ಚನ್ನಪಟ್ಟಣ ತಾಲೂಕಿನಲ್ಲಿ ಬೀಡು ಬಿಟ್ಟ ಕಾಡಾನೆಗಳ ಹಿಂಡು, ನಿವಾಸಿಗಳಲ್ಲಿ ಆತಂಕ
ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಕಣ್ವ ನದಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ. ಕಳೆದ ರಾತ್ರಿ ಈ ಭಾಗದ ರೈತರ ಕೃಷಿ ಜಮೀನಿನ ಮೇಲೆ ಕಾಡಾನೆಗಳೆಂದು ದಾಳಿ ಮಾಡಿದ್ದು ಗ್ರಾಮದ ಸಮೀಪವೀರುವ ನದಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ.
ರಾಮನಗರ (ಜ.21): ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದ ಕಣ್ವ ನದಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ. ಕಳೆದ ರಾತ್ರಿ ಈ ಭಾಗದ ರೈತರ ಕೃಷಿ ಜಮೀನಿನ ಮೇಲೆ ಕಾಡಾನೆಗಳೆಂದು ದಾಳಿ ಮಾಡಿದ್ದು ಗ್ರಾಮದ ಸಮೀಪವೀರುವ ನದಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವುದು ಸಾರ್ವಜನಿಕರಲ್ಲೂ ಕೂಡ ಆತಂಕ ಮನೆ ಮಾಡಿದೆ. ತೆಂಗಿನಕಾಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಗ್ರಾಮದ ಕೃಷಿ ಜಮೀನಿಗೆ ಲಗ್ಗೆ ಇಟ್ಟಿದ್ದ ಕಾಡಾನೆಗಳ ಹಿಂಡು ಮತ್ತೆ ಅರಣ್ಯಕ್ಕೆ ಹೋಗದೆ ಕೂಡ್ಲೂರು ಗ್ರಾಮದ ಕಣ್ವ ನದಿಯಲ್ಲಿ ಜಲ ಕ್ರೀಡೆಯಲ್ಲಿ ತೊಡಗಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಕಾಡಾನೆ ನೋಡಲು ಜಮಾವಣೆಗೊಂಡಿದ್ದಾರೆ. ಹಗಲಿನಲ್ಲಿ ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಡಾನೆಗಳು ನದಿಯಲ್ಲಿ ಬಿಡು ಬಿಟ್ಟಿದ್ದು ರಾತ್ರಿ ಆಗುತ್ತಿದ್ದಂತೆ ರೈತರ ಕೃಷಿ ಜಮೀನಿನ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡುವ ಸಾಧ್ಯತೆ ಇದೆ. ತಾಲೂಕಿನ ಹಲವು ಭಾಗಗಳಲ್ಲಿ ಕೆಲವು ದಿನಗಳಿಂದ ಕಾಡಾನೆಗಳ ದಾಳಿಯಿಂದ ರೈತರ ಕೃಷಿ ಬೆಳೆಗಳು ನಾಶವಾಗುತ್ತಿತ್ತು ನದಿಯಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳ ಹಿಂಡನ್ನು ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.
Chamarajanagara: ತೋಟದ ಶೆಡ್‌ಗೆ ನುಗ್ಗಿ ಕಾಡಾನೆಗಳ ದಾಳಿ, ಹಸು ಬಲಿ
2 ದಿನದ ಹಿಂದೆ ಕೆಲಸಕ್ಕೆ ಸೇರಿದ್ದ ಅರಣ್ಯ ನೌಕರ ಕಾಡಾನೆ ದಾಳಿಗೆ ಬಲಿ
ಚಾಮರಾಜನಗರ: ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ದಿನಗೂಲಿ ನೌಕರ ಬಲಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ವಡ್ಗಲ್‌ಪುರ ಸಮೀಪದ ಪ್ರಾದೇಶಿಕ ವಲಯ ಎತ್ತುಗಟ್ಟಿಬೆಟ್ಟದಲ್ಲಿನ ದೇವಸ್ಥಾನ ಬಳಿ ನಡೆದಿದೆ. ಪುಣಜನೂರು ವಲಯದ ಹೊಸಪೋಡಿನ ನಂಜಯ್ಯ(35) ಮೃತ ಅರಣ್ಯ ದಿನಗೂಲಿ ನೌಕರ. ಈತ ಕೆಲಸಕ್ಕೆ ಸೇರಿ ಕೇವಲ ಎರಡು ದಿನಗಳಾಗಿತ್ತು. ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶದಿಂದ ಬಂದಿದ್ದ 60-65 ಆನೆಗಳು ಎತ್ತುಗಟ್ಟಿಕ್ಯಾಂಪ್‌ಗೆ ಒಳಪಡುವ ಚೆನ್ನಪ್ಪನಪುರ ಗುಡ್ಡದಲ್ಲಿ ಬೀಡು ಬಿಟ್ಟಿದ್ದವು. ಇವುಗಳನ್ನು ಕಾಡಿನತ್ತ ಓಡಿಸಲು ಅರಣ್ಯ ಸಿಬ್ಬಂದಿ ಕಾರಾರಯಚರಣೆ ಆರಂಭಿಸಿದ್ದರು. ಈ ವೇಳೆ ಒಂದು ಆನೆ ವಾಪಸ್ ಬಂದು ನಂಜಯ್ಯ ಮೇಲೆ ದಾಳಿ ನಡೆಸಿದೆ.
Honey mission: ತೋಟಕ್ಕೆ ನುಗ್ಗುವ ಕಾಡಾನೆ ತಡೆಯಲು ‘ಹನಿ ಮಿಷನ್’
ಆನೆಗಳ ಹಿಂಡು ತಮಿಳುನಾಡು ಗಡಿಯಲ್ಲಿನ ಎತ್ತುಗಟ್ಟಿದೇವಸ್ಥಾನದ ಹತ್ತಿರ ತೆರಳಿವೆ. ಈ ಆನೆಗಳನ್ನೇ ಹಿಂಬಾಲಿಸಿದ 30 ಸಿಬ್ಬಂದಿಯನ್ನು ಕಂಡು ಗಾಬರಿಗೊಂಡ ತಾಯಿ ಆನೆಯೊಂದು ಹಿಂದಿರುಗಿ ದಾಳಿಗೆ ಮುಂದಾಗಿದೆ. ಈ ವೇಳೆ ನಂಜಯ್ಯ ಮೇಲೆ ದಾಳಿ ನಡೆಸಿ ತುಳಿದಿದೆ. ತೀವ್ರ ಗಾಯಗೊಂಡಿದ್ದ ನಂಜಯ್ಯರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.