ಬೆಳಗಾವಿ(ಜ.09): ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನ ಕೆರೆಗೆ ಎಸೆದು ಸಾಯಿಸಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಣಮಾಪುರ ಗ್ರಾಮ ಗುರುವಾರ ನಡೆದಿದೆ. ಮೃತರನ್ನ ತಾಯಿ‌ ಲಕ್ಷ್ಮವ್ವಾ ವಡ್ಡರ್(35) ಮಕ್ಕಳಾದ ಕೀರ್ತಿ(10), ಶ್ರಾವಣಿ(3) ಎಂದು ಗುರುತಿಸಾಗಿದೆ. 

ತಾಯಿ ಲಕ್ಷ್ಮವ್ವಾ ಮೊದಲು ಇಬ್ಬರು ಮಕ್ಕಳನ್ನ ಕೆರೆ ಎಸೆದು ಸಾಯಿಸಿದ್ದಾಳೆ. ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.  ತಾಯಿಯ ತಪ್ಪು ನಿರ್ಧಾರಕ್ಕೆ ಇನ್ನೂ ಬದುಕಿ ಬಾಳಬೇಕಿದ್ದ ಪುಟ್ಟ ಮಕ್ಕಳು ಬಲಿಯಾಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲಕ್ಷ್ಮವ್ವಾ ತನ್ನ ಇಬ್ಬರು ಮಕ್ಕಳನ್ನು ಏಕೆ ಕೊಂದಳು ಮತ್ತೆ ತಾನೂ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.