Asianet Suvarna News Asianet Suvarna News

ಮಹದಾಯಿ ಕುರಿತು ಯಡಿಯೂರಪ್ಪ ರಕ್ತದಲ್ಲಿ ಬರೆದ ಪತ್ರ ಎಲ್ಲಿ?: ಎಚ್.ಕೆ.ಪಾಟೀಲ್

ಕಳಸಾ-ಬಂಡೂರಿ ಮಹದಾಯಿ ಯೋಜ​ನೆಯ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್‌. ಯಡಿ​ಯೂ​ರ​ಪ್ಪ ರಕ್ತದಲ್ಲಿ ಬರೆದ ಪತ್ರ ಎಲ್ಲಿ? ಎಂದು ಶಾಸಕ ಎಚ್‌.​ಕೆ. ​ಪಾ​ಟೀಲ ಪ್ರಶ್ನಿ​ಸಿ​ದ​ರು. ನಗ​ರ​ದಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ಮಾತ​ನಾ​ಡಿ​ದರು.

Where is the letter written in blood by Yeddyurappa about Mahadayi rav
Author
First Published Dec 25, 2022, 12:59 PM IST

ಗದ​ಗ (ಡಿ.25) : ಕಳಸಾ-ಬಂಡೂರಿ ಮಹದಾಯಿ ಯೋಜ​ನೆಯ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್‌. ಯಡಿ​ಯೂ​ರ​ಪ್ಪ ರಕ್ತದಲ್ಲಿ ಬರೆದ ಪತ್ರ ಎಲ್ಲಿ? ಎಂದು ಶಾಸಕ ಎಚ್‌.​ಕೆ. ​ಪಾ​ಟೀಲ ಪ್ರಶ್ನಿ​ಸಿ​ದ​ರು. ನಗ​ರ​ದಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆಯಲ್ಲಿ ಮಾತ​ನಾ​ಡಿ​ದ​ ಅವರು, ಚುನಾ​ವಣೆ ಸಂದ​ರ್ಭ​ದ​ಲ್ಲಿ ಹುಬ್ಬ​ಳ್ಳಿಯ ನೆಹರೂ ಮೈದಾ​ನ​ದಲ್ಲಿ ಮಾಜಿ ಸಿಎಂ ಯಡಿ​ಯೂ​ರ​ಪ್ಪ​ನ​ವರು ಕಳ​ಸಾ-ಬಂಡೂ​ರಿ ಮಹದಾಯಿ ಯೋಜ​ನೆಯಿಂದ ಈ ಭಾಗದ ರೈತರ ಹಾಗೂ ಜನ​ತೆಯ ಅಗ​ತ್ಯ​ತೆ​ಯನ್ನು ಪೂರೈ​ಸುವ ಮಹ​ತ್ತರ ಯೋಜ​ನೆ​ಯಾ​ಗಿದ್ದು, ಯೋಜನೆ ಜಾರಿಗೆ ಗೋವಾ ಮುಖ್ಯ​ಮಂತ್ರಿ​ಗ​ಳ ಒಪ್ಪಿಗೆ ಪತ್ರ ಇದೆ. ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮಹದಾಯಿ ಯೋಜನೆಯನ್ನು ಜಾರಿ ಮಾಡುತ್ತೇವೆ. ಯೋಜನೆ ಜಾರಿಯಾಗದಿದ್ದರೆ ನಿಮಗೆ ಮುಖ ತೋರಿಸುವು​ದಿ​ಲ್ಲ, ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಜನ​ತೆಗೆ ಭರ​ವಸೆ ನೀಡಿದ್ದರು ಎಂದು ಸ್ಮರಿಸಿದರು.

