ಮೈಸೂರು (ಫೆ.04):  ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ನಿಮ್ಮ ಪರ ವೋಟು ಹಾಕುವುದಾಗಿ ಹೇಳಿ 1 ಲಕ್ಷ ರು. ಪಡೆದು ಕಳೆದ ಹತ್ತು ದಿನಗಳಿಂದ ಜೊತೆಗಿದ್ದ ಹುಣಸೂರು ತಾಲೂಕಿನ ಸದಸ್ಯರೊಬ್ಬರು ಮತ್ತೊಬ್ಬರು 3 ಲಕ್ಷ ರು. ಕೊಡುವುದಾಗಿ ಹೇಳಿದ್ದರಿಂದ ಹೋಟೆಲ್‌ನಿಂದಲೇ ಓಡಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ!.

 ಇದು ಕೇವಲ ಒಂದು ಉಹಾಹರಣೆ ಮಾತ್ರ. ಬಹುತೇಕ ಕಡೆ ಇದೇ ರೀತಿ ನಡೆಯುತ್ತಿದೆ.

7 ಸ್ಥಾನಗಳಲ್ಲಿ 6 ಸ್ಥಾನ ಬಿಜೆಪಿಗೆ : ಭರ್ಜರಿ ವಿಜಯ ...

ಬೇರೆ ಜಿಲ್ಲೆಯೊಂದರ 10 ಮಂದಿ ಗ್ರಾಪಂ ಸದಸ್ಯರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು.

ಮರ್ನಾಲ್ಕು ದಿನ ಕಳೆಯುತ್ತಿದ್ದಂತೆ ಊಟ ಸರಿಯಲ್ಲ. ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕ್ಯಾತೆ ತೆಗೆದರು. ಹೀಗಾಗಿ ಅವರನ್ನು ಸಕಲ ಸೌಲಭ್ಯವಿರುವ ಬೇರೊಂದು ಕಡೆಗೆ ಸ್ಥಳಾಂತರಿಸಿರುವ ಬಗ್ಗೆ ಮಾಹಿತಿ ಬಂದಿದೆ!.