Asianet Suvarna News Asianet Suvarna News

ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೇಕಾಬಿಟ್ಟಿ ದಾಂಧಲೆ: ಆನೆಗಳ ಭಯಕ್ಕೆ ತೋಟದ ಕಡೆ ತೆರಳದ ಕಾರ್ಮಿಕರು

ಇಲ್ಲಿ ಜನರಿಗೆ ಜೀವನ ನಡೆಸೋದೆ ದುಸ್ತರವಾಗಿದೆ. ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬೇಕೋ, ಜೀವ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ. ಯಾವ ಸಂದರ್ಭದಲ್ಲಿ ಆತಂಕ ಎದುರಾಗುತ್ತದೋ ಎನ್ನುವ ಭಯ ಆವರಿಸಿದೆ.

Wild Elephants Spotted In Chikkamagaluru Taluk gvd
Author
Bangalore, First Published May 15, 2022, 8:49 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.15): ಇಲ್ಲಿ ಜನರಿಗೆ ಜೀವನ ನಡೆಸೋದೆ ದುಸ್ತರವಾಗಿದೆ. ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಬೇಕೋ, ಜೀವ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ. ಯಾವ ಸಂದರ್ಭದಲ್ಲಿ ಆತಂಕ ಎದುರಾಗುತ್ತದೋ ಎನ್ನುವ ಭಯ ಆವರಿಸಿದೆ. ಇದು ಆನೆ ಹಾವಳಿಯಿಂದ (Wild Elephants) ಅಕ್ಷರಶಃ ತತ್ತರಿಸಿ ಹೀಗಿರುವ ಚಿಕ್ಕಮಗಳೂರು (Chikkamagaluru) ಜಿಲ್ಲೆ ಮಲೆನಾಡಿನ ಕೆಲ ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಕಳವಳಕಾರಿ ವಾತಾವರಣ.

ಮಲೆನಾಡನ್ನು ಬೆಚ್ಚಿ ಬೀಳಿಸಿದ ಕಾಡಾನೆ ಹಿಂಡು: ಜಿಲ್ಲೆಯ ಮಲೆನಾಡಿನ ಪ್ರದೇಶಗಳಲ್ಲಿ ದಟ್ಟವಾಗಿರುವ ಅರಣ್ಯದಲ್ಲಿರುವ ಆನೆಗಳು ಇತ್ತೀಚಿನ ದಿನಗಳಲ್ಲಿ ಹಿಂಡು ಹಿಂಡಾಗಿ ಜನವಸತಿ ಪ್ರದೇಶಗಳಿಗೆ ಹೊತ್ತಿಲ್ಲದ ಹೊತ್ತಲ್ಲಿ ನುಗ್ಗುತ್ತಿವೆ. ತೋಟ-ಗದ್ದೆಗಳಿಗೆ ನುಗ್ಗಿ ಹಾವಳಿ ಇಡುತ್ತಿರುವುದರಿಂದ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗುತ್ತಿದೆ. ವರ್ಷವೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆ ಕೆಲ ಕ್ಷಣ ಗಳಲ್ಲೇ ಮಣ್ಣು ಪಾಲಾಗುತ್ತಿದೆ. ಕಾಫಿ, ಏಲಕ್ಕಿ, ಬಾಳೆತೋಟ, ಅಡಿಕೆ ಗಿಡಿಗಳನ್ನು ನಾಶಮಾಡುತ್ತಿದೆ. ಇದುಮಾತ್ರವಲ್ಲ ಕಾಫಿ ತೋಟದಲ್ಲೇ ಕಾಡಾನೆ ಆಶ್ರಯ ತಾಣವಾಗಿ ಪರಿಣಾಮಸಿದೆ. ಇದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸುತ್ತುಮತ್ತಲಿನ ಪ್ರದೇಶದಲ್ಲಿ ಇರುವುದರಿಂದ ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದಿದೆ. ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. 

Hassan: ದಿನ ಕಳೆದಂತೆ ಹೆಚ್ಚಿದ ಕಾಡಾನೆಗಳ ಸಮಸ್ಯೆ!