ಎರಡು ವರ್ಷ ಆಡಳಿತ ಮಾಡಿದಿರಿ. ನಂತರ ಬೊಮ್ಮಾಯಿ ಅವರಿಗೆ ಅಧಿ​ಕಾರ ಕೊಟ್ಟು ಹೋದರು. ಯಡಿ​ಯೂ​ರ​ಪ್ಪ​ನ​ವರೇ ಎಲ್ಲಿ ನಿಮ್ಮ ರಕ್ತ​ದಲ್ಲಿ ಬರೆ​ದ ಪತ್ರ? ಎಲ್ಲಿ ನಿಮ್ಮ 24 ಗಂಟೆ? ಸುಳ್ಳು ಭರ​ವ​ಸೆ​ಗಳ ಘೋಷಣೆಗಳನ್ನು ಮಾಡಿ ಜನರಿಗೆ ಮೋಸ ಮಾಡಿದ್ದೀರಿ. ರಾಜ್ಯದ ಅಭಿವೃದ್ಧಿ ಕೆಲಸದಲ್ಲಿ ದ್ರೋಹ ಮಾಡಿ, ಜನರ ಅವಕೃಪೆಗೆ ಪಾತ್ರವಾಗಿದ್ದೀರಿ, ಮುಂದಿನ ಚುನಾವಣೆಯಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Hubballi: ಮಹದಾಯಿ ಬಗ್ಗೆ ಮಾತಾಡಲು ಕಾಂಗ್ರೆಸ್‌ನವರಿಗೆ ನೈತಿಕತೆಯಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಮಹದಾಯಿ ಯೋಜ​ನೆಯ ವಿಚಾರವಾಗಿ ವಿಧಾನಸಭೆ, ಪರಿಷತ್ತಿನಲ್ಲಿ ಎಷ್ಟೇ ಮಾತಾನಾಡಿ​ದ​ರೂ ಪ್ರಯೋ​ಜನವಾಗಿ​ಲ್ಲ. ಅವರ ವಿಳಂಬ ದ್ರೋಹಕ್ಕೆ ಜನವರಿ 2ರಂದು ಹುಬ್ಬಳ್ಳಿ ನಗ​ರ​ದ​ಲ್ಲಿ ಬೃಹತ್‌ ಪ್ರತಿಭಟನೆ ಮಾಡಿ, ಬೃಹತ್‌ ರಾರ‍ಯಲಿ ಮಾಡುವ ಮೂಲಕ ಬಿಜೆಪಿಯ ಛಳಿ ಬಿಡಿಸಬೇಕು ಎಂದು ಕಾರ್ಯ​ಕ​ರ್ತ​ರಿಗೆ ಕರೆ ನೀಡಿದರು. ವಿಳಂಬ ದ್ರೋಹಕ್ಕೆ ಜನಾಕ್ರೋಶ ಇದೆ ಎಂದು ಬಿಜೆಪಿಗೆ ತೋರಿಸುತ್ತೇವೆ. ರಾರ‍ಯಲಿ ಮೂಲಕ ಪಕ್ಷದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದ​ರು.

ಅಸಹನೀಯ ಸ್ಥಿತಿಯಲ್ಲಿ ಜನತೆ:

ಬಿಜೆಪಿಯವರು ಧರ್ಮದ ಹೆಸರಲ್ಲಿ ಜನರನ್ನು ಅಸಹನೀಯ ಸ್ಥಿತಿಗೆ ತಂದಿದ್ದಾರೆ. ಬಡ​ವರ ಬದ​ಕನ್ನು ಬೀದಿಗೆ ತಂದರು. ಬರೀ ಸುಳ್ಳು ಭರ​ವ​ಸೆ​ಗ​ಳನ್ನು ನೀಡುತ್ತ ಜನ​ರಿಗೆ ಮೋಸ ಮಾಡಿ​ದರು. ನರೇಗಾ ಮುಖಾಂತರ ಸ್ಮಶಾನ, ಪಂಚಾಯ್ತಿ, ದನದಕೊಟ್ಟಿಗೆ, ಸಮುದಾಯ ಭವನ ನಿರ್ಮಾಣದಂತ​ಹ 21 ಕಾರ್ಯಕ್ರಮಗಳ​ನ್ನು ಹಾಕಿಕೊಂಡಿದ್ದೆವು. ಆದರೆ, ಬಿಜೆ​ಪಿ ಅವನ್ನೆಲ್ಲ ನಿಲ್ಲಿಸಿದೆ. ಬಿಜೆ​ಪಿಗೆ ತಕ್ಕ ಪಾಠ ಕಲಿ​ಸ​ಬೇ​ಕು. ಈ ಬಾರಿ ಗದಗ 4 ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ, ನಾಯಕರಿಗೆ ಕರೆ ನೀಡಿದರು.

Mahadayi water dispute: ಮಹದಾಯಿ ಹೋರಾಟಗಾರರಿಗೆ ತಪ್ಪದ ಕೋರ್ಟ್ ಅಲೆದಾಟ

ಈ ಸಂದ​ರ್ಭ​ದಲ್ಲಿ ಕೆಪಿ​ಸಿಸಿ ಕಾರ್ಯಾ​ಧ್ಯ​ಕ್ಷ, ವಿಪ ಸದಸ್ಯ ಸಲೀಂ ಅಹ್ಮದ, ಮಾಜಿ ಶಾಸಕ ಜಿ.ಎ​ಸ್‌. ​ಪಾ​ಟೀಲ, ಮಾಜಿ ಶಾಸಕ ಬಿ.ಆ​ರ್‌.​ ಯಾ​ವ​ಗಲ್‌, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರ​ಡಗಿ ಸೇರಿ​ದಂತೆ ಪಕ್ಷದ ಮುಖಂಡರು, ಕಾರ್ಯ​ಕ​ರ್ತರು, ಕಾಂಗ್ರೆಸ್‌ ವಿವಿಧ ಘಟ​ಕದ ಪದಾ​ಧಿ​ಕಾ​ರಿ​ಗಳು, ಅಭಿ​ಮಾ​ನಿ​ಗಳು ಇದ್ದರು.

Follow Us:
Download App:
  • android
  • ios