ಬೆಂಗಳೂರು(ಫೆ.01): ಜಯನಗರದ ಆರ್‌.ವಿ.ರಸ್ತೆಯ ಟೀಚರ್ಸ್‌ ಕಾಲೇಜು ಸಿಗ್ನಲ್‌ನಿಂದ ಸೌತೆಂಡ್‌ ಸರ್ಕಲ್‌ ಸಿಗ್ನಲ್‌ ವರೆಗಿನ ರಸ್ತೆಯಲ್ಲಿ ಫೆ.1ರ ಶನಿವಾರದಿಂದ ವೈಟ್‌ಟಾಪಿಂಗ್‌ ಕಾಮಗಾರಿ ಆರಂಭವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಿಬಿಎಂಪಿ ಕೋರಿದೆ.

ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ಸೌತ್‌ಎಂಡ್‌ ಸಿಗ್ನಲ್‌ವರೆಗೆ ಸಂಚರಿಸುವ ಈ ರಸ್ತೆಯಲ್ಲಿ ಪ್ರಸ್ತುತ ಬಲಭಾಗದ ಒಂದು ಮಾರ್ಗ ವೈಟ್‌ಟಾಪಿಂಗ್‌ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಸ್ಟೆನ್ಸಿಲ್‌ ಆರ್ಟ್‌ನಲ್ಲಿ 45 ನಿಮಿಷದಲ್ಲಿ ರೆಡಿಯಾಯ್ತು ಪಟೇಲ್‌ ಭಾವಚಿತ್ರ

ಇದೀಗ ಶನಿವಾರದಿಂದ ಈ ರಸ್ತೆಯ ಎಡಭಾಗದ ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಕೈ ಗೆತ್ತಿಕೊಳ್ಳಲಾಗುತ್ತಿದೆ. ಹಾಗಾಗಿ ಕಾಮಗಾರಿ ನಡೆಯುವ ವೇಳೆ ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದಂತೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಸ್ಥಳೀಯ ಸಾರ್ವಜನಿಕರು ಯೋಜನೆಯಿಂದಾಗುವ ಅಡಚಣೆಗೆ ಸಹಕರಿಸಬೇಕೆಂದು ಪಾಲಿಕೆ ಯೋಜನಾ ವಿಭಾಗದ ಕಾರ್ಯ ಪಾಲಕ ಅಭಿಯಂತರ ಚಂದ್ರಶೇಖರ್‌ ಮನವಿ ಮಾಡಿದ್ದಾರೆ.

ಪರ್ಯಾಯ ರಸ್ತೆಗಳು:

ಸೌತೆಂಡ್‌ ವೃತ್ತದಿಂದ ಕೃಂಬಿಗಲ್‌ ರಸ್ತೆ, ಎಚ್‌.ಸಿದ್ದಯ್ಯ ವೃತ್ತದ ಕಡೆಗೆ ಹೋಗುವ ವಾಹನಗಳು ಪಟಾಲಮ್ಮ ದೇವಾಲಯ ರಸ್ತೆ, ಕನಕಪುರ ರಸ್ತೆ ಮೂಲಕ ಅಥವಾ ಸೌತ್‌ ಎಂಡ್‌ ರಸ್ತೆ, ಕೆ.ಆರ್‌. ರಸ್ತೆ ಮಾರ್ಗವಾಗಿ ಸಂಚರಿಸಬಹುದು. ಕನಕಪಾಳ್ಯ ರಸ್ತೆ, ಸಿದ್ದಾಪುರ ರಸ್ತೆ ಕಡೆಗೆ ಹೋಗುವವರು ಸೌತ್‌ ಎಂಡ್‌ ವೃತ್ತದಿಂದ ಅಶೋಕ ಪಿಲ್ಲರ್‌ ಮಾರ್ಗವಾಗಿ ಹಾಗೂ ಸುತ್ತಮುತ್ತಲ ಇತರೆ ರಸ್ತೆಗಳ ಮೂಲಕ ಚಲಿಸಬಹುದು ಎಂದು ಸೂಚಿಸಲಾಗಿದೆ.