ಬಜೆಟ್ಟಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವರೇ?

ಕಲ್ಪತರು ನಾಡಿನ ರೈತರ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿ. ಇದೀಗ ಇದರ ಬೆಲೆ ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ ತೀರಾ ಕಡಿಮೆಗೆ ಕುಸಿಯುವ ಮೂಲಕ ಕ್ವಿಂಟಲ್‌ ಕೊಬ್ಬರಿ ಬೆಲೆ ಕೇವಲ .7000ಕ್ಕೆ ಕುಸಿದಿದ್ದು, ಕೊಬ್ಬರಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದ ಕೈ ಸರ್ಕಾರ ಚುನಾವಣೆಗೂ ಮುಂಚೆ ನೀಡಿದ್ದ ಬೆಲೆ ಏರಿಕೆ ವಾಗ್ದಾನವನ್ನು ಜು.7ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಈಡೇರಿಸುವರೇ ಎಂಬ ಪ್ರಶ್ನೆ ತಾಲೂಕಿನ ತೆಂಗು ಬೆಳೆಗಾರರನ್ನು ಬಿಟ್ಟೂಬಿಡದೆ ಕಾಡತೊಡಗಿದೆ.

Will support price for fat be given in the budget? snr

 ತಿಪಟೂರು :  ಕಲ್ಪತರು ನಾಡಿನ ರೈತರ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿ. ಇದೀಗ ಇದರ ಬೆಲೆ ಕೇಂದ್ರ ಸರ್ಕಾರದ ಬೆಂಬಲ ಬೆಲೆಗಿಂತ ತೀರಾ ಕಡಿಮೆಗೆ ಕುಸಿಯುವ ಮೂಲಕ ಕ್ವಿಂಟಲ್‌ ಕೊಬ್ಬರಿ ಬೆಲೆ ಕೇವಲ .7000ಕ್ಕೆ ಕುಸಿದಿದ್ದು, ಕೊಬ್ಬರಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದ ಕೈ ಸರ್ಕಾರ ಚುನಾವಣೆಗೂ ಮುಂಚೆ ನೀಡಿದ್ದ ಬೆಲೆ ಏರಿಕೆ ವಾಗ್ದಾನವನ್ನು ಜು.7ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಈಡೇರಿಸುವರೇ ಎಂಬ ಪ್ರಶ್ನೆ ತಾಲೂಕಿನ ತೆಂಗು ಬೆಳೆಗಾರರನ್ನು ಬಿಟ್ಟೂಬಿಡದೆ ಕಾಡತೊಡಗಿದೆ.

2023ರ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭಕ್ಕೂ 7-8 ತಿಂಗಳ ಹಿಂದಿನಿಂದಲೂ ಕೊಬ್ಬರಿ ಬೆಲೆ ತೀವ್ರವಾಗಿ ಕುಸಿಯುತ್ತಲೇ ಇತ್ತು. ಈ ಸಂದರ್ಭದಲ್ಲಿ ಇಲ್ಲಿನ ತೆಂಗು ಬೆಳೆಗಾರರು ಹಾಗೂ ರೈತಪರ ಸಂಘಟನೆಗಳು ಮತ್ತು ಕೆಲ ರಾಜಕೀಯ ಪಕ್ಷಗಳು ಕೊಬ್ಬರಿ ಬೆಲೆ ಕುಸಿತದ ವಿರುದ್ಧ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಧರಣಿ ಸಹಿತ ಸಾಕಷ್ಟುಹೋರಾಟ, ತಿಪಟೂರು ಬಂದ್‌ನಂತಹ ಪ್ರತಿಭಟನೆಗಳನ್ನು ನಡೆಸಿದ್ದವು. ಸತತ ಒಂದು ತಿಂಗಳ ಕಾಲ ತಾಲೂಕಿನ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ವಿವಿಧ ರೈತಪರ ಸಂಘಟನೆಗಳು ತೆಂಗು ಬೆಳೆಗಾರರು ಸಹಯೋಗದೊಂದಿಗೆ ಅಹೋರಾತ್ರಿ ಧರಣಿ ಹಮ್ಮಿಕೊಂಡು ಕೊಬ್ಬರಿಗೆ ಕೇಂದ್ರ ಸರ್ಕಾರ 20 ಸಾವಿರ ರು.ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಹಾಗೂ ರಾಜ್ಯ ಸರ್ಕಾರ 2 ಸಾವಿರ ರು. ಪೋ›ತ್ಸಾಹ ಬೆಲೆ ನೀಡಬೇಕೆಂದು ಒತ್ತಾಯಿಸಿದ್ದವು. ತದನಂತರ ಚುನಾವಣೆ ಪ್ರಾರಂಭವಾದ್ದರಿಂದ ಹೋರಾಟಗಳೂ ಸಹ ಬಂದ್‌ ಆದವು.

