ಹೊಸದಾಗಿ ಬಿಡುಗಡೆಯಾದ ಐದು ವೃತ್ತಗಳ ನಿರ್ಮಾಣ ಪಟ್ಟಿಯಲ್ಲಿ ಸಾವರ್ಕರ್ ವೃತ್ತ ಕೈ ಬಿಟ್ಟ ಉಡುಪಿ ನಗರಸಭೆ!
ಉಡುಪಿಯಲ್ಲಿ ಆರಂಭವಾಗಿದ್ದ ಸಾವರ್ಕರ್ ಸರ್ಕಲ್ ವಿವಾದ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ಆಡಳಿತದ ಉಡುಪಿ ನಗರಸಭೆ ಹೊಸದಾಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನೂತನ ಐದು ಸರ್ಕಲ್ ಗಳನ್ನು ಘೋಷಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಹಿಂದೂ ಸಂಘಟನೆಗಳ ಬಹು ಬೇಡಿಕೆಯ ಸಾವರ್ಕರ್ ಸರ್ಕಲ್ ನ ಪತ್ತೆಯೇ ಇಲ್ಲ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ನ.24): ಉಡುಪಿಯಲ್ಲಿ ಆರಂಭವಾಗಿದ್ದ ಸಾವರ್ಕರ್ ಸರ್ಕಲ್ ವಿವಾದ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ಆಡಳಿತದ ಉಡುಪಿ ನಗರಸಭೆ ಹೊಸದಾಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನೂತನ ಐದು ಸರ್ಕಲ್ ಗಳನ್ನು ಘೋಷಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಹಿಂದೂ ಸಂಘಟನೆಗಳ ಬಹು ಬೇಡಿಕೆಯ ಸಾವರ್ಕರ್ ಸರ್ಕಲ್ ನ ಪತ್ತೆಯೇ ಇಲ್ಲ! ಉಡುಪಿಯಲ್ಲಿ ತಳಮಟ್ಟದಿಂದ ಸಂಸದ ಸ್ಥಾನದವರೆಗೂ ಬಿಜೆಪಿಯ ಆಡಳಿತವಿದೆ. ಇತ್ತೀಚಿಗೆ ಹಿಂದೂ ಸಂಘಟನೆಗಳು ಹಾಗೂ ಸ್ವತಹ ಬಿಜೆಪಿ ಯುವ ಮೋರ್ಚಾ ಸಾವರ್ಕರ್ ಸರ್ಕಲ್ ಗೆ ಬೇಡಿಕೆ ಇಟ್ಟು ಹೋರಾಟ ನಡೆಸಿತ್ತು. ನಗರದ ಬ್ರಹ್ಮಗಿರಿಯಲ್ಲಿ ಸದ್ಯ ಅಶ್ವಿನ್ ಶೆಟ್ಟಿ ವೃತ್ತ ಎಂದು ಕರೆಸಿಕೊಳ್ಳುವ ಸರ್ಕಲ್ ಗೆ ಸಾವರ್ಕರ್ ವೃತ್ತ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯ ಮಾಡಲಾಗಿತ್ತು. ಆದರೆ ನಗರಸಭೆ ಈ ಸರ್ಕಲ್ ಗೆ ಆಸ್ಕರ್ ಫರ್ನಾಂಡಿಸ್ ವೃತ್ತ ಎಂದು ಮರುನಾಮಕರಣ ಮಾಡಿ ಆದೇಶ ಮಾಡಿದೆ. ಸಾವರ್ಕರ್ ಸರ್ಕಲ್ ಗಾಗಿ ಹೋರಾಟ ಆರಂಭವಾಗುವ ಮುನ್ನವೇ ದಿವಂಗತ ಕಾಂಗ್ರೆಸ್ ನಾಯಕ ಆಸ್ಕರ್ ಹೆಸರನ್ನು ಈ ವೃತ್ತಕ್ಕೆ ಇರಿಸುವುದೆಂದು ತೀರ್ಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಬೇಡಿಕೆ ಈ ಬಾರಿ ಈಡೇರಿಲ್ಲ.
