ತಂತ್ರಜ್ಞಾನ ಬಳಕೆಯಿಂದ ಆಸ್ತಿ ದಾಖಲೆ ಕಲೆ ಹಾಕುವುದು ಸುಲಭ; ಶಾಸಕ ವೀರಣ್ಣ ಚರಂತಿಮಠ 

ನವನಗರದ ಯುನಿಟ್-1 ಮತ್ತು 2 ರ ವ್ಯಾಪ್ತಿಗೆ ಒಳಪಡುವ ಅಧಿಕೃತ ಮಾಲಿಕತ್ವದ ದಾಖಲಾತಿಗಳ (ಪಾಪರ್ಟಿ ಕಾರ್ಡ್) ವಿತರಣೆಗೆ  ಶಾಸಕ ವೀರಣ್ಣ ಚರಂತಿಮಠ ಸಾಂಕೇತಿಕವಾಗಿ ಬುಧವಾರ ಚಾಲನೆ ನೀಡಿದರು.

With the use of technology it is easy to property records says charanti math bagalkot rav

ಬಾಗಲಕೋಟೆ (ನ.2): ನವನಗರದ ಯುನಿಟ್-1 ಮತ್ತು 2 ರ ವ್ಯಾಪ್ತಿಗೆ ಒಳಪಡುವ ಅಧಿಕೃತ ಮಾಲಿಕತ್ವದ ದಾಖಲಾತಿಗಳ (ಪಾಪರ್ಟಿ ಕಾರ್ಡ್) ವಿತರಣೆಗೆ  ಶಾಸಕ ವೀರಣ್ಣ ಚರಂತಿಮಠ ಸಾಂಕೇತಿಕವಾಗಿ ಬುಧವಾರ ಚಾಲನೆ ನೀಡಿದರು.

Bagalkot News : ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ 

  ನವನಗರದ ಸೆಕ್ಟರ್ ನಂ.52ರಲ್ಲಿರುವ ವೀರಭದ್ರೇಶ್ರ ದೇವಸ್ಥಾನದ ಆವರಣದಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲಾತಿಗಳು ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕರಡು ಆಸ್ತಿಗಳ ಪ್ರಕಟಣಾ ಪತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿ ಒಟ್ಟು 50 ಸಾವಿರ ಆಸ್ತಿಗಳು ಬರುತ್ತಿದ್ದು, ಈ ಪೈಕಿ 34 ಸಾವಿರ ಆಸ್ತಿಗಳ ಮಾಲಿಕತ್ವದ ದಾಖಲಾತಿಗಳು ಸಿದ್ದಗೊಂಡಿವೆ. ಇನ್ನು 16 ಸಾವಿರ ದಾಖಲಾತಿಗಳು ಕೆಲಸ ಮುಕ್ತಾಯದ ಹಂತದಲ್ಲಿರುವುದಾಗಿ ತಿಳಿಸಿದರು.

  ಆಸ್ತಿಗಳ ಪಾಪರ್ಟಿ ಕಾರ್ಡ್ ಹಾಗೂ ಕೆಜೆಪಿ ಆಗದೇ ಆಸ್ತಿಯ ವಾಟ್ನಿ, ಸಾಲ ತೆಗೆದುಕೊಳ್ಳಲು ಸಾಧ್ಯವಾಗುವದಿಲ್ಲ. ಈ ಕುರಿತು ಅನೇಕ ಜನರ ತೊಂದರೆಯನ್ನು ಮನಗಂಡು 2021 ರಲ್ಲಿಯೇ ಕೆಲಸ ಪ್ರಾರಂಭಿಸಲಾಯಿತು. ಈ ಕಾರ್ಯಕ್ಕೆ ಜೂನ್ ಮಾಹೆಯಲ್ಲಿ ಡ್ರೋಣ ಹಾರಾಟದ ಜೊತೆಗೆ ರೋವರ್‌ಗಳ ಚಾಲನೆ ನೀಡಲಾಯಿತು. ಆಗಸ್ಟ್ ಮಾಹೆಯಲ್ಲಿ ಭೂದಾಖಲೆ ಇಲಾಖೆಯ ಆಯುಕ್ತರು ಸೆಕ್ಟರ್ ನಂ.21ಕ್ಕೆ ಭೇಟಿ ನೀಡಿ ಅಧಿಕೃತ ಚಾಲನೆ ನೀಡಿದರು. ಅದರಂತೆ ಸೆಕ್ಟರ್ ನಂ.8ರಲ್ಲಿ ಆಸ್ತಿಗಳ ಅಳತೆ ಕೆಲಸಕ್ಕಾಗಿ ಚಾಲನೆ ನೀಡಿದ ನಂತರ ನಗರಾಸ್ತರಿಗಳ ಅಳತೆ ಹಾಗೂ ಹೆಚ್ಚುವರಿ ರೋವರಗಳ ಮುಖಾಂತರ ಕೆಲಸ ಪ್ರಾರಂಭಿಸಲಾಯಿತು ಎಂದರು.

  ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಅತೀ ಕಡಿಮೆ ಅವಧಿಯಲ್ಲಿ ನಗರದ ಆಸ್ತಿಗಳ ದಾಖಲೆಗಳನ್ನು ಕಲೆ ಹಾಕಲು ಸಾದ್ಯವಾಯಿತು. ಈ ಪಾಪರ್ಟಿ ದಾಖಲಾತಿಯಲ್ಲಿ ನಕಾಶೆ, ಗೂಗಲ್ ಲಿಂಕ್ ಮತ್ತು ಮನೆ ಮಾಲಿಕರ ಭಾವಚಿತ್ರ ಒಳಗೊಂಡಿರುತ್ತದೆ. ದಾಖಲಾತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಶಾಸಕರು ತಿಳಿಸಿದರು. 

  ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಮಾತನಾಡಿ ಈ ಹಿಂದೆ ಆಸ್ತಿಗಳ ದಾಖಲಾತಿ ಕಲೆ ಹಾಕಲು ಸೂಕ್ತ ವ್ಯವಸ್ಥೆ ಮಾಡಲು ತುಂಬಾ ತೊಂದರೆಯಾಗುತ್ತಿತ್ತು. ಈಗ ತಂತ್ರಜ್ಞಾನ ಬಳಕೆಯಿಂದ ಅಧಿಕೃತ ದಾಖಲೆ ಪಡೆಯಲು ಸಾಧ್ಯವಾಗುತ್ತಿದೆ. ನವನಗರದಲ್ಲಿ ಚೆನ್ನಾಗಿ ಲೇಔಟ್ ಆಗಿದ್ದು, ವಿದ್ಯಾಗಿರಿ ಮತ್ತು ಹಳೆಯ ಬಾಗಲಕೋಟೆಯಲ್ಲಿ ಸರ್ವೆ ಕಾರ್ಯ ಮಾಡಲಾಗುತ್ತಿದ್ದು, ಸಾರ್ವಜನಿಕರು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿದಲ್ಲಿ ಸರ್ವೆ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುವದಿಲ್ಲ. ಈ ಕಾರ್ಯದಲ್ಲಿ ಸಹಕರಿಸಬೇಕು ಅಂದಾಗ ಮಾತ್ರ ತಮ್ಮ ಆಸ್ತಿಗಳ ಅಧಿಕೃತ ದಾಖಲಾತಿ ನಿಮ್ಮ ಕೈ ಸೇರಲಿದೆ ಎಂದರು.

  ಪ್ರಾಸ್ತಾವಿಕವಾಗಿ ಮಾತನಾಡಿ ಭೂದಾಖಲೆಗಳ ಉಪನಿರ್ದೇಶಕ ಮಹಾಂತೇಶ ಮುಳಗುಂದ ಅವರು ನಗರದ ಅಧಿಕೃತ ಮಾಲಿಕತ್ವದ ದಾಖಲಾತಿ ಯೋಜನೆ ಉದ್ದೇಶ ಪ್ರತಿ ಆಸ್ತಿಗಳ ಮಾಲಿಕತ್ವ ದಾಖಲೆ ನಿರೂಪಿಸುವುದು. ಕಳೆದ ಎರಡುವರೆ ತಿಂಗಳಲ್ಲಿ ಡ್ರೋಣ ಮುಖಾಂತರ ಕೆಲಸ ನಿರ್ವಹಿಸುತ್ತಿದ್ದು, ಯುನಿಟ್-1 ಮತ್ತು 2 ಹಾಗೂ ವಿದ್ಯಾಗಿರಿ ಸೇರಿ 34 ಸಾವಿರ ಆಸ್ತಿಗಳ ದಾಖಲಾತಿ ಕಾರ್ಯ ಮಾಡಲಾಗಿದ್ದು, ಕಚ್ಚಾ ಕರಡು ಪ್ರತಿ ನೀಡಲಾಗುತ್ತಿದೆ. ಈ ಬಗ್ಗೆ ತರಕಾರು ಇದ್ದಲ್ಲಿ 30 ದಿನಗಳ ಒಳಗಾಗಿ ಬಿಟಿಡಿಎ ಕಚೇರಿಗೆ ಸಲ್ಲಿಸಿ ದಾಖಲೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಈ ಕಾರ್ಯಕ್ಕೆ 10 ಜನ ಭೂಮಾಪಕರು ಕೆಲಸ ನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.

Bagalkote: ಮನ್ ಕಿ ಬಾತ್‌ನಲ್ಲಿ ಬಿಲ್‌ಕೆರೂರ ಗ್ರಾಮದ ಕೆರೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ

  ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ನಗರಸಭೆ ಉಪಾದ್ಯಕ್ಷ ಬಸವರಾಜ ಅವರಾದಿ, ಬಿಟಿಡಿಎ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಶಿವಾನಂದ ಟವಳಿ, ಅಂಬಾಜಿ ಜೋಶಿ, ವಾರ್ಡನ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios