ಮೈಸೂರು (ಫೆ.04): ಮೈಸೂರು ನಗರ ಪಾಲಿಕೆ ಮೇಯರ್‌ ಚುನಾವಣೆ ಮೈತ್ರಿಯನ್ನು ಪಕ್ಷದ ಸ್ಥಳೀಯ ಮುಖಂಡರೇ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. 

ಮೈಸೂರು ನಗರ ಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅನಿವಾರ್ಯ ಇರುವ ಕಡೆಗಳಲ್ಲಿ ಅಲ್ಲಿನ ಮುಖಂಡರೆ ತೀರ್ಮಾನಿಸುತ್ತಾರೆ ಎಂದರು. 

3 ಲಕ್ಷ ರು. ಆಸೆಗಾಗಿ ಹೋಟೆಲ್‌ನಿಂದ ಓಡಿ ಹೋದ ಗ್ರಾಪಂ ಸದಸ್ಯ!

ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌- ಬಿಜೆಪಿ, ಬಿಜೆಪಿ- ಜೆಡಿಎಸ್‌, ಕಾಂಗ್ರೆಸ್‌- ಜೆಡಿಎಸ್‌ ಸೇರಿ ಆಡಳಿತ ನೆಡೆಸುತ್ತಿವೆ. ಆಡಳಿತದ ದೃಷ್ಟಿಯಿಂದ ಅನಿವಾರ್ಯವಾಗಿ ಜೊತೆಗೂಡಿ ಆಡಳಿತ ನಡೆಸಬೇಕಾಗುತ್ತೆ ಎನ್ನುವ ಮೂಲಕ ಹೊಂದಾಣಿಕೆ ಯಾರೊಂದಿಗೆ ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲ.