ವಿಜಯಪುರ: 'ಯಾಕೆ ನಾನು ಸಿಎಂ ಆಗ್ಬಾರ್ದಾ'..? ಹೇಳಿಕೆ ಸಮರ್ಥಿಸಿಕೊಂಡ ಶಾಸಕ
ನಾನು ಸಿಎಂ ಆಗ್ತಿನಿ ಅನ್ನೊ ಹೇಳಿಕೆಯನ್ನು ಶಾಸಕ ಬಸನಗೌಡ ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ಈಗ ಸದ್ಯ ಇಲ್ಲವಾದ್ರು, ನನಗೆ 25 ವರ್ಷಗಳ ಭವಿಷ್ಯವಿದೆ. ಅಷ್ಟರಲ್ಲಿ ಒಮ್ಮೆಯಾದ್ರು ಸಿಎಂ ಆಗ್ತೀನಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶಾಸಕರೇ ಸಚಿವರಿಗಿಂತ ಪವರ್‌ಫುಲ್ ಎಂದಿದ್ದಾರೆ.
ವಿಜಯಪುರ(ಆ.24): ನಾನು ಸಿಎಂ ಆಗ್ತಿನಿ ಅನ್ನೊ ಹೇಳಿಕೆಯನ್ನು ಶಾಸಕ ಬಸನಗೌಡ ಯತ್ನಾಳ ಸಮರ್ಥಿಸಿಕೊಂಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ ಶಾಸಕ ಯತ್ನಾಳ್ ಯಾಕೆ ನಾನು ಸಿಎಂ ಆಗಬಾರದಾ? ಎಂದು ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಈಗ ಸದ್ಯ ಇಲ್ಲವಾದ್ರು, ನನಗೆ 25 ವರ್ಷಗಳ ಭವಿಷ್ಯವಿದೆ. ಅಷ್ಟರಲ್ಲಿ ಒಮ್ಮೆಯಾದ್ರು ಸಿಎಂ ಆಗ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿದ್ದಾರೆ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರವರ ಜಗಳ. 14 ತಿಂಗಳಲ್ಲಿ ಏನೇನು ಆಗಿದೆಯೋ ಅವರೆ ಟೀಕೆಗಳನ್ನ ಮಾಡಿಕೊಳ್ತಿದ್ದಾರೆ. ಇದಕ್ಕು ನಮ್ಮ ಪಕ್ಷಕ್ಕು ಸಂಬಂಧವೇ ಇಲ್ಲ. ಅಲ್ಲಿ ನಮ್ಮದೇನು ಕೆಲಸ? ಅಲ್ಲಿ ನಮ್ಮ ಕೆಲಸ ಏನು ಇಲ್ಲ ಎಂದಿದ್ದಾರೆ.
ಸಚಿವರಿಗಿಂತ ಶಾಸಕರೇ ಪವರ್‌ಫುಲ್:
ಸಚಿವ ಸ್ಥಾನ ತಪ್ಪಿದ್ದಕ್ಕೆ ಶಾಸಕರ ಅಸಮಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನಕ್ಕಿಂತ ಶಾಸಕರೇ "ಪವರ್ ಪುಲ್" ಎಂದಿದ್ದಾರೆ. ರಾಜ್ಯದಲ್ಲಿ ಈಗ ಮಂತ್ರಿಗಳಿಗಿಂತ ಶಾಸಕರೇ ಪವರ್ ಪುಲ್ ಆಗಿದ್ದಾರೆ. ನನಗೆ ಮಂತ್ರಿ ಆಗದೆ ಇರೋದಕ್ಕೆ ಬಹಳ ಸಂತಸವಿದೆ. ಬರೀ ಗೂಟಿನ ಕಾರು, ಗನ್ ಮೆನ್‌ಗಾಗಿ ನಾವು ಕೆಲಸ ಮಾಡಬೇಕಾ? ಎಂದ ಯತ್ನಾಳ್ ಪ್ರಶ್ನಿಸಿದ್ದಾರೆ.
ಶಾಸಕನಾಗಿ ಒಂದೇ ದಿನದಲ್ಲಿ ಜಿಲ್ಲೆಗೆ 140 ಕೋಟಿ ತಂದಿದ್ದೇನೆ:
ಶಾಸಕನಾಗಿ ಒಂದೆ ದಿನದಲ್ಲಿ 140 ಕೋಟಿ ಹಣವನ್ನ ವಿಜಯಪುರ ಅಭಿವೃದ್ಧಿಗೆ ತಂದಿದ್ದೀನಿ. ಅಭಿವೃದ್ದಿ ವಿಚಾರದಲ್ಲಿ ನಮ್ಮ ಸಿಎಂ ಸ್ಪಂದಿಸುತ್ತಿದ್ದಾರೆ ಎಂದು ಅಸಮಾಧಾನಗೊಂಡ ಶಾಸಕರಿಗೆ ಯತ್ನಾಳ್ ಬುದ್ದಿ ಮಾತು ಹೇಳಿದ್ದಾರೆ. ಹಾಗೆಯೇ ಪಟ್ಟು ಬಿಡುವಂತೆ ಅಸಮಾಧಾನಗೊಂಡ ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಶಾಸಕರು ಜಗಳ ಮಾಡಿದ್ರೆ ತಪ್ಪು ಸಂದೇಶ ಹೋಗುತ್ತೆ:
ನಾವೆಲ್ಲ ಇವತ್ತು ಮುಖ್ಯಮಂತ್ರಿಗಳಿಗೆ ಸಹಕಾರ ನೀಡಬೇಕು. 224 ಶಾಸಕರಿಗು ಸಚಿವರಾಗುವ ಆಸೆ ಇರುತ್ತೆ. ನಾವು ಹೀಗೆ ಜಗಳವಾಡಿದರೆ ಜನರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತೆ. ಪ್ರವಾಹದಲ್ಲಿ ದುಃಖದಲ್ಲಿರುವ ಜನರ ಮನಸ್ಸಿಗೆ ನೋವಾಗುತ್ತೆ. ಹೇಳಿಕೆಗಳನ್ನ ಕೊಡದೆ, ನಮ್ಮ ಕ್ಷೇತ್ರದಗಳ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಿದೆ. ಇಲ್ಲದೆ ಹೋದಲ್ಲಿ ಕೇಂದ್ರ ಹೈಕಮಾಂಡ್ ಮತ್ತೇನೋ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು.
ಸಿಎಂ ಎದುರೇ ಕಿತ್ತಾಡಿಕೊಂಡ ಬಿಜೆಪಿ ಸಚಿವ - ಶಾಸಕ
ನೂತನ ಸಚಿವರು ಸಮರ್ಥವಾಗಿ ಕೆಲಸ ನಿಭಾಯಿಸದ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲ ಸಚಿವರು ಸಮರ್ಥವಾಗಿ ಮಾಡ್ತಿದ್ದಾರೆ. ಬಡವರ ಸಮಸ್ಯೆಗಳನ್ನ ನೂತನ ಸಚಿವರು ಆಲಿಸುತ್ತಿದ್ದಾರೆ ಎಂದರು.