ಕ್ವಾರಂಟೈನ್‌ನಲ್ಲಿದ್ದುಕೊಂಡೇ ಟಿಕ್‌ಟಾಕ್‌, ಮಸ್ತ್‌ ಡ್ಯಾನ್ಸ್‌ ಮಾಡ್ತಿದ್ದಾರೆ. ಕ್ವಾರಂಟೈನ್‌ನಲ್ಲಿದ್ದವರ ಬೇಜವಾಬ್ದಾರಿ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.