ಕೊರೋನಾ ಅಂತ್ಯ ಯಾವಾಗ? ಇಲ್ಲಿದೆ ಉತ್ತರ
ಒಂದು ಅಂದಾಜಿನ ಪ್ರಕಾರ ಪ್ರತಿದಿನಕ್ಕೆ 1300ರಿಂದ 1500 ಸಂಖ್ಯೆಯಲ್ಲಿ ಕಡಿಮೆಯಾದರೆ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮಧ್ಯದಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ರೋಗಿಗಳ ಸಂಖ್ಯೆ ಶೂನ್ಯದ ಹತ್ತಿರ ಬರಬಹುದು ಎಂದ ಖ್ಯಾತ ಹಿರಿಯ ವೈದ್ಯ ಡಾ. ಎ.ಎ.ಪಾಂಗಿ
ಅಥಣಿ(ಅ.25): ಕೊರೋನಾ ಯಾವಾಗ ಅಂತ್ಯಗೊಳ್ಳುತ್ತದೆ ಎಂದು ಹೇಳುವುದು ಅಷ್ಟು ಸುಲಭವಲ್ಲ. ಆದರೂ ಸದ್ಯದ ಕೆಲ ಅಂಕಿ ಅಂಶಗಳನ್ನು ಗಮನಿಸಿದರೆ ಆ ಬಗ್ಗೆ ತಿಳಿಯುತ್ತದೆ ಅಥಣಿಯ ಖ್ಯಾತ ಹಿರಿಯ ವೈದ್ಯ ಡಾ. ಎ.ಎ.ಪಾಂಗಿ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ತಿಂಗಳಿನ ಮಧ್ಯಭಾಗದಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷದಷ್ಟು ಜನರಲ್ಲಿ ರೋಗ ಖಚಿತವಾಗಿತ್ತು. ಅದು ದೇಶದ ಗರಿಷ್ಠ ಮಟ್ಟವಾಗಿದೆ. ಅಂದಿನಿಂದ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ದಿನ ರೋಗಿಗಳ ಸಂಖ್ಯೆ ಸುಮಾರು 55000, ಒಂದು ಅಂದಾಜಿನ ಪ್ರಕಾರ ಪ್ರತಿದಿನಕ್ಕೆ 1300ರಿಂದ 1500 ಸಂಖ್ಯೆಯಲ್ಲಿ ಕಡಿಮೆಯಾದರೆ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮಧ್ಯದಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ರೋಗಿಗಳ ಸಂಖ್ಯೆ ಶೂನ್ಯದ ಹತ್ತಿರ ಬರಬಹುದು ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ಕಡಿಮೆಯಾಗ್ತಿದೆ ಕೊರೋನಾ ಸೋಂಕು
ಈಗ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬರುತ್ತಿದೆ. ಇದಕ್ಕೆ ಹಲವು ಕಾರಣಗಳಿಗೆ ಎಂದು ಖ್ಯಾತ ಹಿರಿಯ ವೈದ್ಯ ಡಾ. ಎ.ಎ.ಪಾಂಗಿ ತಿಳಿಸಿದ್ದಾರೆ.