ಚುನಾವಣೆ ಪ್ರಾರಂಭವಾದ ನಂತರ ಚುನಾವಣಾ ಪ್ರಚಾರಕ್ಕಾಗಮಿಸಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಾಲೂಕಿನ ತೆಂಗು ಬೆಳೆಗಾರರನ್ನುದ್ದೇಶಿಸಿ ಕೊಬ್ಬರಿ ಬೆಳೆಗಾರರು ಸಂಕಷ್ಟದಲ್ಲಿದ್ದರೂ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ ಕೊಬ್ಬರಿ ಬೆಂಬಲ ಬೆಲೆ ಹೆಚ್ಚು ಮಾಡಲಿಲ್ಲ ಹಾಗೂ ಪೋ›ತ್ಸಾಹ ಧನವನ್ನೂ ನೀಡಲಿಲ್ಲ. ತೆಂಗು ಬೆಳೆಗಾರರೆ ನೀವು ಯಾವ ಕಾರಣಕ್ಕೂ ಬಿಜೆಪಿಗೆ ಮತ ನೀಡದೆ, ನಮ್ಮನ್ನು ಬೆಂಬಲಿಸಿ ಮತ ನೀಡಿ. ನಾವು ಅಧಿಕಾರಕ್ಕೆ ಬಂದ ತಕ್ಷಣ ಕೊಬ್ಬರಿಗೆ ಪೋ›ತ್ಸಾಹ ಧನ ನೀಡುವುದರೊಂದಿಗೆ .15 ಸಾವಿರಕ್ಕೆ ಕಡಿಮೆಯಾಗದಂತೆ ಬೆಲೆ ಹೆಚ್ಚಿಸುತ್ತೇವೆ ಎಂದು ಬಹಿರಂಗಸಭೆ ಹಾಗೂ ರೋಡ್‌ಶೋನಲ್ಲಿ ಕಲ್ಪತರು ನಾಡಿನ ಮತದಾರರಿಗೆ ವಾಗ್ದಾನ ನೀಡುವ ಮೂಲಕ ಇಲ್ಲಿಯೂ ಕಾಂಗ್ರೆಸ್‌ ಗೆಲ್ಲುವಂತೆ ನೋಡಿಕೊಂಡಿದ್ದರು.

ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 45 ದಿನಗಳಾದರೂ ಕೊಬ್ಬರಿ ಬೆಲೆ ಬಗ್ಗೆ ತಾವು ನೀಡಿದ್ದ ಆಶ್ವಾಸನೆ ಬಗ್ಗೆ ತುಟಿ ಬಿಚ್ಚಿಲ್ಲ. ಇಲ್ಲಿನ ಶಾಸಕರೂ ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದ್ದರೂ ಕೊಬ್ಬರಿ ಬೆಲೆ ಹೆಚ್ಚಳದ ಬಗ್ಗೆ ಸರ್ಕಾರದ ಬಳಿ ಮಾಡಿಕೊಂಡಿರುವ ಮನವಿ ಬಗ್ಗೆಯೂ ತುಟಿ ಬಿಚ್ಚಿಲ್ಲ. ಆದರೆ ಸಂಕಷ್ಟದಲ್ಲಿರುವ ಕೊಬ್ಬರಿ ಬೆಳೆಗಾರರು ಮಾತ್ರ ಗ್ಯಾರಂಟಿ ವಾಗ್ದಾನ ನೀಡಿದಂತೆ ಕಾಂಗ್ರೆಸ್‌ ಸರ್ಕಾರ ಕೊಬ್ಬರಿ ಬೆಲೆಯನ್ನು ಇವತ್ತು ಹೆಚ್ಚಿಸಬಹುದು, ನಾಳೆ ಹೆಚ್ಚಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ರತ್ತ ನೋಡುತ್ತಲೇ ಇದ್ದಾರೆ. ಆದರೆ ಸರ್ಕಾರ ಮಾತ್ರ ಗೃಹಲಕ್ಷ್ಮಿ, ಅಕ್ಕಿ, ಫ್ರೀ ಬಸ್‌ ಪ್ರಯಾಣದಂತಹ ಗ್ಯಾರಂಟಿಗಳ ಬಗ್ಗೆಯೇ ಹಗಲು ರಾತ್ರಿ ತಲೆ ಕೆಡಿಸಿಕೊಂಡಿರುವುದು ಬಿಟ್ಟರೆ, ಕಲ್ಪತರು ನಾಡಿನ ಕೊಬ್ಬರಿ ಬೆಳೆಗಾರರ ಸಂಕಷ್ಟಕಣ್ಣಿಗೆ ಕಟ್ಟಿದಂತೆ ಕಾಣುತ್ತಿದ್ದರೂ ಅವರ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ಮಾಡುವ ಮೂಲಕ ರಾಜ್ಯದ ಐದಾರು ಜಿಲ್ಲೆಯ ಲಕ್ಷಾಂತರ ಕೊಬ್ಬರಿ ಬೆಳೆಗಾರರ ಆಕ್ರೋಶಕ್ಕೆ ಗುರಿಯಾಗುತ್ತಿರುವುದು ಮಾತ್ರ ಸತ್ಯ.

