ಕೊಡಗು ಡಿಸಿ ಅವಹೇಳನ: ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ ವಿಚಾರಣೆ

ಕೊಡಗು ಜಿಲ್ಲಾಧಿಕಾರಿಅನೀಸ್ ಕಣ್ಮಣಿ ಜಾಯ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಸಂಬಂಧ 50ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿರುದ್ಧ ಕೊಡವ ಹಾಗೂ ಗೌಡ ಸಮುದಾಯದ ವಿರೋಧಿ, ಮಲೆಯಾಳಿಗಳ ಪರ ಎಂಬ ಫೋಟೋ ಸಂದೇಶ ಹರಿದಾಡುತ್ತಿದ್ದು ಈ ಸಂಬಂಧ ಜಿಲ್ಲಾಧಿಕಾರಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

whatsapp rumors about Smt.Annies Kanmani Joy police inquires 50 people

ಮಡಿಕೇರಿ(ಸೆ.23): ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ರವಾನಿಸಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಯುತ್ತಿದ್ದು, ವಿವಿಧ ವ್ಯಾಟ್ಸಪ್ ಗ್ರೂಪ್‌ಗಳ ಅಡ್ಮಿನ್ ಹಾಗೂ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ವಿರುದ್ಧ ಕೊಡವ ಹಾಗೂ ಗೌಡ ಸಮುದಾಯದ ವಿರೋಧಿ, ಮಲೆಯಾಳಿಗಳ ಪರ ಎಂಬ ಫೋಟೋ ಸಂದೇಶ ಹರಿದಾಡುತ್ತಿದ್ದು ಈ ಸಂಬಂಧ ಜಿಲ್ಲಾಧಿಕಾರಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಬಿರುಸಿನ ತನಿಖೆ ಕೈಗೊಂಡಿದ್ದಾರೆ.

ದಶಕದ ಬಳಿಕ ಸಿನಿ ರಸಿಕರಿಗೆ ಮನರಂಜನೆ ನೀಡಲು ಸಜ್ಜಾದ ಚಿತ್ರ ಮಂದಿರ

ಸುಮಾರು 50 ಮಂದಿಯನ್ನು ಈಗಾಗಲೇ ವಿಚಾರಣೆ ನಡೆಸಿದ್ದು ನೈಜ್ಯ ಆರೋಪಿತನಿಗಾಗಿ ತನಿಖೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿವಿಧ ವ್ಯಾಟ್ಸಪ್ ಗ್ರೂಪ್ ಗಳ 10 ಆಡ್ಮಿನ್, 40 ಹೆಚ್ಚು ಸದಸ್ಯರ ವಿಚಾರಣೆಯಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Latest Videos
Follow Us:
Download App:
  • android
  • ios