ಕುಂದಗೋಳ(ಸೆ.28): ಸತಿ ಪತಿಗಳಿಬ್ಬರೂ ಸಾವಿನಲ್ಲೂ ಒಂದಾದ ಅಪರೂಪದ, ಭಾವುಕ ಘಟನೆಯೊಂದು ಕುಂದಗೋಳ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪತಿ ಅಗಲಿದ ನೋವು ಸಹಿಸಲಾಗದೆ ವೃದ್ಧ ಮಡದಿ ತಾನೂ ಸಹ ಪತಿ ಮೃತರಾದ 10 ಗಂಟೆಯೊಳಗೆ ಇಹಲೋಕ ತ್ಯಜಿಸಿದ್ದಾರೆ. ಇಬ್ಬರೂ ವೃದ್ಧರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವೃತ್ತಿಯಲ್ಲಿ ದರ್ಜಿಯಾಗಿದ್ದ ಫರಿದ್ಧೀನ್‌ ಇಮಾಮಸಾಬ್‌ ಪಠಾಣ್‌(74) ಎಂಬವರು ಭಾನುವಾರ ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಗಳು ಅವರ ಶವಸಂಸ್ಕಾರ ಮುಗಿಸಿ ಮನೆಗೆ ಮರಳುವ ಸಮಯಕ್ಕೆ ಅವರ ಪತ್ನಿ ಹುಸೇನಬಿ ಫರಿದ್ಧೀನ್‌ ಪಠಾಣ್‌(70) ಪತಿಯ ಸಾವಿನ ದುಃಖ ತಾಳಲಾರದೆ ಸಂಜೆ 4 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ಲಾಸ್ಟಿಕ್‌ ಮುಕ್ತ

ಈ ಮೂಲಕ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ. ತಂದೆ- ತಾಯಿ ಇಬ್ಬರನ್ನು ಒಂದೇ ದಿನ ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಈ ದಂಪತಿಗಳಿಗೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.