ಕಳೆದ 10 ವರ್ಷಗಳ ಹಿಂದೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ರು.10 ಸಾವಿರಕ್ಕೂ ಹೆಚ್ಚು ಇತ್ತು. ಆದರೆ ಈಗ ಆ ಬೆಲೆ ದುಪ್ಪಟ್ಟಾಗಬೇಕಿದ್ದರೂ, ಕೇವಲ ರು.10 ಸಾವಿರಕ್ಕೆ ಕುಸಿಯುವ ಮೂಲಕ ಕೊಬ್ಬರಿ ಬೆಳೆಗಾರರ ಬದುಕನ್ನೇ ಬುಡಮೇಲು ಮಾಡಿದೆ. ಚುನಾವಣಾ ಸಮಯದಲ್ಲಿ ನಮ್ಮ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೊಬ್ಬರಿಗೆ ಪೋ›ತ್ಸಾಹ ಬೆಲೆ ನೀಡಿ ಸಹಾಯ ಮಾಡುತ್ತೇವೆಂದು ನೀಡಿದ್ದ ಆಶ್ವಾಸನೆಯನ್ನು ಈ ಬಾರಿಯ ತಮ್ಮ ಮೊದಲ ಬಜೆಟ್‌ನಲ್ಲಿ ಈಡೇರಿಸಿ ಎಲ್ಲ ತೆಂಗು ಬೆಳೆಗಾರರ ಸಹಾಯಕ್ಕೆ ನಿಲ್ಲಲ್ಲಿದ್ದಾರೆಂಬ ನಂಬಿಕೆ ನಮಗಿದೆ.

- ಲೋಕೇಶ್ವರ್‌, ಕೊಬ್ಬರಿ ಬೆಲೆ ಹೋರಾಟಗಾರ ಹಾಗೂ ಕಾಂಗ್ರೆಸ್‌ ಮುಖಂಡರು, ತಿಪಟೂರು.

18 ಸಾವಿರ ರು.ಗಳಿದ್ದ ಕೊಬ್ಬರಿ ಬೆಲೆ ಕಳೆದ ವರ್ಷದಿಂದ ಒಂದೇ ಸಮನೆ ಇಳಿಕೆಯಾಗುತ್ತ ಸದ್ಯ 7000 ರು. ಗೆ ತೀವ್ರ ಕುಸಿತ ಕಾಣುವ ಮೂಲಕ ಕೊಬ್ಬರಿ ಬೆಳೆಗಾರರು ದೊಡ್ಡ ಸಂಕಟಕ್ಕೆ ಸಿಲುಕಿದ್ದಾರೆ. ಚುನಾವಣಾ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೀಡಿದ್ದ ವಾಗ್ದಾನದಂತೆ ಕೊಬ್ಬರಿ ಬೆಲೆಯನ್ನು 15 ಸಾವಿರ ರು.ಗಳಿಗೆ ಏರಿಸಬೇಕು. ಇಲ್ಲವಾದಲ್ಲಿ ನಮ್ಮ ರೈತ ಸಂಘಟನೆಗಳು ಹಾಗೂ ತೆಂಗು ಬೆಳೆಗಾರರು ರಾಜ್ಯಾದ್ಯಂತ ಉಗ್ರಹೋರಾಟ ಹಾಗೂ ಅಧಿವೇಶನದ ಸಮಯದಲ್ಲಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲು ಮಾತುಕತೆ ಮಾಡುತ್ತಿದ್ದೇವೆ.

- ಪೊ›.ಟಿ.ಬಿ.ಜಯಾನಂದಯ್ಯ, ರೈತಸಂಘದ ಮುಖಂಡರು, ತಿಪಟೂರು.

Latest Videos
Follow Us:
Download App:
  • android
  • ios