ತೋಟದಲ್ಲಿ ನೀರಾಯಿಸುವ ಮೋಟರ್, ಗೇಟ್ ಎಲ್ಲವನ್ನೂ ಮುರಿದು ದಾಂಧಲೆ: ಒಂಬತ್ತು ಕಾಡಾನೆಗಳ ದಾಳಿಯಿಂದ ಕಾಫಿ, ಅಡಿಕೆ-ಬಾಳೆ ಸಂಪೂರ್ಣ ನಾಶವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಸಂಸೆ, ಬಾಳೆಹಳ್ಳಿ, ಬಾರ್ಗಲ್, ಮುಳ್ಳುಂಡೆ, ಕೆಳಗೂರು ಗ್ರಾಮದಲ್ಲಿ ನಡೆದಿದೆ. ಕಾಡಂಚಿನಲ್ಲೇ ಬೀಡು ಬಿಟ್ಟಿರೋ ಕಾಡಾನೆಗಳು ಬೇಕಾಬಿಟ್ಟಿ ದಾಳಿ ಮಾಡುತ್ತಿದ್ದು, ರೈತರ ತೋಟಗಳಿಗೂ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಮೂರು ಮರಿ ಆನೆ. ಎರಡು ಗಂಡು, ನಾಲ್ಕು ಹೆಣ್ಣಾನೆಗಳಿಂದ ಹತ್ತಾರು ಎಕರೆ ಬೆಳೆ ನಾಶವಾಗುತ್ತಿದೆ. ಹೆಣ್ಣಾನೆಯ ಕೊರಲಲ್ಲಿ ಜಿಪಿಆರ್‌ಎಸ್ ಕೂಡ ಇದೆ. ಸಕಲೇಶಪುರದಿಂದ ಬಂದಿರೋ ಕಾಡಾನೆಗಳು. ಸುಮಾರು ಐದಾರು ಕಿ.ಮೀ. ವ್ಯಾಪ್ತಿಯ ತೋಟಗಳಲ್ಲಿ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡು ಅಡಿಕೆ ಮರಗಳನ್ನ ಬುಡಸಮೇತ ಕಿತ್ತು ಹಾಕಿವೆ. ಬಾಳೆಯನ್ನೂ ಸಂಪೂರ್ಣ ನಾಶಮಾಡಿವೆ. ತೋಟದಲ್ಲಿ ನೀರಾಯಿಸುವ ಮೋಟರ್, ಗೇಟ್ ಎಲ್ಲವನ್ನೂ ಮುರಿದು ಹಾಕಿವೆ. ಕಾಡಾನೆಗಳ ಹಿಂಡು ಕಾಫಿತೋಟದಲ್ಲಿ ಬೇಕಾಬಿಟ್ಟಿ ದಾಂದಲೆ ನಡೆಸುತ್ತಿದ್ದು ರೈತರು ಕಂಗಾಲಾಗಿದ್ದಾರೆ. 

Hassan: ಬಾಳ್ಳುಪೇಟೆ ಬಳಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕರ ಕೂಗಾಟದಿಂದ ಅದೃಷ್ಟವಶಾತ್‌ ಪಾರಾದ ಮಹಿಳೆ

ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ: ಕಾಡಾನೆ ದಾಳಿ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ರೈತ ಪ್ರವೀಣ್  ಅಸಮಾಧಾನ ಹೊರಹಾಕಿದ್ದಾರೆ. ಜೀವಭಯದಿಂದ ಬೆಳೆಗಾರರು ಹಾಗೂ ರೈತರು ತೋಟಗಳಿಗೆ ಹೋಗೋದನ್ನೇ ಕೈಬಿಟ್ಟಿದ್ದಾರೆ. ಸ್ಥಳದಲ್ಲೇ ಬೀಡು ಬಿಟ್ಟಿರೋ ಅರಣ್ಯ ಅಧಿಕಾರಿಗಳು ಕಾಡಿಗಟ್ಟಲು ಪಟಾಕಿ ಸಿಡಿಸುತ್ತಿದ್ದಾರೆ. ಆದರೆ, ಮರಿ ಆನೆಗಳು ಇರೋದ್ರಿಂದ ಆನೆಗಳು ಬೇಕಾಬಿಟ್ಟಿ ನುಗ್ಗುತ್ತಿದ್ದು, ಅಧಿಕಾರಿಗಳೂ ತೋಟದ ಕೋವಿಯಲ್ಲಿ ಈಗಾಗಲೇ ನಾಲ್ಕೈದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಆನೆಗಳು ಹೋಗುವಂತೆ ಕಾಣುತ್ತಿಲ್ಲ. ಈ ಭಾಗದ ಸಣ್ಣ ಬೆಳೆಗಾರರು ಆನೆಗಳನ್ನ ಓಡಿಸಲು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಆನೆಗಳ ಹಾವಳಿ ಹೇಗೆ ತಡೆಗಟ್ಟುವುದುಎಂಬ ಚಿಂತೆಯಲ್ಲಿ ತೊಡಿಗಿದ ಅರಣ್ಯ ಇಲಾಖೆ ಕೊನೆಗೂ ಎಚ್ಚೆತ್ತುಗೊಂಡಿದೆ.  ಗ್ರಾಮಸ್ಥರು ತ್ರೀವ್ರ ಆಕ್ರೋಶದ ನಂತರ ಕಾರ್‍ಯಚಾರಣೆಗೆ ಇಳಿದಿರುವ ಅರಣ್ಯ ಇಲಾಖೆ, ನಾಡಿನಿಂದ ಕಾಡಿನತ್ತ ಕಳುಹಿಸುವ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿಗಳು  ಕಾರ್‍ಯಚಾರಣೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios