ಉಡುಪಿ: ಲ್ಯಾಬ್‌ ಟೆಕ್ನಿಷಿಯನ್‌ನಿಂದ ಸೋಂಕು ಪ್ರಸಾರ

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರುಗತಿಯಲ್ಲಿದ್ದು, ಶನಿವಾರ ಮತ್ತೆ 13 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1063 ಆಗಿದೆ.

Corona virus spread by a lab technician in Udupi

ಉಡುಪಿ(ಜೂ.21): ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏರುಗತಿಯಲ್ಲಿದ್ದು, ಶನಿವಾರ ಮತ್ತೆ 13 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1063 ಆಗಿದೆ.

ಈ 13 ಪ್ರಕರಣಗಳಲ್ಲಿ 8 ಮಂದಿ ಪುರುಷರು, 2 ಮಹಿಳೆಯರು, 6 ಮತ್ತು 3 ವರ್ಷದ ಬಾಲಕಿಯರು ಮತ್ತು 2 ವರ್ಷದ ಬಾಲಕರಿದ್ದಾರೆ. ಅವರಲ್ಲಿ 10 ಮಂದಿ ಮುಂಬೈಯಿಂದ ಬಂದವರಾದರೆ, ಒಬ್ಬರು ಬೆಂಗಳೂರಿನಿಂದ ಬಂದ ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ.

ಬಿಜೆಪಿಗೆ ಬಂದು ವಿಶ್ವನಾಥ್‌ ಅನಾಥರಾದ್ರಾ? ಸಚಿವರೊಬ್ಬರ ಪ್ರತಿಕ್ರಿಯೆ ಹೀಗಿದೆ ನೋಡಿ..!

ಜಿಲ್ಲೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ಮಹಿಳಾ ಲ್ಯಾಬ್‌ ಟೆಕ್ನಿಷಿಯನ್‌ ಅವರ ಸಂಪರ್ಕದಲ್ಲಿದ್ದ 62 ವರ್ಷ ಮತ್ತು 32 ವರ್ಷ ವಯಸ್ಸಿನ ಪುರುಷರಿಗೆ ಕೊರೋನಾ ಹರಡಿದ್ದು ಶನಿವಾರ ದೃಢಪಟ್ಟಿದೆ.

ಈ ಖಾಸಗಿ ಆಸ್ಪತ್ರೆಯ ಲ್ಯಾಬ್‌ ಟೆಕ್ನಿಷಿಯನ್‌ಗೆ ಎರಡು ವಾರಗಳ ಹಿಂದೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಮರುದಿನ ಆಕೆಯ 5 ವರ್ಷದ ಮಗನಿಗೆ ಸೋಂಕು ಹರಡಿತು. ಈಗ ಆಕೆಯ ನಾದಿನಿ, ಗರ್ಭಿಣಿ ತಂಗಿ, ತಂದೆ ಮತ್ತೀಗ ಇಬ್ಬರು ಸಂಬಂಧಿಕರಿಗೂ ಸೋಂಕು ಹರಡಿದೆ. ಈ ಲ್ಯಾಬ್‌ ಟೆಕ್ನಿಷಿಯನ್‌ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ಮಾದರಿಗಳ ಸಂಖ್ಯೆ ಏರಿಕೆ: ಜಿಲ್ಲೆಯಿಂದ ಕೋವಿಡ್‌ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳ ಸಂಖ್ಯೆ ಮತ್ತೇ ಹೆಚ್ಚಾಗುತ್ತಿದೆ. ಶನಿವಾರ 73 ಮಂದಿಯ ಮಾದರಿಗಳನ್ನು ಕಳುಹಿಸಲಾಗಿದೆ. ಅವುಗಳಲ್ಲಿ 40 ಹಾಟ್‌ ಸ್ಪಾಟ್‌ ನಿಂದ ಬಂದವರು, 16 ಕೊರೋನಾ ಶಂಕಿತರು, 10 ಕೊರೋನಾ ಸಂಪರ್ಕಿತರು, 6 ಮಂದಿ ಶೀತಜ್ವರ ಮತ್ತು ಒಬ್ಬರು ಉಸಿರಾಟದ ತೊಂದರೆ ಇರುವವರಾಗಿದ್ದಾರೆ.

ಗದಗ: ಸಚಿವ S T ಸೋಮಶೇಖರ್‌ನನ್ನ ಹಾಡಿ ಹೊಗಳಿದ ಕಾಂಗ್ರೆಸ್‌ ನಾಯಕ

ಶನಿವಾರ 106 ಮಂದಿಯ ವರದಿಗಳು ಬಂದಿದ್ದು, ಅವರಲ್ಲಿ 13 ಮಂದಿಗೆ ಪಾಸಿಟಿವ್‌ ವರದಿ ಬಂದಿದೆ. ಇನ್ನೂ 182 ವರದಿಗಳು ಬರುವುದಕ್ಕೆ ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ 953 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಪ್ರಸ್ತುತ 108 ಮಂದಿ ಸೋಂಕಿತರು ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

Latest Videos
Follow Us:
Download App:
  • android
  • ios