ಉಡುಪಿಯಲ್ಲಿ ಇದೀಗ ಐದು ಹೊಸ ವೃತ್ತಗಳನ್ನು ಘೋಷಿಸಲಾಗಿದೆ. ಕೋಟಿ ಚೆನ್ನಯ್ಯ ವೃತ್ತ, ಮಧ್ವಾಚಾರ್ಯ ವ್ರತ, ವಾದಿರಾಜ ವೃತ್ತ, ಶ್ರೀರಾಮ ವೃತ್ತ ಹಾಗೂ ಆಸ್ಕರ್ ಫರ್ನಾಂಡಿಸ್ ವೃತ್ತ. ನಗರದ ವಿವಿಧ ಭಾಗಗಳಲ್ಲಿ ನೂತನ ಸರ್ಕಲ್ ಗಳಿಗೆ ಹೊಸ ಹೆಸರು ಇಡಲಾಗಿದೆ.
Udupi: ಸಾವರ್ಕರ್ ವರ್ಸಸ್ ಹಾಜಿ ಅಬ್ದುಲ್ಲಾ ಸಾಹೇಬ್: ನಗರಸಭೆಯ ನಿರ್ಧಾರದತ್ತ ಎಲ್ಲರ ಚಿತ್ತ
ಹಿಂದೂ ಸಂಘಟನೆಗಳು ಬ್ರಹ್ಮಗಿರಿ ಸರ್ಕಲ್ ಗೆ ಸಾವರ್ಕರ್ ಹೆಸರಿಡಬೇಕೆಂದು ಒತ್ತಾಯ ಮಾಡಿದಾಗ ಉಡುಪಿ ಶಾಸಕ ರಘುಪತಿ ಭಟ್ ಈ ಪ್ರಸ್ತಾವನೆಯನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ್ದರು. ಬ್ರಹ್ಮಗಿರಿ ವೃತ್ತಕ್ಕೆ ಮೊದಲೇ ಆಸ್ಕರ್ ಫರ್ನಾಂಡಿಸ್ ಹೆಸರು ಇರಿಸುವ ತೀರ್ಮಾನವಾಗಿರುವ ಕಾರಣ, ಹೆಚ್ಚು ಜನನಿವಿಡ ಪ್ರದೇಶವಾದ ಹಳೆ ತಾಲೂಕಾಫೀಸ್ ಕಚೇರಿಯ ಸಮೀಪ ಸಾವರ್ಕರ್ ವೃತ್ತ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದರು. ಇದೀಗ ಮತ್ತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್, ಶೀಘ್ರವೇ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಉಡುಪಿ: ಸಾವರ್ಕರ್ ಸರ್ಕಲ್ ನಿರ್ಮಾಣ, ನಗರಸಭೆಯಿಂದ ಮಹತ್ವದ ನಿರ್ಣಯ
ನಗರದ ಹಳೆ ತಾಲೂಕ್ ಆಫೀಸ್ ಕಚೇರಿ ಬಳಿ ಸಾವರ್ಕರ್ ವೃತ್ತ ನಿರ್ಮಿಸುವ ಭರವಸೆ ಕೊಟ್ಟಿದ್ದಾರೆ. ಜೊತೆಗೆ ಸಂಗೊಳ್ಳಿ ರಾಯಣ್ಣ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಹೆಸರಿನ ಹೊಸ ಮತ್ತೆರಡು ವೃತ್ತಗಳು ಘೋಷಣೆಯಾಗಲಿವೆ ಎಂದು ಭರವಸೆಯಿತ್ತಿದ್ದಾರೆ. ತಮ್ಮ ಬೇಡಿಕೆಗೆ ಸ್ಪಂದಿಸದ ಸ್ಥಳೀಯ ಆಡಳಿತದ ಬಗ್ಗೆ ಹಿಂದೂ ಸಂಘಟನೆಗಳು ಯಾವ ನಿಲುವು ತಳಿಯುತ್ತೆ ಕಾದು ನೋಡಬೇಕು