ಮಡಿಕೇರಿ(ಜೂ.21): ಗೋಣಿಕೊಪ್ಪದಲ್ಲಿ ಆಹಾರ ಅರಸಿ, ಕೊಡಗಿನಲ್ಲಿ ತೋಟಕ್ಕೆ ನುಗ್ಗುತ್ತಿದ್ದ ಕಾಡಾನೆಗಳು ಈಗ ಹಣ್ಣು ತಿನ್ನಲು ಅಂಗಡಿಗಳಿಗೆ ನುಗ್ಗುವ ದಾರಿ ಹುಡುಕೊಂಡಿವೆ.

ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯ ಅರ್ವತೋಕ್ಲು ಎಂಬಲ್ಲಿ ಹಾರುನ್‌ ಎಂಬವರಿಗೆ ಸೇರಿದ ಅಂಗಡಿಗೆ ಕಳೆದ 3 ದಿನಗಳಿಂದ ಕಾಡಾನೆಗಳು ದಾಳಿ ಇಡುತ್ತಿವೆ. ಅಂಗಡಿಯಲ್ಲಿನ ಮಾವು, ಸೇಬು ತಿಂದು ಹೊಟ್ಟೆತುಂಬಿಸಿಕೊಳ್ಳುತ್ತಿವೆ. ಇದರಿಂದ ವ್ಯಾಪಾರಿ ಸೇರಿದಂತೆ ಸ್ಥಳೀಯರು ಆತಂಕಿತರಾಗಿದ್ದಾರೆ.

ಉಡುಪಿ: ಲ್ಯಾಬ್‌ ಟೆಕ್ನಿಷಿಯನ್‌ನಿಂದ ಸೋಂಕು ಪ್ರಸಾರ

ಶುಕ್ರವಾರ ರಾತ್ರಿ ಮತ್ತೆ ದಾಳಿ ಇಟ್ಟಿರುವ ಆನೆಗಳು ಅಂಗಡಿ ಹೊರ ಭಾಗದಲ್ಲಿ ಪ್ಲಾಸ್ಟಿಕ್‌ ಒಳಗೆ ಇರಿಸಿದ್ದ ಹಣ್ಣುಗಳನ್ನು ತಿಂದಿವೆ. ಸಮೀಪದ ಗೋದಾಮಿನ ಹೊರಗೆ ಎರಡು ಗೂಡ್ಸ್‌ ವಾಹನದಲ್ಲಿ ಮಾವಿನ ಹಣ್ಣು ಶೇಖರಿಸಿಟ್ಟಿದ್ದರು. ಅದನ್ನೂ ಸಂಪೂರ್ಣ ತಿಂದಿವೆ. ಸುಮಾರು 400 ಕೆ.ಜಿ. ಮಾವಿನ ಹಣ್ಣು ಇತ್ತು. 50 ಸಾವಿರಕ್ಕೂ ಅಧಿಕ ನಷ್ಟವಾಗಿದೆ ಎಂದು ಮಾಲೀಕ ಹಾರುನ್‌ ತಿಳಿಸಿದ್ದಾರೆ.

ಗದಗ: ಭಯ ಹುಟ್ಟಿಸುತ್ತಿದೆ RMP ವೈದ್ಯರ ಟ್ರಾವೆಲ್‌ ಹಿಸ್ಟರಿ

ಇಲ್ಲಿಗೆ ಸಮೀಪವಿರುವ ಕಾಫಿ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳ ಹಿಂಡು ಸುಲಭವಾಗಿ ಸಿಗುವ ಆಹಾರಕ್ಕೆ ಲಗ್ಗೆ ಇಡುತ್ತಿವೆ. ರಾತ್ರಿ ಅಂಗಡಿ ಮುಚ್ಚಿದ ನಂತರ ಬಂದು ಹಣ್ಣು ತಿನ್ನುತ್ತವೆ. ಬೆಳಗ್ಗೆ ಸಾಕಷ್ಟುವಾಹನಗಳು ಓಡಾಡುತ್ತವೆ. ರಾತ್ರಿ ಆನೆ ಸಂಚಾರದಿಂದ ಹಣ್ಣುಗಳನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ. ಅಂಗಡಿಯ ಸಮೀಪವಿರುವ ತೆಂಗಿನ ಗಿಡವನ್ನು ಕೂಡ ನಾಶ ಮಾಡಿದೆ. ಪೊನ್ನಂಪೇಟೆ ಅರಣ್ಯ ಇಲಾಖೆಗೆ ದೂರು ನೀಡಲು ನಿರ್ಧರಿಸಿದ್ದಾರೆ.