ಬೆಂಗಳೂರು [ಡಿ.06]: ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ರಾಜಾಜಿನಗರದ ಪ್ರಶಾಂತ್ ನಗರದ ಆಶಾ[30] ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಆಕೆಯ ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುತ್ತಿದ್ದನೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

15 ವರ್ಷಗಳ ಹಿಂದೆ ಆಶಾ ಹಾಗೂ ಸತ್ಯನಾರಾಯಣ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ಒಂದು ಮಗು ಕಳೆದ ಏಳು ತಿಂಗಳ ಹಿಂದೆ ಮೃತೊಟ್ಟಿದ್ದು, ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸತ್ಯನಾರಾಯಣ ಕುಟುಂಬ ಅವರು ಕಳೆದ ಆರು ತಿಂಗಳ ಹಿಂದಷ್ಟೇ  ಬೆಂಗಳೂರಿಗೆ ವಾಪಸಾಗಿ ಇಲ್ಲಿ ನೆಲೆಸಿತ್ತು. 

ದೇವರ ರೂಪದಲ್ಲಿ ಬಂದ ಬೆಂಗ್ಳೂರು ಪೊಲೀಸ್ರು: ಸಾವಿನಿಂದ ನವ ದಂಪತಿ ಪಾರು..

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ನಿತ್ಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ.  ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಆಶಾ ಸಾವಿಗೀಡಾಗಿದ್ದು, ಪತಿಯೇ ಆಕೆಯ ಸಾವಿಗೆ ಕಾರಣ ಎನ್ನಲಾಗುತ್ತಿದೆ.