ಸೊಸೆಯಂದಿರ ಕಾಟ ತಾಳಲಾರದೇ ಮಲಪ್ರಭಾ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯೆ ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಸೇತುವೆ ಬಳಿ ಮಲಪ್ರಭಾ ನದಿಗೆ ಹಾರಿದ ವೃದ್ಧೆ
ಬಾದಾಮಿ(ಸೆ.06) : ಸೊಸೆಯಂದಿರ ಕಾಟ ತಾಳಲಾರದೇ ಮಲಪ್ರಭಾ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಸೇತುವೆ ಬಳಿ ಮಲಪ್ರಭಾ ನದಿಗೆ ವೃದ್ಧೆ ಹಾರಿದ್ದು, ಈ ವೇಳೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮಂಗಳೂರು ಗ್ರಾಮದ ಯುವಕರು ವೃದ್ಧೆಯನ್ನು ರಕ್ಷಿಸಿದ್ದಾರೆ.

ಹಾಸನ; ರಾತ್ರಿ ಘೋರ ಅಪಘಾತ..ಹೆಂಡತಿ ಸ್ಟಾಟ್ ಡೆತ್.. ಮುಂಜಾನೆ ಪ್ರಕರಣವೇ ಬೇರೆ!
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ವೃದ್ಧೆ, ಸೊಸೆಯಂದಿರ ಕಾಟ ತಾಳಲಾರದೇ ಮನೆಬಿಟ್ಟು ಬಂದಿದ್ದಾಳೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ವೃದ್ಧೆ ನಿರ್ಧರಿಸಿದ್ದು, ಮಲಪ್ರಭಾ ನದಿಗೆ ಹಾರಿದ್ದಾಳೆ.
ಕೊನೆಗೆ ಯುವಕರು ಆಕೆಯನ್ನು ರಕ್ಷಿಸಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ವೃದ್ಧೆ ತನ್ನ ಗೋಳನ್ನು ಹೇಳಿಕೊಂಡಿದ್ದು, ಯುವಕರು ಆಕೆಯನ್ನು ಶಿವಯೋಗ ಮಂದಿರಕ್ಕೆ ಬಿಟ್ಟು ಬಂದಿದ್ದಾರೆ. ಆತ್ಮಹತ್ಯೆ ಯತ್ನದ ವೇಳೆ ವೃದ್ಧೆಯ ತಲೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
