ಎಲ್ಲಿ ಹೋದರೂ ಜೆಡಿಎಸ್‌ ಪರ ಅಲೆ : ಕೆ.ಎಂ.ತಿಮ್ಮರಾಯಪ್ಪ

ಪಂಚರತ್ನ ಯೋಜನೆ ಜಾರಿ ಮೇರೆಗೆ ಎಲ್ಲಿ ಹೋದರೂ ಜೆಡಿಎಸ್‌ಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದ್ದು, ಅತ್ಯಧಿಕ ಮತಗಳಿಂದ ಜೆಡಿಎಸ್‌ ಜಯಭೇರಿ ಸಾಧಿಸಲಿದೆ ಎಂದು ಜೆಡಿಎಸ್‌ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

Wherever you go, wave for JDS: K.M.Thimmarayappa snr

  ಪಾವಗಡ :  ಪಂಚರತ್ನ ಯೋಜನೆ ಜಾರಿ ಮೇರೆಗೆ ಎಲ್ಲಿ ಹೋದರೂ ಜೆಡಿಎಸ್‌ಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದ್ದು, ಅತ್ಯಧಿಕ ಮತಗಳಿಂದ ಜೆಡಿಎಸ್‌ ಜಯಭೇರಿ ಸಾಧಿಸಲಿದೆ ಎಂದು ಜೆಡಿಎಸ್‌ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.

ತಾಲೂಕು ಜೆಡಿಎಸ್‌ ವತಿಯಿಂದ ಶುಕ್ರವಾರ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ಎಸ್‌ಟಿ ಸಮಾವೇಶದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಜೆಡಿಎಸ್‌ ಅಲೆ ವ್ಯಾಪಕವಾಗಿದೆ. ದಿನೇ ದಿನೇ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯ ಹಾಗೂ ತಾಲೂಕಿನಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ಕುಮಾರಸ್ವಾಮಿ ರಾಜ್ಯದ ಸಿಎಂ ಆಗಲಿದ್ದಾರೆ.ಚುನಾವಣೆಯಲ್ಲಿ ಅಮೀಷಗಳಿಗೆ ಬಲಿಯಾಗದೇ ಜೆಡಿಎಸ್‌ ಪರ ಹೆಚ್ಚಿನ ಮತ ನೀಡುವಂತೆ ಮನವಿ ಮಾಡಿದರು.

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಅಂಜಿನಪ್ಪ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ 25ಸಾವಿರ ಮತಗಳ ಅಂತರದಲ್ಲಿ ತಿಮ್ಮರಾಯಪ್ಪ ಗೆಲ್ಲಲಿದ್ದಾರೆ. ಜಿಲ್ಲೆಯಲ್ಲಿ 8 ರಿಂದ 10 ಸ್ಥಾನಗಳಲ್ಲಿ ಜೆಡಿಎಸ್‌ ಜಯಭೇರಿ ಸಾಧಿಸುವ ವಿಶ್ವಾಸವಿದೆ. ಎಲ್ಲರ ಸಹಕಾರ ಹಾಗೂ ಪ್ರತಿಭಟನಾ ಹೋರಾಟ ಶ್ರಮದ ಫಲವಾಗಿ ತಾಲೂಕಿಗೆ ತುಂಗಭದ್ರಾ ಕುಡಿವ ನೀರು ಯೋಜನೆ ಜಾರಿಯಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ, ತಿಮ್ಮರಾಯಪ್ಪ ಶಾಸಕರಾಗಿ ಆಯ್ಕೆಯಾದರೆ ರೈತರಿಗೆ ಬಡವರಿಗೆ ಹಲವು ಯೋಜನೆ ಜಾರಿಯಾಗಲಿವೆ. ಇದು ಕಾಂಗ್ರೆಸ್‌ ಬಿಜೆಪಿಯಿಂದ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಹಿರಿಯ ಮುಖಂಡ ಎನ್‌ .ತಿಮ್ಮಾರೆಡ್ಡಿ, ತಾ,ಜೆಡಿಎಸ್‌ ಅಧ್ಯಕ್ಷ ಬಲರಾಮರೆಡ್ಡಿ, ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಎ.ಈರಣ್ಣ, ಮುಖಂಡ ಕೋಟಗುಡ್ಡ ಅಂಜಪ್ಪ, ಮಾಜಿ ಜಿಪಂ ಸದಸ್ಯ ಚನ್ನಮಲ್ಲಯ್ಯ ಇತರೆ ಮುಖಂಡರು ಮಾತನಾಡಿ, ಸಂಘಟಿತರಾಗಿ ಹೆಚ್ಚಿನ ಮತಗಳಿಂದ ತಿಮ್ಮರಾಯಪ್ಪರನ್ನ ಗೆಲ್ಲಿಸುವಂತೆ ಕರೆ ನೀಡಿದರು.

ಮುಖಂಡರಾದ ನಾರಾಯಣಮೂರ್ತಿ, ಸುಬ್ಬರಾಯಪ್ಪ ಪುತ್ರ ಕೃಷ್ಣಪ್ಪ, ಕರವೇ ಅಧ್ಯಕ್ಷ ಲಕ್ಷ್ಮಿ ನಾರಾಯಣ ಇತರೆ ಎಸ್‌ಟಿ ಸಮಾಜದ ಆನೇಕ ಮುಖಂಡರು ಕಾಂಗ್ರೆಸ್‌ ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಯಾದರು.

ಇದೇ ವೇಳೆ ಹಿರಿಯ ಮುಖಂಡರಾದ ರಾಜಶೇಖರಪ್ಪ, ತಾ.ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಗೋವಿಂದಬಾಬು, ಮಹಿಳಾ ಘಟಕದ ರಂಗಮ್ಮ ಶಿವಕುಮಾರ್‌,ಶಂಕುತಲಬಾಯಿ ಅಕ್ಕಲಪ್ಪನಾಯ್ಡ…, ರಾಜ್‌ಗೋಪಾಲ್‌, ವೈ.ಆರ್‌.ಚೌದರಿ, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕರಮೇಶ್‌, ಬ್ಯಾಂಕ್‌ ಶ್ರೀನಪ್ಪ, ಯುವ ಘಟಕದ ಮಂಜುನಾಥ್‌, ಆನಂದ ನಾಯಕ, ಭಾಸ್ಕರ್‌, ಪುರಸಭೆ ಮಾಜಿ ಸದಸ್ಯರಾದ ಮನುಮಹೇಶ್‌, ಜಿ.ಎ.ವೆಂಕಟೇಶ್‌, ಅಲ್ಪ ಸಂಖ್ಯಾತರ ಘಟಕದ ಯುನಿಸ್‌, ಸಣ್ಣಾರೆಡ್ಡಿ, ದೇವಲಕೆರೆ ಲೊಕೇಶ್‌, ಕಾವಲಗರೆ ರಾಮಾಂಜಿನಪ್ಪ, ಓಬಳಾಪುರ ತಿಪ್ಪೇಸ್ವಾಮಿ, ವಡ್ರೇವು ನರಸಿಂಹಪ್ಪ, ಸೋಡಾ ಮಂಜುನಾಥ್‌ ಹಾಗೂ ಇತರೆ ಆನೇಕ ಮಂದಿ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

----

ಫೋಟೋ 21ಪಿವಿಡಿ1

ತಾಲೂಕು ಜೆಡಿಎಸ್‌ ಎಸ್‌ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ.

Latest Videos
Follow Us:
Download App:
  • android
  • ios